ಅನಗತ್ಯ ಗೊಂದಲಕ್ಕೆ ಬ್ರೇಕ್‌ ಹಾಕಲು ಇಬ್ಬರೂ ನಿರ್ಧರಿಸಿದ್ದೇವೆ – ಸಿಎಂ , ಡಿಸಿಎಂ ಜಂಟಿ ಪತ್ರಿಕಾಗೋಷ್ಠಿ

Spread the love

ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಇಬ್ಬರೂ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ಅನಗತ್ಯವಾಗಿ ಗೊಂದಲಗಳು ನಿರ್ಮಾಣವಾಗಿದ್ದು, ಇದಕ್ಕೆ ಬ್ರೇಕ್‌ ಹಾಕಲು ಇಬ್ಬರೂ ನಿರ್ಧರಿಸಿರುವುದಾಗಿ ಸಿಎಂ ಹೇಳಿದ್ದಾರೆ.

ಹೈಕಮ್ಯಾಂಡ್‌ ತೀರ್ಮಾನಕ್ಕೆ ಇಬ್ಬರೂ ಬದ್ದರಾಗಿದ್ದೇವೆ. ಹೈಕಮ್ಯಾಂಡ್‌ ಅಸೆಂಬ್ಲಿ ನಡೆಯುವ ಮುಂಚೆ ಈ ಗೊಂದಲಗಳನ್ನು ತಿಳಿಗೊಳಿಸಿಕೊಳ್ಳಿ ಎಂದು ನಿರ್ದೇಶನ ನೀಡಿದ್ದರು. ಅದನ್ನು ಕೆಲವು ಮೀಡಿಯಾಗಳು ಸೃಷ್ಟಿಸಿದ್ದವೇ ಹೊರತು. ಈ ಕುರಿತು ನಮ್ಮಲ್ಲಿ ಯಾವುದೇ ಗೊಂದಲ ಇರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ಕೆಲವು ಶಾಸಕರು ದೆಹಲಿಗೆ ಹೋಗಿರುವುದು ನಿಜ. ಆ ಬಗ್ಗೆ ನನಗೂ ಮಾಹಿತಿ ಇದೆ. ಆದರೆ ಅದಕ್ಕೂ ಸಿಎಂ ಬದಲಾವಣೆಗೂ ಸಂಬಂಧವಿಲ್ಲ . ಅವರಲ್ಲಿ ಎಷ್ಟೋ ಜನ ಬಂದು ನನ್ನೊಡನೆಯೂ ಸಹ ಮಾತನಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

2028 ರಲ್ಲಿ ಮತ್ತ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇವತ್ತಿಗೂ ಹಾಗೂ ಮುಂದೆಯೂ ಸಹ ಇದೇ ರೀತಿ ಒಟ್ಟಿಗೇ ಹೋಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮುಂದೆ ಬೆಳಗಾವಿ ಅಧಿವೇಶನ ನಡೆಯಲಿದ್ದು ಅಲ್ಲಿ ಜೆಡಿಎಸ್‌ ಮತ್ತು ಬಿಜೆಪಿಯನ್ನು ಎದುರಿಸಲು ಸಮರ್ಥವಾಗಿ ಸಿದ್ದತೆ ನಡೆಸಿದ್ದೇವೆ. ಸುಳ್ಳು ಸುದ್ದಿ ಹರಡುವುದು, ಅಪಪ್ರಚಾರ ಮಾಡುವುದು ಬಿಜೆಪಿ ಮತ್ತು ಜೆಡಿಎಸ್‌ ಚಾಳಿ . ಅಸೆಂಬ್ಲಿಯಲ್ಲಿ ಅವರನ್ನು ಎದುರಿಸಲು ತಂತ್ರಗಾರಿಕೆ ಬಗ್ಗೆ ಮಾತನಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಾವು 142 ಮಂದಿ ಇದ್ದೇವೆ. ಬಿಜೆಪಿ ಅವರು 64 ಮಂದಿ ಮಾತ್ರ ಜೆಡಿಎಸ್‌ ಇರುವುದು 18 ಮಂದಿ. ಇವರಿಬ್ಬರೂ ಸೇರಿದರೂ ಏನೂ ಮಾಡಲಾಗದು. ಅವರನ್ನು ಸಮರ್ಥವಾಗಿ ಎದುರಿಸಲು ನಾವು ಸಿದ್ದರಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಏನೇ ಸಮಸ್ಯೆಯಿದ್ದರೂ ನಾವೇ ಅದನ್ನು ಕುಳಿತು ಬಗೆಹರಿಸಿಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿ, ಜನರ ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ. ರಾಜಕೀಯವಾಗಿ ಇಬ್ಬರ ತೀರ್ಮಾನವೂ ಒಂದೇ ಆಗಿದೆ. ಪಕ್ಷದ ಹೈಕಮ್ಯಾಂಡ್‌ ನಿರ್ದೇಶನದಂತೆ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆಇಲ್ಲ. ನಮ್ಮದು ಒಂದೇ ಗುಂಪು ಕಾಂಗ್ರೆಸ್‌ ಗುಂಪು. ಹೈಕಮ್ಯಾಂಡ್‌ ನಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಹುದೆಂಬ ವಿಶ್ವಾಸವಿದೆ. ಪಕ್ಷದ ಒಳಿತಿಗಾಗಿ ಹೈಕಮ್ಯಾಂಡ್‌ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇವೆ ಎಂದರು.

ಎಲ್ಲಾ ಶಾಸಕರೂ ಸಹ ಇದೇ ರೀತಿ ಪಕ್ಷದ ಆಜ್ಞೆಯನ್ನು ಪಾಲಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ನೀಡಿರುವ ಸಂದೇಶವನ್ನು ಎಲ್ಲರೂ ಪಾಲಿಸಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

WhatsApp Group Join Now

Spread the love

Leave a Reply