ಬಿಗ್ ಬಾಸ್ ಕನ್ನಡ 12 ಸ್ಪರ್ಧಿಗಳ ಸಂಭಾವ್ಯ ಪಟ್ಟಿ : ‘ಇವರೆಲ್ಲಾ’ ಬಂದ್ರೆ ಚೆನ್ನ ಎಂದ ವೀಕ್ಷಕರು!

Spread the love

ಈ ಬಾರಿ ‘ಬಿಗ್ ಬಾಸ್’ ಮನೆಗೆ ಯಾರೆಲ್ಲಾ ಬರ್ತಾರೋ ಗೊತ್ತಿಲ್ಲ. ಆದರೆ, ‘ಇವರೆಲ್ಲಾ’ ಬಂದರೆ ಚೆನ್ನ ಅಂತ ವೀಕ್ಷಕರು ಕೆಲವರನ್ನ ನಿರೀಕ್ಷಿಸುತ್ತಿದ್ದಾರೆ. ವೀಕ್ಷಕರ ಇಚ್ಛಾನುಸಾರ ಈ ಬಾರಿ ಯಾರೆಲ್ಲಾ ‘ಬಿಗ್ ಬಾಸ್’ ಸ್ಪರ್ಧಿಗಳಾಗಿ ಬರಬೇಕು? ಲಿಸ್ಟ್ ಇಲ್ಲಿದೆ ನೋಡಿ…

ಈ ಬಾರಿ ‘ಬಿಗ್ ಬಾಸ್’ ಮನೆಗೆ ಹೋಗೋರು ಯಾರು?
  
ಈ ಬಾರಿ ‘ಬಿಗ್ ಬಾಸ್’ ಮನೆಗೆ ಹೋಗೋರು ಯಾರು?
‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮ ಯಾವಾಗ ಲಾಂಚ್ ಆಗುತ್ತೆ ಎಂಬ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ, ಆಗಸ್ಟ್ ತಿಂಗಳ ಕೊನೆ ಅಥವಾ ಸೆಪ್ಟೆಂಬರ್ ವೇಳೆಗೆ ಹೊಸ ಸೀಸನ್‌ ಲಾಂಚ್ ಆಗುವ ಸಾಧ್ಯತೆ ಇದೆ. ಈಗಾಗಲೇ ‘ಬಿಗ್ ಬಾಸ್’ ನೂತನ ಸೀಸನ್‌ಗಾಗಿ ತೆರೆ ಮರೆಯ ಕೆಲಸಗಳು ಆರಂಭವಾಗಿವೆ.

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮಕ್ಕೆ ಹೋಸ್ಟ್ ಆಗಿ ಕಿಚ್ಚ ಸುದೀಪ್ ಬರ್ತಾರಾ ಎಂಬ ಪ್ರಶ್ನೆ ಫ್ಯಾನ್ಸ್‌ಗೆ ಕಾಡತ್ತಲೇ ಇದೆ. ಈ ಮಧ್ಯೆ ಈ ಬಾರಿ ಯಾರೆಲ್ಲಾ ‘ಬಿಗ್ ಬಾಸ್’ ಮನೆಯೊಳಗೆ ಸ್ಪರ್ಧಿಗಳಾಗಿ ಹೋಗಬಹುದು ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ವೀಕ್ಷಕರ ಇಚ್ಛಾನುಸಾರ ಈ ಬಾರಿ ‘ಇವರುಗಳೆಲ್ಲಾ’ ಸ್ಪರ್ಧಿಗಳಾಗಿ ಬರಬೇಕಂತೆ. ಆ ಪಟ್ಟಿ ಇಲ್ಲಿದೆ ನೋಡಿ…

(ವಿಶೇಷ ಸೂಚನೆ : ಇದು ವೀಕ್ಷಕರ ಇಚ್ಛೆಯ ಅನುಸಾರ, ಸೋಷಿಯಲ್ ಮೀಡಿಯಾದಲ್ಲಿ ಬಂದ ಕಾಮೆಂಟ್ಸ್‌ನಿಂದ ತಯಾರಿಸಲಾದ ಪಟ್ಟಿ. ಅಷ್ಟೇ ಹೊರತು ಅಧಿಕೃತ ಪಟ್ಟಿ ಅಲ್ಲ)

ಗಿಲ್ಲಿ ನಟ

WhatsApp Group Join Now

ಈಗಾಗಲೇ ‘ಗಿಲ್ಲಿ ನಟ’ ಖ್ಯಾತಿಯ ನಟರಾಜ್ ಕಲರ್ಸ್ ಕನ್ನಡ ವಾಹಿನಿಯ ಅಂಗಳಕ್ಕೆ ಕಾಲಿಟ್ಟಾಗಿದೆ. ಒನ್‌ ಲೈನ್‌ ಪಂಚ್ ಹೊಡೆಯೋದ್ರಲ್ಲಿ ಗಿಲ್ಲಿ ನಟ ಫೇಮಸ್. ಒಳ್ಳೆಯ ಕಾಮಿಡಿ ಟೈಮಿಂಗ್ ಹೊಂದಿರುವ ‘ಗಿಲ್ಲಿ ನಟ’ ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮಕ್ಕೆ ಬಂದರೆ ವೀಕ್ಷಕರಿಗೆ ಮನರಂಜನೆ ಗ್ಯಾರೆಂಟಿ.

ಬಾಳು ಬೆಳಗುಂದಿ

‘ಸರಿಗಮಪ’ ಕಾರ್ಯಕ್ರಮದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಉತ್ತರ ಕರ್ನಾಟಕದ ಪ್ರತಿಭೆ ಬಾಳು ಬೆಳಗುಂದಿ. ಯೂಟ್ಯೂಬ್‌ನಲ್ಲಿ ಹೆಚ್ಚು ಸಬ್‌ಸ್ಕ್ರೈಬರ್ಸ್ ಹೊಂದಿರುವ ಗಾಯಕ ಬಾಳು ಬೆಳಗುಂದಿ ‘ಬಿಗ್ ಬಾಸ್’ ಮನೆಗೆ ಬಂದರೆ ಚಲೋ ಐತಿ ಅಂತಿದ್ದಾರೆ ವೀಕ್ಷಕರು.

ಗಗನಾ

WhatsApp Group Join Now

‘ಮಹಾನಟಿ’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’, ‘ಭರ್ಜರಿ ಬ್ಯಾಚುಲರ್ಸ್’ ರಿಯಾಲಿಟಿ ಶೋಗಳ ಮೂಲಕ ಜೀ ಕನ್ನಡ ವಾಹಿನಿಯಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿರುವ ಪ್ರತಿಭೆ ಗಗನಾ. ತಮ್ಮದೇ ಆದ ಫ್ಯಾನ್ ಫಾಲೋವಿಂಗ್ ಹೊಂದಿರುವ ಗಗನಾ ‘ಬಿಗ್ ಬಾಸ್‌’ ಮನೆಗೆ ಬಂದರೆ?

ಅಖಿಲಾ ಪಜಿಮಣ್ಣು

ಕಲರ್ಸ್ ವಾಹಿನಿಯ ‘ಕನ್ನಡ ಕೋಗಿಲೆ’ ಶೋ ಮೂಲಕ ಜನಪ್ರಿಯತೆ ಪಡೆದು, ‘ಮುಂಜಾನೆ ರಾಗ’ ಕಾರ್ಯಕ್ರಮದ ನಿರೂಪಕಿಯಾಗಿದ್ದವರು ಅಖಿಲಾ ಪಜಿಮಣ್ಣು. ಉತ್ತಮ ಗಾಯಕಿ ಆಗಿರುವ ಅಖಿಲಾ ಪಜಿಮಣ್ಣು ‘ಬಿಗ್ ಬಾಸ್’ ಮನೆಯಲ್ಲಿ ಗಾನಸುಧೆ ಹರಿಸಬಹುದಾ?

ರಾಘವೇಂದ್ರ

WhatsApp Group Join Now

‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’ ಹಾಗೂ ‘ಮಜಾ ಟಾಕೀಸ್‌’ನಲ್ಲಿ ಮಸ್ತ್ ಮನರಂಜನೆ ನೀಡಿದವರು ರಾಘವೇಂದ್ರ. ಇಷ್ಟು ದಿನ ‘ರಾಗಿಣಿ’ ಆಗಿ, ‘ಗಂಗಮ್ಮಜ್ಜಿ’ ಆಗಿ ರಾಘವೇಂದ್ರ ವೀಕ್ಷಕರಿಗೆ ಕಚಗುಳಿ ಇಟ್ಟಿದ್ದರು. ಆದರೆ, ರಿಯಲ್ ಆಗಿ ರಾಘವೇಂದ್ರ ಹೇಗೆ ಅನ್ನೋದು ಯಾರಿಗೂ ಗೊತ್ತಿಲ್ಲ. ಒಂದ್ವೇಳೆ ರಾಘವೇಂದ್ರ ‘ಬಿಗ್ ಬಾಸ್’ ಮನೆಗೆ ಬಂದರೆ.. ಬೇರೆ ಬೇರೆ ಅವತಾರ ತಾಳಿ, ವೀಕ್ಷಕರ ಮನಗೆದ್ದು ‘ಬಿಗ್ ಬಾಸ್’ ಟ್ರೋಫಿನೂ ಗೆಲ್ಲಬಹುದೇನೋ..!

ದೀಕ್ಷಾ

ಒಳ್ಳೆಯ ಸಂಬಳ ಬರುತ್ತಿದ್ದ ಸರ್ಕಾರಿ ಕೆಲಸ ಬಿಟ್ಟು ‘ಗಿಚ್ಚಿ ಗಿಲಿಗಿಲಿ’ ಶೋಗೆ ಬಂದಿದ್ದವರು ಕುಂದಾಪುರದ ದೀಕ್ಷಾ. ಇವರು ಪ್ರತಿಭಾವಂತ ನಟಿ. ಸೋಷಿಯಲ್ ಮೀಡಿಯಾದಲ್ಲೂ ದೀಕ್ಷಾ ತಮ್ಮದೇ ಛಾಪು ಮೂಡಿಸಿದ್ದಾರೆ. ಇಂತಿಪ್ಪ ದೀಕ್ಷಾಗೆ ‘ಬಿಗ್ ಬಾಸ್’ ಚಾನ್ಸ್ ಕೊಡ್ತಾರಾ?

ಕಿಪಿ ಕೀರ್ತಿ

ಸೋಷಿಯಲ್ ಮೀಡಿಯಾದಲ್ಲಿ ಕಿಪಿ ಕೀರ್ತಿ ಸಿಕ್ಕಾಪಟ್ಟೆ ಫೇಮಸ್. ಅವರ ಲವ್ ಸ್ಟೋರಿ ಹಾಗೂ ಬ್ರೇಕಪ್ ಇನ್ನೂ ಫೇಮಸ್. ಇಂತಿಪ್ಪ ಕಿಪಿ ಕೀರ್ತಿ ‘ಬಿಗ್ ಬಾಸ್’ ಮನೆಗೆ ಬಂದರೆ?

ಶಿವರಾಜ್ ಕೆ ಆರ್‌ ಪೇಟೆ

‘ಕಾಮಿಡಿ ಕಿಲಾಡಿಗಳು ಸೀಸನ್‌ 1’ ವಿನ್ನರ್‌ ಆದಾಗಿನಿಂದಲೂ ಶಿವರಾಜ್ ಕೆ ಆರ್‌ ಪೇಟೆ ಅವರನ್ನ ‘ಬಿಗ್ ಬಾಸ್’ ಪ್ರಿಯರು ಎದುರುನೋಡುತ್ತಿದ್ದಾರೆ. ಈವರೆಗೂ ‘ಬಿಗ್ ಬಾಸ್’ ಕಡೆ ಬಾರದ ಶಿವರಾಜ್ ಕೆ ಆರ್ ಪೇಟೆ ಈ ಬಾರಿ ದೊಡ್ಮನೆಯೊಳಗೆ ಬಲಗಾಲಿಟ್ಟು ಬರಬಹುದಾ?

ಶರ್ಮಿತಾ ಗೌಡ

‘ಗೀತಾ’ ಸೀರಿಯಲ್‌ನಲ್ಲಿ ವಿಲನ್ ಭಾನುಮತಿ ಆಗಿ ನಟಿಸುತ್ತಿದ್ದವರು ಶರ್ಮಿತಾ ಗೌಡ. ಸದ್ಯ ‘ಕ್ವಾಟ್ಲೆ ಕಿಚನ್‌’ ಶೋನಲ್ಲಿರುವ ಶರ್ಮಿತಾ ಗೌಡ ‘ಬಿಗ್ ಬಾಸ್’ ಶೋಗೂ ಬರ್ತಾರಾ?

ಚಂದ್ರಪ್ರಭ

ಕಲರ್ಸ್ ಕನ್ನಡ ವಾಹಿನಿಯ ಆಸ್ಥಾನ ಕಲಾವಿದರ ಪೈಕಿ ಚಂದ್ರಪ್ರಭ ಸಹ ಒಬ್ಬರು. ಈಗಾಗಲೇ ‘ಮಜಾಭಾರತ’ ತಂಡದಿಂದ ಮಂಜು ಪಾವಗಡ, ವಿನೋದ್ ಗೊಬ್ಬರಗಾಲ ‘ಬಿಗ್ ಬಾಸ್’ ಮನೆಗೆ ಹೋಗಿ ಬಂದಿದ್ದರು. ಈ ಬಾರಿ ಚಂದ್ರಪ್ರಭ ಹೋಗಬಹುದಾ?

ಸೂರಜ್‌

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರಜ್ ಈಗಾಗಲೇ ಕಲರ್ಸ್ ಕನ್ನಡ ಪ್ರವೇಶಿಸಿದ್ದಾರೆ. ಈ ಹಿಂದೆ ‘ಕಾಮಿಡಿ ಕಿಲಾಡಿಗಳು’ ಶೋದಿಂದ ಲೋಕೇಶ್, ತುಕಾಲಿ ಸಂತು ‘ಬಿಗ್ ಬಾಸ್’ ಮನೆ ಪ್ರವೇಶಿಸಿದ್ದರು. ಈ ಬಾರಿ ಸೂರಜ್‌ನ ನಿರೀಕ್ಷೆ ಮಾಡಬಹುದಾ? ಆಲ್ರೆಡಿ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಹಾಗೂ ‘ಕ್ವಾಟ್ಲೆ ಕಿಚನ್’ ಶೋಗಳಲ್ಲಿ ಮಿಂಚುತ್ತಿರುವ ಸೂರಜ್‌ಗೆ ‘ಬಿಗ್ ಬಾಸ್’ ದಾರಿ ಸುಲಭ ಆಗಿದ್ಯಾ?

ಕರಣ್ ಆರ್ಯನ್

ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಮಿಂಚಿರುವ ಉದಯೋನ್ಮುಖ ಪ್ರತಿಭೆ, ಸಿಸಿಎಲ್‌ನ ಆಲ್‌ರೌಂಡರ್‌ ಕರಣ್‌ ಆರ್ಯನ್‌. ಸೂಪರ್ ಫಿಟ್ ಆಗಿರುವ ಕರಣ್ ಆರ್ಯನ್‌ ‘ಬಿಗ್ ಬಾಸ್’ ಮನೆಗೆ ಬಂದರೆ ಟಾಸ್ಕ್‌ಗಳಲ್ಲಿ ಬೊಂಬಾಟ್‌ ಆಗಿ ಪರ್ಫಾಮ್ ಮಾಡಬಹುದು ಎಂಬ ನಂಬಿಕೆ ವೀಕ್ಷಕರಿಗಿದೆ.

ಸೋನಿ ಮುಲೇವಾ

‘ವಧು’ ಸೀರಿಯಲ್‌ನಲ್ಲಿ ವಿಲನ್ ಆಗಿ ನಟಿಸಿದವರು ಸೋನಿ ಮುಲೇವಾ. ‘ವಧು’ ಸೀರಿಯಲ್‌ ಸದ್ಯ ಮುಕ್ತಾಯವಾಗಿದೆ. ‘ಕ್ವಾಟ್ಲೆ ಕಿಚನ್’ ಶೋನಲ್ಲಿ ಬಿಜಿಯಾಗಿರುವ ಸೋನಿ ಮುಲೇವಾ ‘ಬಿಗ್ ಬಾಸ್’ ಮನೆಗೆ ಬಂದು ಗ್ಲಾಮರ್ ರಂಗು ತುಂಬುತ್ತಾರಾ?

ಮಯೂರ್ ಪಟೇಲ್

‘ಮಣಿ’ ಸಿನಿಮಾ ಮೂಲಕ ಖ್ಯಾತಿ ಪಡೆದವರು ನಟ ಮಯೂರ್ ಪಟೇಲ್‌. ಸಿನಿಮಾ ಹಾಗೂ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಮಯೂರ್ ಪಟೇಲ್‌ ‘ಬಿಗ್ ಬಾಸ್‌’ಗೆ ಬಂದರೆ?

ಜಾಹ್ನವಿ

ಕಳೆದ ಕೆಲ ಸೀಸನ್‌ಗಳಿಂದ ಜಾಹ್ನವಿ ಹೆಸರು ಕೇಳಿ ಬರುತ್ತಲೇ ಇದೆ. ಈವರೆಗೂ ‘ಬಿಗ್ ಬಾಸ್’ ಕಡೆ ಬಾರದ ಜಾಹ್ನವಿ ಈ ಬಾರಿ ಬರ್ತಾರಾ?

ಮಡೆನೂರು ಮನು

‘ಕಾಮಿಡಿ ಕಿಲಾಡಿಗಳು ಸೀಸನ್ 2’ ವಿನ್ನರ್ ಆದವರು ಮಡೆನೂರು ಮನು. ಸದ್ಯ ವಿವಾದದ ಕೇಂದ್ರಬಿಂದು ಆಗಿರುವ ಮಡೆನೂರು ಮನುಗೆ ‘ಬಿಗ್ ಬಾಸ್’ ಅವಕಾಶ ಕೊಡ್ತಾರಾ?

ಸಂಜನಾ ಬುರ್ಲಿ

‘ಪುಟ್ಟಕ್ಕನ ಮಕ್ಕಳು’ ಸೀರಿಯಲ್‌ನಲ್ಲಿ ನಟಿಸುತ್ತಿದ್ದವರು ಸಂಜನಾ ಬುರ್ಲಿ. ಧಾರಾವಾಹಿ ಇಂದ ಹೊರಬಂದಿರುವ ಸಂಜನಾ ಬುರ್ಲಿ ಈ ಬಾರಿ ‘ಬಿಗ್ ಬಾಸ್’ ಮನೆಗೆ ಬರ್ತಾರಾ?

ಪ್ರೇರಣಾ ಕಂಬಂ

‘ರಂಗನಾಯಕಿ’ ಸೀರಿಯಲ್ ಖ್ಯಾತಿಯ ಪ್ರೇರಣಾ ಕಂಬಂ ಈಗಾಗಲೇ ತೆಲುಗು ‘ಬಿಗ್ ಬಾಸ್’ನಲ್ಲಿ ಸಖತ್ ಸೌಂಡ್ ಮಾಡಿದ್ದರು. ಕಳೆದ ಬಾರಿ ಶೋಭಾ ಶೆಟ್ಟಿ ಬಂದಂತೆ ಈ ಬಾರಿ ಪ್ರೇರಣಾ ಕಂಬಂ ಬರ್ತಾರಾ?

ಯಶಸ್ವಿನಿ ಮಾಸ್ಟರ್ ಆನಂದ್

ಮಾಸ್ಟರ್ ಆನಂದ್‌ ‘ಬಿಗ್ ಬಾಸ್ ಕನ್ನಡ 3’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಪತ್ನಿ ಯಶಸ್ವಿನಿ ‘ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್’ ಆದರು. ಕಲರ್ಸ್ ಕನ್ನಡ ವಾಹಿನಿ ಇಂದ ಜನಪ್ರಿಯತೆ ಪಡೆದಿರುವ ಯಶಸ್ವಿನಿ ‘ಬಿಗ್ ಬಾಸ್’ ಕದ ತಟ್ಟುತ್ತಾರಾ?

ರೀಲ್ಸ್ ರೇಷ್ಮಾ

ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಸಾಂಗ್ಸ್ ರೇಂಜಿಗೆ ಡ್ಯಾನ್ಸ್ ಮಾಡಿ, ರೀಲ್ಸ್ ಮಾಡಿ ಫೇಮಸ್ ಆಗಿರೋರು ರೇಷ್ಮಾ. ಇವರು ಡ್ಯಾನ್ಸ್ ಮಾಡೋಕೂ ಸೈ, ಆಕ್ಟ್ ಮಾಡೋಕೂ ಸೈ. ಈಗಾಗಲೇ ‘ಗಿಚ್ಚಿ ಗಿಲಿಗಿಲಿ’ ಶೋಗೆ ಬಂದಿದ್ದ ರೀಲ್ಸ್ ರೇಷ್ಮಾ ‘ಬಿಗ್ ಬಾಸ್’ ಮನೆಗೂ ಬರ್ತಾರಾ?


Spread the love

Leave a Reply