ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಹುಷಾರ್ – ಕಠಿಣ ಕ್ರಮಕ್ಕೆ ಮುಂದಾದ ಬೆಂಗಳೂರು ಪೊಲೀಸ್!

Spread the love

ಇತ್ತೀಚೆಗೆ ಟ್ರಾಫಿಕ್ ರೂಲ್ಸ್ (Traffic rules) ಬ್ರೇಕ್ ಮಾಡೋರ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸರು (Police) ರೂಲ್ಸ್ ಬ್ರೇಕ್ ಮಾಡೋ ಜನರಿಗೆ ತಕ್ಕ ಪಾಠ ಕಲಿಸೋಕೆ ಮುಂದಾಗಿದ್ದಾರೆ.

ಬೆಂಗಳೂರಲ್ಲಿ ಕಠಿಣ ನಿಯಮವಳಿಗಳನ್ನ ಜಾರಿ ಮಾಡಿದರೂ ನಗರದ ಟ್ರಾಫಿಕ್ ಮಾತ್ರ ಹತೋಟಿಗೆ ಬರುತ್ತಿಲ್ಲ.

ಈ ಈ ಸಮಸ್ಯೆಗೆ ಮುಕ್ತಿ ನೀಡಲು ಪ್ರಯತ್ನ ಮಾಡುತ್ತಿರುವ ಪೊಲೀಸರು ಈಗ RTO ಜೊತೆ ಸೇರಿ ಒನ್ ವೇ ಸವಾರರ ವಿರುದ್ಧ ಸಮರಕ್ಕೆ ಮುಂದಾಗಿದ್ದಾರೆ.

ಒನ್ ವೇ ಸವಾರರನ್ನ ಪತ್ತೆ ಹಚ್ಚಿ ಅವರ ಡಿಎಲ್‌ಗಳನ್ನ ನೇರವಾಗಿ ಆರ್‌ಟಿಓಗೆ ರವಾನೆ ಮಾಡಲಿದ್ದಾರೆ. ಬಳಿಕ ಡಿಎಲ್‌ಗಳನ್ನ ಸಾರಿಗೆ ಅಧಿಕಾರಿಗಳು ಪೊಲೀಸರ ಸೂಚನೆಯಂತೆ ಮೂರು ತಿಂಗಳು ಸಸ್ಪೆoಡ್ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

DL ಸಸ್ಪೆoಡ್ ಜತೆಗೆ ಇದರ ಜತೆಗೆ ಫೈನ್ ಹಾಕೋಕೆ ಸಹ ಪೊಲೀಸರು ಪ್ಲಾನ್ ಹಾಕಿಕೊಂಡಿದ್ದಾರೆ. ಎರಡು ಸಲ ನಿಯಮ ಉಲ್ಲಂಘಸಿದ್ರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಎಚ್ಚರಿಕೆ ಸಹ ನೀಡಿದ್ದಾರೆ.

ಪೊಲೀಸರು ಶೀಘ್ರ ತಂಡೋಪ ತಂಡವಾಗಿ ಕಾರ್ಯಚರಣೆಗೆ ಇಳಿಯಲಿದ್ದಾರೆ. ನಗರದ ಎಲ್ಲಾ ಭಾಗಗಳಲ್ಲೂ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ.

WhatsApp Group Join Now

Spread the love

Leave a Reply