ಅಲ್ಪಸಂಖ್ಯಾತರಿಗೆ ಮಾತ್ರ ಬಡ್ಡಿ ಮನ್ನಾ ಯಾಕೆ.? : ಸರ್ಕಾರದ ವಿರುದ್ಧ ಮುಗಿಬಿದ್ದ ಕೇಸರಿ ಪಡೆ.!

Spread the love

ರಾಜ್ಯ ಸರ್ಕಾರವು 2013-14 ರಿಂದ 2018-19ರ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪಡೆದ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲು ‘ಒನ್ ಟೈಮ್ ಸೆಟ್ಲ್‌ಮೆಂಟ್’ ಯೋಜನೆಗೆ ಅನುಮೋದನೆ ನೀಡಿದ್ದು, ಈಗ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಒಟ್ಟು 1.94 ಲಕ್ಷ ಫಲಾನುಭವಿಗಳು ಪಡೆದ 981 ಕೋಟಿ ರೂ. ಮೂಲ ಸಾಲದ ಪೈಕಿ ಈವರೆಗೆ ಕೇವಲ 98.18 ಕೋಟಿ ರೂ. ಮಾತ್ರ ವಸೂಲಾಗಿದೆ. ಇನ್ನೂ 714.13 ಕೋಟಿ ರೂ. ಬಾಕಿ ಉಳಿದಿದ್ದು, ಬಡ್ಡಿಯನ್ನು ಮನ್ನಾ ಮಾಡಿ ಅಸಲನ್ನಷ್ಟೇ ಪಾವತಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೀವ್ರವಾಗಿ ಖಂಡಿಸಿವೆ.

ಕಡು ಸಂಕಷ್ಟದಲ್ಲಿರುವ ರೈತರ ಸಾಲದ ಮೇಲೆ ತೋರಿಸದ ಕಾಳಜಿಯನ್ನು ಕೇವಲ ಒಂದು ಸಮುದಾಯದ ಮೇಲೆ ತೋರಿಸುತ್ತಿರುವುದು ತುಷ್ಟೀಕರಣದ ಪರಮಾವಧಿ ಎಂದು ವಿಪಕ್ಷಗಳು ಟೀಕಿಸಿವೆ.

ಇನ್ನು ವಿಶೇಷವೆಂದರೆ, ಹಣಕಾಸು ಇಲಾಖೆಯೇ ಈ ಯೋಜನೆಗೆ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿತ್ತು ಎನ್ನಲಾಗಿದೆ. ಒಂದು ನಿಗಮಕ್ಕೆ ರಿಯಾಯಿತಿ ನೀಡಿದರೆ ಅದು ‘ಡೊಮಿನೋ ಎಫೆಕ್ಟ್’ ನಂತೆ ಉಳಿದ ನಿಗಮಗಳಿಂದಲೂ ಇಂತಹ ಬೇಡಿಕೆ ಬರಲು ಕಾರಣವಾಗಬಹುದು, ಇದು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಲಿದೆ ಎಂಬುದು ಇಲಾಖೆಯ ಆತಂಕ.

ವಿವಾದಗಳ ನಡುವೆಯೂ KMDC ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಸಂಪೂರ್ಣ ಸಾಲ ವಸೂಲಾಗದೆ ಉಳಿಯುವುದಕ್ಕಿಂತ, ಬಡ್ಡಿ ರೂಪದ 14 ಕೋಟಿ ರೂ. ಮನ್ನಾ ಮಾಡಿ ಅಸಲನ್ನು ವಸೂಲಿ ಮಾಡುವುದರಿಂದ ಸುಮಾರು 150 ಕೋಟಿ ರೂ.ಗಳನ್ನು ಹಿಂಪಡೆಯಬಹುದು ಎಂಬುದು ನಿಗಮದ ಲೆಕ್ಕಾಚಾರವಾಗಿದೆ.

WhatsApp Group Join Now

Spread the love

Leave a Reply