ಕೆಟಿಎಂ ಡ್ಯೂಕ್ ಬೈಕ್ ನಲ್ಲಿ ಮಿತಿಮೀರಿದ (140 ಕಿಲೋ ಮೀಟರ್ ಸ್ಪೀಡ್) ವೇಗದಲ್ಲಿ ಚಲಿಸಿದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ 18 ವರ್ಷದ ಯುವ ಬ್ಲಾಗರ್ ಶಿರಚ್ಛೇದಗೊಂಡು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸೂರತ್ ನಲ್ಲಿ ಬುಧವಾರ (ಡಿ.03) ನಡೆದಿದೆ.
ಮಿತಿಮೀರಿದ ವೇಗದಲ್ಲಿ ಚಲಿಸಿದ ಪರಿಣಾಮ ಪಿಕೆಆರ್ ಬ್ಲಾಗರ್ ಪ್ರಿನ್ಸ್ ಪಟೇಲ್ (18ವರ್ಷ) ತಲೆ ತುಂಡಾಗಿ ರಸ್ತೆಯಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಸಿಸಿಟಿವಿಯಲ್ಲಿ, ಪ್ರಿನ್ಸ್ ಪಟೇಲ್ ಕೆಟಿಎಂ ಡ್ಯೂಕ್ ಬೈಕ್ ನಲ್ಲಿ 140 ಕಿಲೋ ಮೀಟರ್ ವೇಗದಲ್ಲಿ ಗ್ರೇಟ್ ಲೈನರ್ ಬ್ರಿಡ್ಜ್ ನಲ್ಲಿ ಚಲಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ಅಪಘಾತಕ್ಕೀಡಾಗಿದ್ದು, ಇದರ ಪರಿಣಾಮ ಕೆಲವು ಮೀಟರ್ ಗಳಷ್ಟು ದೂರದವರೆಗೆ ಪ್ರಿನ್ಸ್ ಎಳೆದೊಯ್ದಿದ್ದು ತಲೆ ತುಂಡಾಗಿ ಸಾವನ್ನಪ್ಪಿರುವ ಅಪಘಾತದ ಭೀಕರ ದೃಶ್ಯ ಸೆರೆಯಾಗಿದೆ.
ಬೈಕ್ ನಿಂದ ಕೆಳಬಿದ್ದ ರಭಸಕ್ಕೆ ಹಲವು ಮೀಟರ್ ಗಳಷ್ಟು ದೂರದವರೆಗೆ ಎಳೆದೊಯ್ದ ಪರಿಣಾಮ ಆತನ ತಲೆ ಡಿವೈಡರ್ ಗೆ ಬಡಿದು ಕತ್ತರಿಸಿ ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಿನ್ಸ್ ಪಟೇಲ್ ಬೈಕ್ ಚಲಾಯಿಸುತ್ತಿದ್ದ ವೇಳೆ ತಲೆಗೆ ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಿನ್ಸ್ ತಾಯಿ ಪುಟ್ಟ ಗುಡಿಸಲಿನಲ್ಲಿ ವಾಸವಾಗಿದ್ದು, ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವುದಾಗಿ ವರದಿ ತಿಳಿಸಿದೆ.
ಜನಪ್ರಿಯ ವ್ಲಾಗರ್ :
ಪ್ರಿನ್ಸ್ ಪಟೇಲ್ ಸಾಮಾಜಿಕ ಜಾಲತಾಣದಲ್ಲಿ ಬೈಕ್ ನಲ್ಲಿ ಫಾಸ್ಟ್ ರೈಡಿಂಗ್ ಕಂಟೆಂಟ್ ಮೂಲಕ ಜನಪ್ರಿಯನಾಗಿದ್ದ. ಕೆಟಿಎಂ ಡ್ಯೂಕ್ 390 ಈತನ ನೆಚ್ಚಿನ ಬೈಕ್ ಆಗಿದ್ದು, ತನ್ನ ಸಾಮಾಜಿಕ ಜಾಲತಾಣದ ವಿಡಿಯೋ ಕಂಟೆಂಟ್ ಗಾಗಿ ಸೆಪ್ಟೆಂಬರ್ ನಲ್ಲಿ ಈ ಬೈಕ್ ಖರೀದಿಸಿದ್ದ.
KTM ಡ್ಯೂಕ್ ಬೈಕ್ ನಲ್ಲಿ ಮಿತಿಮೀರಿದ ವೇಗದಲ್ಲಿ ಚಲಿಸಿ ಶಿರಚ್ಛೇದಗೊಂಡು ಬ್ಲಾಗರ್ ಸಾವು.!
WhatsApp Group
Join Now