ಹೊಸದಾಗಿ ಅರ್ಜಿ ಹಾಕಿದ್ರೆ 15 ದಿನದಲ್ಲಿ ಬಿಪಿಎಲ್ ಕಾರ್ಡ್ ವಿತರಣೆ :‌ ಗುಡ್‌ ನ್ಯೂಸ್‌ ಕೊಟ್ಟ ಕೆ.ಹೆಚ್ ಮುನಿಯಪ್ಪ.

Spread the love

ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ತಕ್ಷಣವೇ ತಹಶೀಲ್ದಾರ್ ಗಳಿಗೆ ಭೇಟಿ ಮಾಡಿ ಹೊಸದಾಗಿ ಅರ್ಜಿ ಹಾಕಿದರೆ 15 ದಿನಗಳಿಗೆ ಪಡಿತರ ಕಾರ್ಡ್ ನೀಡುತ್ತೇವೆ. ಇನ್ನು ಆಸ್ತಿ ಇರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವ ವಿಚಾರವಾಗಿ ಅದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ತಿಳಿಸಿದರು.

ಬೆಂಗಳೂರಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯಗಳಿಗೆ ಪಡಿತರ ಅಕ್ಕಿ ಕಳ್ಳ ಸಾಗಾಣಿ ವಿಚಾರವಾಗಿ ಈ ಬಗ್ಗೆ ಈಗಾಗಲೇ ಕ್ರಮ ಜರುಗಿಸಿದ್ದೇವೆ ಈಗಾಗಲೇ ವಿವಿಧಡೆ 574 ಜನರನ್ನು ಅರೆಸ್ಟ್ ಮಾಡಲಾಗಿದೆ. ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಇನ್ನು ಮುಂದೆ ಹಾಗೆ ನಡೆಯಲ್ಲ. ಅಲ್ಲದೇ ಇಂದಿರಾ ಕಿಟ್ ವಿಚಾರವಾಗಿ ಮಾತನಾಡಿದ ಅವರು, ಅಕ್ಕಿ ಹೆಚ್ಚಾಯಿತು ಎಂಬ ಭಾವನೆ ಇದೆ. ಹಾಗಾಗಿ ಹೊಸ ಯೋಜನೆ ಜಾರಿ ಮಾಡಿದ್ದೇವೆ. ಇಂದಿರಾ ಕಿಟ್ ಅಂತ ಹೊಸ ಯೋಜನೆ ಜಾರಿ ಮಾಡಿದ್ದೇವೆ ಜನವರಿ ಅಥವಾ ಫೆಬ್ರವರಿಯಲ್ಲಿ ಬೇಳೆ, ಸಕ್ಕರೆ ಉಪ್ಪು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಗ್ರಾಹಕರ ವೇದಿಕೆಗೆ ಸುಮಾರು 255466 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 248072 ಪ್ರಕರಣಗಳು ವಿಲೇವಾರಿಯಾಗಿದ್ದು ಶೆ 97% ರಷ್ಟು ಕಾರ್ಯಮುಗಿದಿದೆ 7394 ಅಂದರೆ 3% ರಷ್ಟು ಪ್ರಕರಣಗಳು ಬಾಕಿ ಇದ್ದು ಈ ಸಂದರ್ಭದಲ್ಲಿ ಶಿವಶಿಂಕರೇಗೌಡ ರವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದರು. ಅತಿ ಬೇಗ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಶೀಘ್ರವಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರನ್ನು ನೇಮಿಸಲು ಕ್ರಮ ವಹಿಸಲಾಗುವುದು ಎಂದರು.

ಇಲ್ಲಿ ಒಂದು ಪ್ರಕರಣ ನೋಡಿದಾಗ ಒಬ್ಬ ಡಾಕ್ಟರ್ ಕೆಲಸ ಸರಿಯಾಗಿ ಮಾಡದೆ ಇದ್ದರೆ ರೋಗಿಯ ಪ್ರಾಣ ಉಳಿಯಲ್ಲಾ ಗ್ರಾಹಕ ವೇದಿಕೆಗೆ ಎರಡು ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಅವರು ಮಾಡಿರುವ ತಪ್ಪಿನಿಂದ ಒಬ್ಬ ಹೆಣ್ಣು ಮಗಳಿಗೆ ಕಣ್ಣು ಅಪಾಯವಾಗಿದ್ದು ಬೇಸರಾ ತಂದಿದೆ ಇಂತಹ ಪ್ರಕರಣಗಳು ನಡೆಯಬಾರದು ಇಂತಹ ಪ್ರಕರಣಗಳಲ್ಲಿ ಅವರಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದರು. ಡಾಕ್ಟರ್ ಮಾಡಿದ ತಪ್ಪಿನಿಂದ ಮಕ್ಕಳ ಪ್ರಾಣಕ್ಕೆ ಅಪಾಯವಾಗಿದ್ದು ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕಿತ್ತು‌ ಎಂದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಫರಾದಗಳು ಹೆಚ್ಚಾಗುತ್ತಿವೆ ಅದರಲ್ಲಿ ತುಂಬಾ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ ಸೈಬರ್ ಕಳ್ಳರು ಜಾಸ್ತಿಯಾಗಿವೆ. ಮೊಬೈಲ್ ಗಳಮೂಲಕ ಎಸ್ ಎಂಎಸ್ ಕಳುಹಿಸಿ ಒಟಿಪಿ ಮೂಲಕ ಜನರು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ತಡೆಯಬೇಕು ಇದರ ಕುರಿತು ನಾನು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸುತ್ತೇನೆ ಎಂದರು. ನಾವು ಗ್ರಾಹಕರ ರಕ್ಷಕರಾಗಬೇಕು ನಾವು ನಮ್ಮ ಬಳಿ ಬಂದವರನ್ನು ಪ್ರೀತಿಯಿಂದ ಮಾತಾಡಿಸಿ ಅವರ ಸೇವೆ ಮಾಡಬೇಕು ಇದು ಗಾಂಧಿಯವರ ಸಂಕಲ್ಪ ವಾಗಿತ್ತು.

ಈ ಬಿಜೆಪಿಯವರು ದ್ವೇಷ ರಾಜಕಾರಣ ಮಾಡುವ ಮೂಲಕ ಭಾತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಯವರ ಹೆಸರು ಬದಲಿಸಲು ಹೊರಟಿದ್ದಾರೆ ಅವರು ನೂತನ ಕಾರ್ಯಕ್ರಮ ಅನುಷ್ಠಾನ ಮಾಡಿ ಅಟಲ್ ಬಿಹಾರಿ ವಾಜಪೇಯಿ ರವರ ಹೆಸರನ್ನು ಇಟ್ಟಿದ್ದರೆ ನಾವು ಸ್ವಾಗತಿಸುತ್ತಿದ್ದೆವು ಆದರೆ ಗಾಂಧೀಜಿಯವರ ಹೆಸರು ಬದಲಿಸಿ ರಾಮರ ಹೆಸರನ್ನು ಇಟ್ಟಿದ್ದು ತುಂಬಾ ಬೇಸರವಾಗಿದೆ. ಶ್ರೀರಾಮ ಎಲ್ಲಾರಿಗೂ ದೇವರೆ ನಾನು ಬೆಳಗ್ಗೆ 5 ಗಂಟೆಗೆ ಎದ್ದು ರಾಮಕೋಟಿ ಬರೆಯುತ್ತೇನೆ ಇದು ಇಂದಿನದಲ್ಲಾ ಸುಮಾರು ವರ್ಷಗಳಿಂದ ಮುಂದುವರೆಸುತ್ತಾ ಬರೆಯುತ್ತಿದ್ದೇನೆ. ಶ್ರೀರಾಮ ಎಲ್ಲಾರಿಗೂ ದೇವರೆ ಅವರ ಹೆಸರನ್ನು ರಾಜಕೀಯಕ್ಕೆ ಬಳಸಬಾರದು ಎಂದರು.

WhatsApp Group Join Now

Spread the love

Leave a Reply