ದಾವಣಗೆರೆ ನವ ವಿವಾಹಿತನ ಆತ್ಮಹ*ತ್ಯೆಗೆ ಮೇಜರ್ ಟ್ವಿಸ್ಟ್; ಹೆಂಡತಿ ಬೇರೆಯವನೊಟ್ಟಿಗೆ ಹೋಗಿದ್ದೇ ಸಾವಿಗೆ ಕಾರಣವಾ?

ದಾವಣಗೆರೆ : ಕೇವಲ ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಹರೀಶ್ ಆತ್ಮ*ಹತ್ಯೆ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಡೆತ್‌ ನೋಟ್‌ನಲ್ಲಿ ತಮ್ಮ ಸಾವಿಗೆ ಕಾರಣವೇನು ಎನ್ನುವುದನ್ನು ಹರೀಶ್ ಎಂಬಾತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ದಾವಣಗೆರೆ ತಾಲೂಕಿನ ಗುಮ್ಮನೂರು ನಿವಾಸಿ 32 ವರ್ಷದ ಹರೀಶ್ ಕಳೆದ ಎರಡೂವರೆ ತಿಂಗಳ ಹಿಂದಷ್ಟೇ ಸರಸ್ವತಿ ಎಂಬುವವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಆ ಸಂತೋಷ ಹೆಚ್ಚು ಸಮಯ ಉಳಿಯಲೇ ಇಲ್ಲ. ಮದುವೆಯಾಗಿ ಕೇವಲ ಎರಡೂವರೆ ತಿಂಗಳಲ್ಲೇ ಹರೀಶ್‌, ತಮ್ಮ … Read more

ಧರ್ಮಸ್ಥಳ ಪಾರ್ಕ್ ನಲ್ಲಿ ನಾನು ಚಿಕನ್ ಬಿರಿಯಾನಿ ಹಾಗೂ ಕಬಾಬ್ ತಿಂದಿದ್ದೇನೆ – ಡಾಗ್ ಸತೀಶ್ ವಿವಾದಾತ್ಮಕ ಹೇಳಿಕೆ

ಬಿಗ್ ಬಾಸ್ ಸೀಸನ್ 12 ಸ್ಪರ್ಧಿ ಡಾಗ್ ಸತೀಶ್ ಇದೀಗ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಕಾಲೇಜು ದಿನಗಳಲ್ಲಿ ಧರ್ಮಸ್ಥಳ ಪಾರ್ಕ್ ನಲ್ಲಿ ನಾನ್ ವೆಜ್ ತಿಂದಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಡಾಲಿ ಧನಂಜಯ್ ಮಾಂಸಾಹಾರ ಸೇವನೆ ಕುರಿತು ಹೇಳಿಕೆ ನೀಡಿದ ಡಾಗ್ ಸತೀಶ್, ಯಾರು, ಯಾವ ದಿನ ಬೇಕಾದರು ಮಾಂಸಾಹಾರ ತಿನ್ನಬಹುದು. ನಾನು ವರ್ಷದ 365 ದಿನ ನಾನ್ ವೆಜ್ ತಿನ್ನುತ್ತೇನೆ. ಸೋಮವಾರನೂ ತಿನ್ನುತ್ತೇನೆ, ಇತರ ದಿನವೂ ತಿನ್ನುತ್ತೇನೆ. ಗಣೇಶ ಹಬ್ಬ, ಗೌರಿ ಹಬ್ಬ ಸೇರಿದಂತೆ … Read more

ಸರ್… ಹಾವಾಡಿಗರಿಗೆ ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಇಲ್ಲ : ನಟ ಕಿಶೋರ್

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ (AR Rahman) ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರೋಧ್ಯಮದಲ್ಲಿ ಕೋಮುಭಾವನೆ ಹೆಚ್ಚಾಗುತ್ತಿರುವ ಹಿನ್ನಲೆ ತಮಗೆ ಕೆಲಸದ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದೇ ವಿಚಾರವಾಗಿ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ ರೆಹಮಾನ್ ಗೆ ನಟ ಕಿಶೋರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಿಶೋರ್, ಅಸಂವೈಧಾನಿಕವಾದರೂ ಕೂಡ ಜಾತಿ, ಭಾಷೆ, ದೇಶ, ಧರ್ಮಗಳ ತಾರತಮ್ಯ ಮಾಡದ ಸಂತರು … Read more

ನಾಳೆ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದ ಅನಂತ್ ಸುಬ್ಬರಾವ್ ನಿಧನ, ಪ್ರತಿಭಟನೆ ಮುಂದೂಡಿಕೆ

ಕಾರ್ಮಿಕ ಹೋರಾಟ ಚಳುವಳಿ ಮೂಲಕ ರಾಜ್ಯದ ಕಾರ್ಮಿಕ ಮುಖಂಡನಾಗಿ ಬೆಳದ ಅನಂತ್ ಸುಬ್ಬರಾವ್ ನಿಧನರಾಗಿದ್ದಾರೆ. ನಾಳೆ ಸಾರಿಗೆ ನೌಕರರ ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದ ಅನಂತ್ ಸುಬ್ಬರಾವ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಜೆ 5 ಗಂಟೆಗೆ ಹೃದಯಾಘಾತದಿಂದ ಅಸ್ವಸ್ಥಗೊಂಡ ಅನಂತ್ ಸುಬ್ಬರಾವ್ ನಿಧನರಾಗಿದ್ದಾರೆ. ಮುಷ್ಕರಕ್ಕೆ ಭಾರಿ ತಯಾರಿ ಮಾಡಿದ್ದ ಅನಂತ್ ಸುಬ್ಬರಾವ್ ಸಾರಿಗೆ ನೌಕರರ ಬೇಡಿಕೆ ಸಮಸ್ಯೆಗಳಿಗೆ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದ ಅನಂತ್ ಸುಬ್ಬರಾವ್ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಗಮನಸೆಳೆದಿದ್ದರು. ಪ್ರಮುಖವಾಗಿ ಎಸ್ಮಾ ಜಾರಿಗೆ ಭಾರಿ … Read more

ಅವನೇ ಬೇಕು ಅಂತ ಪ್ರೀತಿಸಿ ಮದುವೆಯಾದವಳು ಇಂದು ಆತ್ಮಹತ್ಯೆ – ಆಸ್ಪತ್ರೆಯಲ್ಲಿ ಸಾವು-ಬದುಕಿನ ಜೊತೆ ಗಂಡನ ಹೋರಾಟ

ಅವನೇ ಬೇಕು ಅಂತ ಪ್ರೀತಿಸಿ ಮದುವೆಯಾದವಳು ಇಂದು ಹೆಣವಾಗಿ ಮಸಣ ಸೇರಿದ್ದಾಳೆ. ಇತ್ತ ಏನಾದ್ರೂ ಒಟ್ಟಿಗೆ ಬದುಕೋಣ ಅಂತ ಯುವತಿಗೆ ತಾಳಿ ಕಟ್ಟಿದವನು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿದ್ದಾನೆ. ಈ ಜೋಡಿ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದವರು ಯಾರು.? ಗಂಡ-ಹೆಂಡ್ತಿ ನಡುವಿನ ಜಗಳಕ್ಕೆ ಕೂಸು ಬಡವಾಯ್ತು. ಪತಿ-ಪತ್ನಿ ಕಲಹಕ್ಕೆ ಬಲಿಯಾಯ್ತ ಬದುಕು!? ಸಂಸಾರದಲ್ಲಿ ಜಗಳ ಬರುತ್ತೆ, ಹೋಗುತ್ತೆ ಅಂತಾರೆ. ಆದ್ರೆ ಈ ಕಲಹ ಸಾವಿನಲ್ಲಿ ಅಂತ್ಯ ಕಾಣೋದೆ ದುರಂತ. ಕಳೆದ ಐದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ … Read more

ರಾಜ್ಯ ಸರ್ಕಾರದ ಅನುದಾನಿತ ದಿನದಿಂದಲೇ ಶಿಕ್ಷಕರು `ವೇತನ’ಕ್ಕೆ ಅರ್ಹ : ಹೈಕೋರ್ಟ್ ಮಹತ್ವದ ತೀರ್ಪು

ರಾಜ್ಯ ಸರ್ಕಾರದ ಅನುದಾನಕ್ಕೆ ಒಳಪಟ್ಟ ಶಾಲಾ ಶಿಕ್ಷಕರಿಗೆ ಹೈಕೋರ್ಟ್ ಸಿಹಿಸುದ್ದಿ ನೀಡಿದ್ದು, ಅನುದಾನಿತ ಶಾಲೆಯು ಸರ್ಕಾರದ ಅನುದಾನಕ್ಕೆ ಒಳಪಟ್ಟ ದಿನದಿಂದಲೇ ಪೂರ್ವಾನ್ವಯವಾಗುವಂತೆ ಶಿಕ್ಷಕರಿಗೆ ವೇತನ ಸೌಲಭ್ಯ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಾಜ್ಯ ಸರ್ಕಾರ 2011ರಲ್ಲಿ ಹೊರಡಿಸಿದ್ದ ಆದೇಶದ ಅನ್ವಯ ಅರ್ಜಿದಾರ ಶಿಕ್ಷಕರು ಶಾಲೆಯು ಅನುದಾನಕ್ಕೆ ಒಳಪಟ್ಟ ದಿನದಿಂದಲೇ ವೇತನಕ್ಕೆ ಅರ್ಹರಿದ್ದಾರೆ ಎಂದು ತೀರ್ಪು ನೀಡಿದೆ. ಪ್ರಕರಣದ ಹಿನ್ನೆಲೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೆಂಪವಾಡ ಗಜಾನನ ಎಜುಕೇಶನಲ್ ಸೊಸೈಟಿ ನ್ಯೂ ಹೈಸ್ಕೂಲ್‌ನ ಕನ್ನಡ … Read more

ಮೊದಲ ತಿಂಗಳಲ್ಲೇ ನಿಜವಾಯ್ತಾ ಕೋಡಿಶ್ರೀ ಭವಿಷ್ಯ? ಒಬ್ಬ ‘ಮಹಾ’ ನಾಯಕ ಸಾವು

ಮಹಾರಾಷ್ಟ್ರದ ಬಾರಾಮತಿ ಬಳಿ ಖಾಸಗಿ ವಿಮಾನ ಅಪಘಾತದಲ್ಲಿ ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ (Ajit Pawar Plane Crash) ಅಜಿತ್ ಪವಾರ್ ನಿಧನರಾಗಿದ್ದಾರೆ. ಲ್ಯಾಂಡಿಂಗ್ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಈ ವಿಮಾನ ದುರಂತ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಒಂದೆಡೆ ಅಹಮದಾಬಾದ್ ಭೀಕರ ವಿಮಾನ ದುರಂತ ಸಂಭವಿಸಿ ವರ್ಷವಾಗುವ ಮೊದಲೇ ಇಂತಹ ಮತ್ತೊಂದು ದುರ್ಘಟನೆ ಸಂಭವಿಸಿರೋದು ಭಯ ಹುಟ್ಟಿಸಿದರೆ, ಮತ್ತೊಂದೆಡೆ ವಿಮಾನ ಸುರಕ್ಷತೆಗಳ ಬಗ್ಗೆ ದೇಶದ … Read more

ಶಿವಮೊಗ್ಗದ ಡಾ. ಪ್ರಜ್ಞಾ ಧಾರವಾಡ ಡಿಮ್ಹಾನ್ಸ್ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣು; ಪಿಜಿಗೆ ಸೇರಿ 2 ವಾರದಲ್ಲಿ ಸಾವು!

ಶೈಕ್ಷಣಿಕ ನಗರಿ ಧಾರವಾಡದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ. ನಗರದ ಪ್ರತಿಷ್ಠಿತ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ (DIMHANS) ಹಾಸ್ಟೆಲ್‌ನಲ್ಲಿ ವೈದ್ಯಕೀಯ ಪಿಜಿ ವಿದ್ಯಾರ್ಥಿನಿಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ವಿವರ ಶಿವಮೊಗ್ಗ ಮೂಲದ ಡಾ. ಪ್ರಜ್ಞಾ ಪಾಲೇಗರ್ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮೊದಲ ವರ್ಷದ ಸೈಕಿಯಾಟ್ರಿಕ್ (ಮನೋವೈದ್ಯಶಾಸ್ತ್ರ) ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ಕೇವಲ ಎರಡು ವಾರಗಳ ಹಿಂದಷ್ಟೇ ಇವರು ಈ ಸಂಸ್ಥೆಗೆ ಸೇರ್ಪಡೆಯಾಗಿದ್ದರು ಎಂದು … Read more

Arecanut Price : ಇಂದಿನ ಅಡಿಕೆ ಧಾರಣೆ – 28 ಜನವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆ ಧಾರಣೆ – ಕರ್ನಾಟಕ ಮಾರುಕಟ್ಟೆ ಅಡಿಕೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಪುತ್ತೂರು ಕೋಕಾ ₹35,500 ₹28,500 ಸಾಗರ ಬಿಳೆಗೋಟು ₹36,025 ₹30,666 ಶಿರಸಿ ಬಿಳೆಗೋಟು ₹35,499 ₹32,406 ದಾವಣಗೆರೆ ಚುರು ₹9,540 ₹8,300 ಕೆ.ಆರ್ ಪೇಟೆ ಸಿಪ್ಪೆಗೋಟು ₹15,200 ₹15,200 ಸಾಗರ ಕೆಂಪುಗೋಟು ₹38,599 ₹37,899 ಶಿರಸಿ ಚಾಲಿ ₹51,411 ₹48,708 ಶಿರಸಿ ಕೆಂಪುಗೋಟು ₹38,691 ₹35,591 ಸುಳ್ಯ ಕೋಕಾ ₹34,000 ₹28,000 ಚನ್ನಗಿರಿ ರಾಶಿ ₹56,899 ₹54,053 ಶಿರಸಿ ಬೆಟ್ಟೆ … Read more

ಗಾಳಿಪಟದ ಮಾಂಜಾ ದಾರಕ್ಕೆ ಮತ್ತೊಂದು ಬಲಿ : ಕುತ್ತಿಗೆ ಕಟ್ ಆಗಿ `LKG’ ಬಾಲಕಿ ಸಾವು.!

ತೆಲಂಗಾಣದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಬೈಕ್ ನಲ್ಲಿ ಹೋಗುವಾಗಲೇ ಕುತ್ತಿಗೆಗೆ ಗಾಳಿಪಟದ ದಾರ ಸಿಲುಕಿ 4 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು, ಚೈನೀಸ್ ಮಾಂಜಾವೊಂದು ಜೀವ ಕಳೆದುಕೊಂಡಿದೆ. ಕುಕಟ್ಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತನ್ನ ಹೆತ್ತವರೊಂದಿಗೆ ಬೈಕ್ನಲ್ಲಿ ಸುಖವಾಗಿ ಹೋಗುತ್ತಿದ್ದಾಗ ಚೈನೀಸ್ ಮಾಂಜಾವೊಂದು ಮಗುವಿನ ಗಂಟಲಿಗೆ ಬಡಿದು ಕತ್ತು ಕೊಯ್ದಿದೆ. ಪೊಲೀಸರ ಪ್ರಕಾರ, ಕೊನಸೀಮಾ ಮತ್ತು ಅಂಬಾಜಿಪೇಟೆಯ ಸಾಫ್ಟ್ವೇರ್ ಉದ್ಯೋಗಿಗಳಾದ ರಾಮ್ಸಾಗರ್ ಮತ್ತು ಪದ್ಮಾವತಿ ಕೆಪಿಎಚ್ಬಿ ಕಾಲೋನಿಯ ಗೋಕುಲ್ ಪ್ಲಾಟ್ಸ್ನಲ್ಲಿ … Read more