ಬ್ಯಾಂಕ್ ನಲ್ಲಿ ಚಿನ್ನ ಇಟ್ಟವರಿಗೆ ಆಘಾತ ಹೊಸ ರೂಲ್ಸ್ ಘೋಷಣೆ – Bank Locker and Gold Loan Rules

Spread the love

Bank Locker and Gold Loan Rules : ಕೆನರಾ ಬ್ಯಾಂಕ್ ನಲ್ಲಿ ಇತ್ತೀಚೆಗೆ 59 ಕಿಲೋ ಚಿನ್ನ ಕಳ್ಳತನವಾದ ಘಟನೆ ನಂತರ ಬ್ಯಾಂಕ್ ಲಾಕರ್ಗಳು ಮತ್ತೆ ಅಡವಿಟ್ಟ ಚಿನ್ನದ ಸುರಕ್ಷತೆಯ ಬಗ್ಗೆ ಹಲವರಲ್ಲಿ ಪ್ರಶ್ನೆಗಳು ಮೂಡಿವೆ. ಇದೀಗ ಬ್ಯಾಂಕ್ ಗಳಲ್ಲಿ ಬಂಗಾರ ಅಡವಿಟ್ಟವರಿಗೆ ಹೊಸ ರೂಲ್ಸ್ ಜಾರಿಯಾಗಿದ್ದು, ಬ್ಯಾಂಕ್ ಗಳಲ್ಲಿ ಚಿನ್ನಾಭರಣಗಳು ಅಥವಾ ಬೆಳೆಬಾಳುವ ವಸ್ತುಗಳು ಕಳವು ಆದಾಗ ಯಾರು ಜವಾಬ್ದಾರರು.? ಅಂತ ಹೇಳಿ ಪ್ರಶ್ನೆ ಬರಬಹುದು. ಅದೇ ರೀತಿ ಇದಕ್ಕೆ ಪರಿಹಾರ ಏನು.? ಅಂತ ತಿಳಿಯೋಣ.

WhatsApp Group Join Now

ನೀವು ಸಾಲಕ್ಕಾಗಿ ಬ್ಯಾಂಕಿನಲ್ಲಿ ಚಿನ್ನವನ್ನ ಅಡೆ ಇಟ್ಟರೆ ನಿಯಮಗಳ ಪ್ರಕಾರ ಸಾಲ ಮರುಪಾವತಿ ಆಗುವವರೆಗೂ ಅದು ಬ್ಯಾಂಕಿನ ಆಸ್ತಿಯಾಗಿರುತ್ತದೆ. ಒಂದು ವೇಳೆ ಈ ಚಿನ್ನ ಕಳುವಾದರೆ ನೀವು ಅಡವಿಟ್ಟ ಚಿನ್ನಕ್ಕೆ ಪರ್ಯಾಯವಾಗಿ ಚಿನ್ನವನ್ನ ಪಡೆಯಲು ಸಾಧ್ಯವಿಲ್ಲ. ಆದರೆ ಚಿನ್ನವನ್ನು ಅಡ ಇಡುವಾಗ ಬ್ಯಾಂಕ್ ನೀಡಿದ ರಷೀದಿಯಲ್ಲಿ ಅದರ ಮೌಲ್ಯವನ್ನ ನಮೂದು ಮಾಡಲಾಗಿರುತ್ತದೆ. ಈ ದಾಖಲೆಯ ಆಧಾರದ ಮೇಲೆ ಆ ಮೌಲ್ಯಕ್ಕೆ ಸಮಾನಾದ ಹಣವನ್ನ ಬ್ಯಾಂಕಿನಿಂದ ಪಡೆಯಬಹುದು. ಇನ್ನು ಬ್ಯಾಂಕ್ ಈ ಹಣವನ್ನ ನಿಮ್ಮ ಬಾಕಿ ಸಾಲಕ್ಕೆ ಕಡಿತಗೊಳಿಸಿ ಉಳಿದ ಮೊತ್ತವನ್ನ ನಿಮಗೆ ಹಿಂತಿರುಗಿಸುತ್ತದೆ.

ಅದೇ ರೀತಿ ಬ್ಯಾಂಕ್ ಲಾಕರ್ ನಲ್ಲಿರುವ ವಸ್ತುಗಳು ಒಂದು ವೇಳೆ ಕಳ್ಳತನವಾದರೆ ಮನೆಯಲ್ಲಿ ಇರಿಸುವುದು ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಅನೇಕರು ತಮ್ಮ ಬೆಳೆಬಾಳುವ ವಸ್ತುಗಳನ್ನ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರ್ತಾರೆ. ಆದರೆ ಒಂದು ವೇಳೆ ಬ್ಯಾಂಕ್ ಲಾಕರ್ ನಲ್ಲಿ ಕಳ್ಳತನವಾಗಿದ್ರೆ ಅಥವಾ ನೈಸರ್ಗಿಕ ವಿಕೋಪದಿಂದ ನಾಶವಾದರೆ ಬ್ಯಾಂಕ್ ಅದಕ್ಕೆ ಸಂಪೂರ್ಣ ಜವಾಬ್ದಾರಿಯಾಗಿರುವುದಿಲ್ಲ. ಬದಲಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಬ್ಯಾಂಕ್ ಕೇವಲ ವಾರ್ಷಿಕ ಲಾಕರ್ ಬಾಡಿಗೆಯ 100 ಪಟ್ಟು ಹಣವನ್ನ ಮಾತ್ರ ಪರಿಹಾರವಾಗಿ ನೀಡುತ್ತದೆ. ಉದಾಹರಣೆಗೆ ನೀವು 50 ಲಕ್ಷ ಮೌಲ್ಯದ ಚಿನ್ನವನ್ನ ಲಾಕರ್ ನಲ್ಲಿ ಇಟ್ಟಿದ್ದರು ಬ್ಯಾಂಕ್ ಕೇವಲ ಲಾಕರ್ ಬಾಡಿಗೆಯ 100 ಪಟ್ಟು ಹಣ ಮಾತ್ರ ನೀಡುತ್ತದೆ.

WhatsApp Group Join Now

ಹಾಗಾದರೆ ಈ ಪರಿಹಾರಕ್ಕೆ ಏನು ಮಾಡಬೇಕು.?

ಲಾಕರ್ ನಲ್ಲಿನ ವಸ್ತುಗಳಿಗೆ ಪೂರ್ಣ ಪರಿಹಾರ ಪಡೆಯಲು ನೀವು ಕೆಲವೊಂದು ಕ್ರಮಗಳನ್ನ ಅನುಸರಿಸಬೇಕು. ಅಂದ್ರೆ ಲಾಕರ್ ನಲ್ಲಿ ಇರಿಸಿರುವ ವಸ್ತುಗಳಿಗೆ ಪ್ರತ್ಯೇಕವಾಗಿ ವಿಮೆ ಅಂದ್ರೆ ಇನ್ಸೂರೆನ್ಸ್ ಮಾಡಿಸುವುದು ಸೂಕ್ತ. ಬ್ಯಾಂಕ್ ನೀಡುವ ಪರಿಹಾರ ಸಾಕಷ್ಟು ಇಲ್ಲದಿದ್ದರೆ ವಿಮಾ ಕಂಪನಿಯು ನಿಮ್ಮ ವಸ್ತುಗಳ ಮೇಲೆ ಪೂರ್ಣ ಮೌಲ್ಯಕ್ಕೆ ಪರಿಹಾರವನ್ನ ನೀಡಬಹುದು. ಅದೇ ರೀತಿ ಲಾಕರ್ ನಲ್ಲಿ ಇಡುವ ಚಿನ್ನ ಬೆಳ್ಳಿ ಅಥವಾ ಇತರ ಬೆಲೆ ಬಾಳುವ ವಸ್ತುಗಳ ಖರೀದಿ ರಶೀದಿಗಳನ್ನ ಕಡ್ಡಾಯವಾಗಿ ಇಟ್ಟಕೊಳ್ಳಿ. ಈ ದಾಖಲೆಗಳು ನಿಮ್ಮ ವಸ್ತುಗಳು ಕಳ್ಳತನವಾದಾಗ ಅದರ ಮೌಲ್ಯವನ್ನು ಸಾಬಿತು ಪಡಿಸಲು ಸಾಧ್ಯವಾಗುತ್ತದೆ.

WhatsApp Group Join Now

Spread the love

Leave a Reply