BSNL SIM New Plans : ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL) ಈಗ ದೇಶಾದ್ಯಂತ ಬಹು ದೊಡ್ಡ ಯೋಜನೆಯನ್ನ ಜಾರಿಗೆ ತಂದಿದೆ. ಬಿಎಸ್ಎನ್ಎಲ್ ಸಿಮ್ ಬಳಸುವವರು ಈಗ ಕೇವಲ ಒಂದು ರೂಪಾಯಿಯಲ್ಲಿ ಅನಿಯಮಿತ ಯೋಜನೆಗಳ ಲಾಭವನ್ನ ಪಡೆದುಕೊಳ್ಳಬಹುದು. ಜಿಯೋ ಮತ್ತು ಏರ್ ಟೆಲ್ ಕಂಪನಿಗಳಿಗೆ ಬಹು ದೊಡ್ಡ ಆಘಾತವನ್ನ ಕೊಟ್ಟಿರುವ ಬಿಎಸ್ಎನ್ಎಲ್ (BSNL) ಈಗ ದೇಶಾಧ್ಯಂತ ಹೊಸ ಯೋಜನೆಯನ್ನ ಜಾರಿಗೆ ತಂದಿದೆ.
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL) ಈಗ ಟೆಲಿಕಾಂ ಮಾರುಕಟ್ಟೆಯನ್ನ ಆಕ್ರಮಿಸಿಕೊಳ್ಳುತ್ತಿದೆ ಎಂದು ಹೇಳಬಹುದು. ಬಿಎಸ್ಎನ್ಎಲ್ ಈಗ ಟೆಲಿಕಾಂ ಮಾರುಕಟ್ಟೆಗೆ ಸುಮಾರು 47,000 ಕೋಟಿ ರೂಪಾಯಿ ಹಣವನ್ನ ಹೂಡಿಕೆ ಮಾಡಿದೆ. ಟೆಲಿಕಾಂ ಮಾರುಕಟ್ಟೆಗೆ 47,000 ಕೋಟಿ ರೂಪಾಯಿ ಹಣವನ್ನ ಹೂಡಿಕೆ ಮಾಡುವುದು ಮಾತ್ರವಲ್ಲದೆ ಒಂದು ರೂಪಾಯಿ ರಿಚಾರ್ಜ್ ಪ್ಲಾನ್ ಕೂಡ ಬಿಡುಗಡೆ ಮಾಡಿದೆ.
ಸದ್ಯ ಬಿಎಸ್ಎನ್ಎಲ್ ಒಂದು ರೂಪಾಯಿಯ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದ್ದು, ಖಾಸಗಿ ಟೆಲಿಕಾಂ ಕಂಪನಿಗಳ ತಲೆನೋವಿಗೆ ಕಾರಣವಾಗಿದೆ ಅಂತ ಹೇಳಬಹುದು. ಬಿಎಸ್ಎನ್ಎಲ್ ಈಗ ಆತ್ಮನಿರ್ಭರ್ ಭಾರತ್ ಯೋಜನೆಯ ಅಡಿಯಲ್ಲಿ ಸುಮಾರು 47,000 ಕೋಟಿ ರೂಪಾಯಿ ಹಣವನ್ನ ಹೂಡಿಕೆ ಮಾಡಿದೆ. ಇನ್ನು ಮುಂದೆ ದೇಶದ ಮೂಲೆ ಮೂಲೆಗಳಲ್ಲೂ ಕೂಡ ಬಿಎಸ್ಎನ್ಎಲ್ (BSNL) ಗ್ರಾಹಕರು 4ಜಿ ನೆಟ್ವರ್ಕ್ ಅನ್ನ ಬಳಕೆ ಮಾಡಬಹುದು. ಅಷ್ಟೇ ಮಾತ್ರವಲ್ಲದೇ ದೇಶಾಧ್ಯಂತ ಸುಮಾರು 1 ಲಕ್ಷ 4ಜಿ ಬಿಎಸ್ಎನ್ಎಲ್ ಟವರ್ ಗಳನ್ನ ನಿರ್ಮಾಣ ಮಾಡಲಾಗುತ್ತಿದೆ.
ಅದೇ ರೀತಿಯಲ್ಲಿ ಬಿಎಸ್ಎನ್ಎಲ್ ಈಗ ಸೀಮಿತ ಅವಧಿಯ ಫ್ರೀಡಂ ಆಫರ್ ಅನ್ನು ಕೂಡ ಘೋಷಣೆ ಮಾಡಿದೆ. ಈ ಫ್ರೀಡಂ ಆಫರ್ ಅಡಿಯಲ್ಲಿ ಗ್ರಾಹಕರು ಕೇವಲ ಒಂದು ರೂಪಾಯಿ ರಿಚಾರ್ಜ್ ಮಾಡಿದರೆ ಸಾಕು ಪ್ರತಿನಿತ್ಯ 2 ಜಿಬಿ ಡಾಟಾ 100 ಎಸ್ಎಂಎಸ್ ಮತ್ತು ಅನಿಯಮಿತ ಕರೆ ಸೇವೆಯನ್ನು ಕೂಡ ಬಳಸಿಕೊಳ್ಳಬಹುದು. ಒಂದು ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡುವುದರ ಮೂಲಕ ಬಿಎಸ್ಎನ್ಎಲ್ (BSNL) ಈಗ ಜಿಯೋ ಮತ್ತು ಏರ್ಟೆಲ್ ಕಂಪನಿಗೆ ತೀವ್ರ ಹೊಡತವನ್ನ ನೀಡಿದೆ.