ರಾಜಧಾನಿಯಲ್ಲಿ ಹೆಚ್ಚಾಯ್ತು ರೋಡ್‌ ರೇಜ್‌ – ಬಿಎಂಟಿಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಕ್ಯಾಬ್‌ ಡ್ರೈವರ್‌!

Spread the love

ರಾಜಧಾನಿಯಲ್ಲಿ ರೋಡ್‌ ರೇಜ್‌ (Road rage) ಘಟನೆಗಳು ದಿನೇ ದಿನೇ ಹೆಚುತ್ತಿದ್ದು, ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಕ್ಯಾಬ್‌ ಗೆ ಬಸ್‌ ತಗುಲಿತೆಂಬ ಕಾರಣಕ್ಕೆ ಡ್ರೈವರ್‌ ಬಿಎಂಟಿಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಪ್ರಕರಣ ನಡೆದಿದೆ.

ಶಿವಾಜಿನಗರದಿಂದ ಯಲಹಂಕ ಕಡೆಗೆ ತೆರಳುತ್ತಿದ್ದ ಬಸ್ ಗೆ ಕ್ಯಾಬ್‌ ಟಚ್‌ ಆಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹಿಂಬಾಲಿಸಿಕೊಂಡು ಹೋಗಿ ಗಲಾಟೆ ನಡೆಸಿದ ಕ್ಯಾಬ್‌ ಚಾಲಕ ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾನೆ. ಹೆಗಡೆ ನಗರದ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬಿಎಂಟಿಸಿ ಬಸ್ ಚಾಲಕ ಹಾಗೂ ಕಂಡಕ್ಟರ್ ಮೇಲೆ ಕ್ಯಾಬ್‌ ಡ್ರೈವರ್‌ ಹಲ್ಲೆ ನಡೆಸಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ ಕ್ಯಾಬ್ ಚಾಲಕ , ಬಿಎಂಟಿಸಿ ಡ್ರೈವರ್‌ ನಾಗೇಶ್ ಹಾಗೂ ಕಂಡಕ್ಟರ್ ಕೆಂಚಪ್ಪ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾನೆ.

ಹಲ್ಲೆಯ ದೃಶ್ಯವನ್ನ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕ್ಯಾಬ್ ಚಾಲಕ ನರಸಿಂಹಯ್ಯ ಎಂಬಾತನಿಂದ ಈ ಕೃತ್ಯ ನಡೆದಿದೆ.

ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಬಳಿ ಬಸ್‌ ಅನ್ನು ಚಾಲಕ ಕೊಂಡೊಯ್ದಿದ್ದು, ಕ್ಯಾಬ್ ಚಾಲಕನನ್ನ ವಶಕ್ಕೆ ಪಡೆದ ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಚಾಲಕನನ್ನು ವಿಚಾರಣೆಗೊಳಪಡಿಸಿದ್ದಾರೆ.

WhatsApp Group Join Now

Spread the love

Leave a Reply