ತಾನೇ ರಕ್ಷಿಸಿದ್ದ ನಾಯಿ ಕಚ್ಚಿ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಸಾವು – ಕೊನೆಯ ದಿನಗಳಲ್ಲಿ ನರಳಿ ನರಳಿ ಯಾತನೆ
ಉತ್ತರ ಪ್ರದೇಶದ ಆಟಗಾರನೊಬ್ಬ ನಾಯಿ ಕಡಿತದಿಂದ ‘ರೇಬೀಸ್’ ಗೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಆಟಗಾರನ ನಿರ್ಲಕ್ಷ್ಯದಿಂದಾಗಿ ರೇಬೀಸ್ ಲಸಿಕೆ ಪಡೆಯಲಿಲ್ಲ. ಮೂರು ತಿಂಗಳ ಹಿಂದೆ, ನಾಯಿಯೊಂದು ಆಟಗಾರನಿಗೆ ಕಚ್ಚಿತ್ತು. ನಾಯಿ ಕಡಿತವನ್ನು ಸಣ್ಣ ಗಾಯವೆಂದು ಪರಿಗಣಿಸಿ ಬ್ರಿಜೇಶ್ ಸೋಲಂಕಿ ನಿರ್ಲಕ್ಷಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಬ್ರಿಜೇಶ್ ಅವರ ವೀಡಿಯೊ ಕೂಡ ಕಾಣಿಸಿಕೊಂಡಿದ್ದು, ಅದರಲ್ಲಿ ಅವರು ರೇಬೀಸ್ ರೋಗದಿಂದ ನರಳುತ್ತಿರುವುದು ಕಂಡುಬಂದಿದೆ. ಕಬಡ್ಡಿ ಆಟಗಾರನ ತರಬೇತುದಾರ ಪ್ರವೀಣ್ ಕುಮಾರ್, ನಾಯಿ ಕಚ್ಚಿದ್ದನ್ನು ಬ್ರಿಜೇಶ್ ಸಾಮಾನ್ಯ ಗಾಯವೆಂದು ಪರಿಗಣಿಸಿದ್ದರು. ಕಚ್ಚಿದ ಗಾಯವು ಚಿಕ್ಕದಾಗಿತ್ತು. … Read more