ನನ್ನ ಮನೆ ಹಾಳು ಮಾಡಿದ್ದೀರಿ, ಸಾಲ ಮಾಡಿದ್ದೇನೆ: ವೇದಿಕೆ ಮೇಲೆ ಗಳಗಳನೇ ಅತ್ತ ಕಾಂಗ್ರೆಸ್‌ ಶಾಸಕ

ನನ್ನ ಕುಟುಂಬ ಬೀದಿಗೆ ತಂದಿದ್ದೀರಿ. ದಿನ ನಿತ್ಯ ನ್ಯಾಯಾಲಯಕ್ಕೆ ಆಲೆಯುವಂತೆ ಮಾಡಿದ್ದೀರಿ. ನನ್ನ ಮನೆ ಹಾಳು ಮಾಡಿದ್ದೀರಿ. ಸಾಲ ಮಾಡಿದ್ದೇನೆ ಎಂದು ಶೃಂಗೇರಿ ಶಾಸಕ ಶಾಸಕ ಟಿಡಿ ರಾಜೇಗೌಡ (sringeri congress mla TD Rajegowda) ಬಹಿರಂಗ ಕಾರ್ಯಕ್ರಮದಲ್ಲೇ ಗಳಗಳನೇ ಅತ್ತಿರುವ ಪ್ರಸಂಗ ನಡೆದಿದೆ. ಬಾಳೆಹೊನ್ನೂರಿನಲ್ಲಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನಿನ್ನೆ (ಮಾರ್ಚ್ 02) ಹಮ್ಮಿಕೊಂಡಿದ್ದ ಶೃಂಗೇರಿ ಕ್ಷೇತ್ರದ ರೈತರ, ಕಾರ್ಮಿಕರ ಮತ್ತು ನೆಲವಾಸಿಗಳ ಸಮಸ್ಯೆ ಕುರಿತು ನಡೆದ ಜನಾಂದೋಲನ ಸಮಾವೇಶದಲ್ಲಿ ಶಾಸಕ ಟಿಡಿ ರಾಜೇಗೌಡ ಅವರು … Read more

ಬಿಎಂಟಿಸಿ ಬಸ್ ಅಡ್ಡಗಟ್ಟಿ ಮಿಡಲ್ ಫಿಂಗರ್ ತೋರಿಸಿದ ಯುವಕ ; ಪೊಲೀಸರು ಕೊಟ್ರು ನೋಡಿ ಟ್ವಿಸ್ಟೆಡ್ ಶಾಕ್.!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಮೇಲಿನ ಆಕ್ರೋಶ ಅಥವಾ ‘ರೋಡ್ ರೇಜ್’ (Road Rage) ಪ್ರಕರಣಗಳು ದಿನೇ ದಿನೇ ಮಿತಿಮೀರುತ್ತಿವೆ. ಇತ್ತೀಚೆಗಷ್ಟೇ ಇಂದಿರಾನಗರದಲ್ಲಿ ಮದ್ಯವ್ಯಸನಿಯೊಬ್ಬ ಬಿಎಂಟಿಸಿ ಬಸ್ ಚಾಲಕನಿಗೆ ಅಡ್ಡಿಪಡಿಸಿ, ಅಸಭ್ಯವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಬೆಂಗಳೂರು ನಗರ ಸಂಚಾರಿ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಿ ಬಿಸಿ ಮುಟ್ಟಿಸಿದ್ದಾರೆ. ಘಟನೆಯಲ್ಲಿ ನಡೆದಿದ್ದೇನು? ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಇಂದಿರಾನಗರದ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ … Read more

ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ : 4 ಲಕ್ಷ ಕೇಳಿ 1 ಲಕ್ಷ ವಸೂಲಿ ವೇಳೆ ರೆಡ್‌ಹ್ಯಾಂಡಾಗಿ ಸೆರೆ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಎ.ಕೆ.ನಾಗೇಂದ್ರಪ್ಪ ಹಾಗೂ ಮಧ್ಯವರ್ತಿಯೊಬ್ಬರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 1 ಲಕ್ಷ ರೂ. ಪಡೆಯುವಾಗ ರೆಡ್‌ ಹ್ಯಾಂಡ್ ಆಗಿ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಲಂಚ ಪಡೆಯುವ ವೇಳೆ ರೆಡ್‌ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯುವ ವೇಳೆ ಬಿಇಒ ಹಾಗೂ ಮಧ್ಯವರ್ತಿ ಇಬಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಬರೋಬ್ಬರಿ ಒಂದು … Read more

ಅಪ್ರಾಪ್ತ ಬಾಲಕಿಯ ಹೇಳಿಕೆ ದಾಖಲು – ಮುತ್ಯಾ ಕೈಗೆ ಬೀಳುತ್ತಾ ಬೇಡಿ.? ಆರೋಪ ತಳ್ಳಿ ಹಾಕಿದ್ದ ಮುತ್ಯಾ..

ಯಾದಗಿರಿಯ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಶಹಾಪುರ ಜೆಎಂಸಿ ನ್ಯಾಯಾಲಯದಲ್ಲಿ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ನ್ಯಾಯಾಧೀಶರ ಎದುರು ದಾಖಲಿಸಲಾಗಿದೆ. ಕಾನೂನು ಪ್ರಕಾರ, ಬಾಲಕಿಯ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗೆ ನೀಡಲಾಗುತ್ತದೆ. ಈ ಹೇಳಿಕೆ ಪ್ರಕರಣದ ಮುಂದಿನ ತನಿಖೆಯಲ್ಲಿ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ಮುತ್ಯಾ ಅವರ ಮುಂದಿನ ಕಾನೂನು ಹೋರಾಟದಲ್ಲಿ ಈ ಹೇಳಿಕೆ ನಿರ್ಣಾಯಕವಾಗುವ ಸಾಧ್ಯತೆ ಇದೆ. ಇದೀಗ ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನೊಂದೆಡೆ ಮುತ್ಯಾ ಅವರ … Read more

ಮಗ ನಿಖಿಲ್‌ಗಾಗಿ ಪ್ರಜ್ವಲ್ ರೇವಣ್ಣನ ವಿಡಿಯೋ ರಿಲೀಸ್ ಮಾಡಿಸಿದ್ದೇ ಕುಮಾರಸ್ವಾಮಿ: ಕಾಂಗ್ರೆಸ್ ಶಾಸಕ

ಪ್ರಜ್ವಲ್ ಜೈಲಿಗೆ ಹೋಗಲು ನೂರಕ್ಕೆ ನೂರು ಕುಮಾರಸ್ವಾಮಿ ಕಾರಣ. ಸಿಡಿ ಬಿಡಿಸಿದ್ದೆ ಕುಮಾರಸ್ವಾಮಿ. ಎಂತೆಂತೊರೊ ಜೈಲಿಂದ ಹೊರ ಬಂದಿದ್ದಾರೆ. ಮಾಜಿ ಪ್ರಧಾನಿ ಮನಸ್ಸು ಮಾಡಿದ್ರೆ ಬಿಡಿಸಬಹುದಿತ್ತು. ಷಡ್ಯಂತ್ರ ಮಾಡಿ ಪ್ರಜ್ವ‌ಲ್‌ನ ಜೈಲಿಗೆ ಹಾಕಿಸಿದ್ದಾರೆ ಅಣ್ಣನ ಮಗನ (ಪ್ರಜ್ವಲ್ ರೇವಣ್ಣ) ಬೆಳವಣಿಗೆಯನ್ನು ಸಹಿಸಿಕೊಳ್ಳದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ನಮ್ಮಂತ ಬಡವರ ಮಕ್ಕಳನ್ನ ಸಹಿಸಿಕೊಳ್ಳುತ್ತಾರಾ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಹೇಳಿದ್ದಾರೆ. ಮಗನನ್ನು ಬೆಳೆಸಲು ಅಣ್ಣನ ಪುತ್ರನನ್ನು ಜೈಲಿಗೆ ಹಾಕಿಸಿದ್ದಾರೆ ಅಂತ ಹೇಳಿದ್ದಾರೆ ಎಂದ್ರು. ತಮ್ಮ ಮಗ … Read more

ಹೂವು ಮಾರುತ್ತಿದ್ದ ಹುಡುಗಿ ಈಗ ನ್ಯಾಯಾಧೀಶೆ; ಆಟೋ ಚಾಲಕನ ಮಗಳು ಈಗ ಸಿವಿಲ್ ಜಡ್ಜ್ ಆದ ಕಥೆಯೇ ರೋಚಕ!

‘ಛಲವೊಂದಿದ್ದರೆ ಸಾಕು, ಬಡತನ ಸಾಧನೆಗೆ ಎಂದಿಗೂ ಅಡ್ಡಿಯಾಗದು’ ಎಂಬ ಮಾತಿಗೆ ಆನೇಕಲ್ ತಾಲ್ಲೂಕಿನ ಈ ಸಾಧಕಿ ಜೀವಂತ ಉದಾಹರಣೆಯಾಗಿದ್ದಾರೆ. ಹಗಲಿರುಳು ಆಟೋ ಓಡಿಸಿ ಮಗಳನ್ನು ಓದಿಸಿದ ತಂದೆ, ಮಾರುಕಟ್ಟೆಯಲ್ಲಿ ಹೂವು ಮಾರುತ್ತಾ ಮಗಳ ಕನಸಿಗೆ ನೀರೆರೆದ ತಾಯಿ – ಇಂದು ಇವರಿಬ್ಬರ ಶ್ರಮ ಸಾರ್ಥಕವಾಗಿದೆ. ಅವರ ಮುದ್ದಿನ ಮಗಳು ನಾಗಿಣಿ ಎಲ್. ಈಗ ರಾಜ್ಯದ ನೂತನ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ಇಡೀ ನಾಡೇ ಹೆಮ್ಮೆಪಡುವಂತೆ ಮಾಡಿದ್ದಾರೆ. ತಿರುಪಾಳ್ಯದ ‘ಮಾಣಿಕ್ಯ’ ನಾಗಿಣಿ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ … Read more

ಮೂವರೊಡನೆ ಚಕ್ಕಂದ ಆಡುತ್ತಿದ್ದ ಕಿರುತೆರೆ ನಟಿ – ಇಬ್ಬರಿಗಾಗಿ ಒಬ್ಬನ ಕೈಕಾಲು ಕಟ್ಟಿ ಹತ್ಯೆ!

ಬೆಂಗಳೂರಲ್ಲಿ ಪ್ರಿಯತಮನ ಪಾಲಿಗೆ ಪ್ರೇಯಸಿಯೇ ವಿಲನ್ ಆಗಿದ್ದಾಳೆ. ಕೈಕಾಲು ಕಟ್ಟಿ ಬಾಯಿಗೆ ಟೈಪ್ ಸುತ್ತಿ ಪ್ರಿಯಕರನ ಕೊಲೆ ಮಾಡಿದ್ದಾಳೆ. ಈ ಕೇಸ್ ಸಂಬಂಧ ಮಹಿಳೆಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಊರ್ವಶಿ ಅಲಿಯಾಸ್ ಸಿಂಧು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಹಾಸನ ಮೂಲದ ಪ್ರಿಯಕರ ಮೋಹನ ಕೃಷ್ಣ(29) ನನ್ನು ಇತ್ತೀಚೆಗೆ ಕೊಲೆ ಮಾಡಿದ್ದಳು. ಪ್ರಾಥಮಿಕ ವಿಚಾರಣೆಯಲ್ಲಿ ಕಿರುಕುಳ ನೀಡುತ್ತಿರುವುದಕ್ಕೆ ಪ್ರಿಯಕರನನ್ನು ಕೊಲೆ ಮಾಡಿರುವುದಾಗಿ ಊರ್ವಶಿ ಪೊಲೀಸರಿಗೆ ತಿಳಿಸಿದ್ದಾಳೆ. ಮೂರು ತಿಂಗಳ ಹಿಂದೆ ಬಾಗಲಗುಂಟೆಯ ವಿಜಯಲಕ್ಷ್ಮಿ ಬಡಾವಣೆಗೆ ಬಂದಿದ್ದ … Read more

ಕರಡಿ ದಾಳಿಗೆ ಕುರಿಗಾಹಿ ಓಬಣ್ಣ ಸಾವು; ರೊಚ್ಚಿಗೆದ್ದ ಜನರಿಂದ ದೊಣ್ಣೆಯ ಹೊಡೆತ ತಿಂದು ಪ್ರಾಣಬಿಟ್ಟ ಕರಡಿ.!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಮನುಷ್ಯ ಮತ್ತು ಪ್ರಾಣಿ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದೆ. ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿಯ ಮೇಲೆ ಕರಡಿಯೊಂದು ದಾಳಿ ನಡೆಸಿದ್ದು, ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕುರಿಗಾಹಿಯನ್ನು ಕೊಂದ ಕರಡಿಯನ್ನು ಬೆನ್ನಟ್ಟಿ ಹೊಡೆದು ಸಾಯಿಸಿರುವ ಘಟನೆ ನಡೆದಿದೆ. ಘಟನೆಯ ವಿವರ ಕೂಡ್ಲಿಗಿ ತಾಲೂಕಿನ ಹಲಸಾಗರ ಗ್ರಾಮದ ಓಬಣ್ಣ (30) ಎಂಬುವವರೇ ಕರಡಿ ದಾಳಿಗೆ ಬಲಿಯಾದ ದುರ್ದೈವಿ ಕುರಿಗಾಹಿ. ಎಂದಿನಂತೆ ಶನಿವಾರ ಬೆಳಿಗ್ಗೆ ಓಬಣ್ಣ ತಮ್ಮ … Read more

ವಿಶ್ವಕ್ಕೆ ಯುದ್ದದ ಭೀತಿ : ಜಾಗತಿಕ ನಾಯಕನ ದುರ್ಮರಣ : ನಿಜವಾಯ್ತು ಕೋಡಿಶ್ರೀಗಳ ಭವಿಷ್ಯವಾಣಿ.!

ರಾಜ್ಯ, ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಪ್ರಮುಖ ಘಟನೆಗಳು ನಡೆದರೂ, ಅದಕ್ಕೆ ಹಾಸನದ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯವನ್ನು ತಾಳೆ ಹಾಕುವುದು ಈಗಿನ ಸಂಪ್ರದಾಯವಾಗಿ ಬಿಟ್ಟಿದೆ. ಈಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಬೆಳವಣಿಗೆಗಳು ಶ್ರೀಗಳ ಭವಿಷ್ಯವಾಣಿಯನ್ನು ಮತ್ತೆ ಮುನ್ನೆಲೆಗೆ ತಂದಿವೆ. ಜಾಗತಿಕ ನಾಯಕನ ದುರ್ಮರಣ: ಶ್ರೀಗಳ ಭವಿಷ್ಯವಾಣಿ ಕೆಲವು ದಿನಗಳ ಹಿಂದೆ ಬೆಳಗಾವಿಯ ಭಕ್ತರ ಮನೆಯೊಂದರಲ್ಲಿ ಮಾತನಾಡಿದ್ದ ಕೋಡಿಶ್ರೀಗಳು, “ದೇಶ ದೇಶಗಳ ನಡುವೆ ಜಿದ್ದು … Read more

ಹೃದಯಾಘಾತವಲ್ಲ ಇದು ವ್ಯವಸ್ಥಿತ ಕೊಲೆ? ಪತ್ನಿಯ 3ನೇ ಮದುವೆಯಿಂದ ಬಯಲಾಯ್ತು ಪರಮೇಶ್ ಸಾವಿನ ರಹಸ್ಯ.!

ಜನವರಿ 30ರಂದು ಸಂಭವಿಸಿದ ಪರಮೇಶ್ ಎಂಬುವವರ ಸಾವು ಈಗ ಪೊಲೀಸ್ ತನಿಖೆಯ ಕೌತುಕಕ್ಕೆ ಕಾರಣವಾಗಿದೆ. ಮೊದಲಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಿ, ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದರೆ, ಪತಿ ಸತ್ತ ಕೇವಲ 20 ದಿನಕ್ಕೆ ಪತ್ನಿ ಮತ್ತೊಂದು ಮದುವೆಯಾಗಿರುವುದು ಈಗ ಅನುಮಾನಕ್ಕೆ ನಾಂದಿ ಹಾಡಿದೆ. ಬೆಂಗಳೂರಿನಲ್ಲಿ ಕಾರ್ ಚಾಲಕನಾಗಿದ್ದ ಪರಮೇಶ್ ಮತ್ತು ಆಶಾ ಪ್ರೀತಿಸಿ ಹತ್ತು ವರ್ಷಗಳ ಹಿಂದೆ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಪರಮೇಶ್‌ಗೆ ಆಶಾ ಎರಡನೇ ಹೆಂಡತಿಯಾಗಿದ್ದರೆ, ಆಶಾಗೆ ಪರಮೇಶ್ ಎರಡನೇ ಗಂಡನಾಗಿದ್ದರು. ಕಳೆದ … Read more