Bank Loan Rules : ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ನಿರ್ದಿಷ್ಟ ವ್ಯಕ್ತಿಗಳಿಗೆ ಸಾಲ ನೀಡುವುದನ್ನ ನಿಲ್ಲಿಸುವಂತೆ ಬ್ಯಾಂಕ್ ಗಳಿಗೆ ಮತ್ತೆ ಎನ್ಬಿಎಫ್ ಸಿಗಳಿಗೆ ಇದೀಗ ಸೂಚನೆ ನೀಡಿದೆ. ಇನ್ಮುಂದೆ ಈ ಐದು ರೀತಿಯ ಜನರಿಗೆ ಇನ್ಮುಂದೆ ಸಾಲ ಸಿಗುವುದು ಬಹಳಷ್ಟು ಕಷ್ಟ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಒಬ್ಬ ವ್ಯಕ್ತಿ ಹಿಂದಿನ ಸಾಲಗಳನ್ನ ಸರಿಯಾಗಿ ಮರುಪಾವತಿ ಮಾಡದಿದ್ರೆ ಅವರಿಗೆ ಹೊಸ ಸಾಲ ಸಿಗುವುದು ಬಹಳಷ್ಟು ಕಷ್ಟ. ಇದೀಗ ಈ ರೂಲ್ಸ್ ಈ ಹಿಂದೆ ಜಾರಿಯಾಗಿದ್ರೂ ಕೂಡ ಇನ್ಮುಂದೆ ಬ್ಯಾಂಕುಗಳು ಇದನ್ನ ಬಹಳ ಕಟ್ಟುನಿಟ್ಟಾಗಿ ಫಾಲೋ ಮಾಡಬೇಕು ಅಂತ ಹೇಳಿ ಆರ್ಬಿಐ ಇದೀಗ ಸೂಚನೆಯನ್ನ ನೀಡಿದೆ. ಉತ್ತಮ ಕ್ರೆಡಿಟ್ ಸ್ಕೋರ್ ಸಾಮಾನ್ಯವಾಗಿ 750 ಕ್ಕಿಂತ ಹೆಚ್ಚಿದ್ದರೆ ಉತ್ತಮ ಹಣಕಾಸು ಶಿಸ್ತನ್ನ ಇದು ಸೂಚನೆ ಮಾಡುತ್ತದೆ. ಆದರೆ ಕಡಿಮೆ ಸ್ಕೋರ್ ಇದ್ದರೆ ಸಾಲದ ಅಪಾಯ ಹೆಚ್ಚಿರುವುದರಿಂದ ಬ್ಯಾಂಕುಗಳು ಸಾಲ ನೀಡಲು ಹಿಂಜರಿಯುವುದು ಕೂಡ ಸಾಮಾನ್ಯವಾಗಿರುತ್ತದೆ. ಇನ್ಮುಂದೆ ಕೂಡ ಇದನ್ನ ಬಹಳಷ್ಟು ಕಟ್ಟುನಿಟ್ಟಾಗಿ ಆಗಿ ಬ್ಯಾಂಕುಗಳು ಜಾರಿಗೆ ತರಲಿದೆ.
ಅದೇ ರೀತಿ ಬ್ಯಾಂಕುಗಳು ಸಾಲಗಾರರ ಮರುಪಾವತಿ ಸಾಮರ್ಥ್ಯವನ್ನ ಖಚಿತಪಡಿಸಿಕೊಂಡು, ಆದಾಯದ ಪುರವೆಗಳನ್ನು ಕೇಳಿ ಸಾಲ ನೀಡುತ್ತವೆ. ಈ ನಿಯಮ ಕೂಡ ಇನ್ಮುಂದೆ ಕಟ್ಟುನಿಟ್ಟಾಗಿ ಆಗಿ ಫಾಲೋ ಮಾಡಬೇಕಾಗುತ್ತದೆ. ಅದೇ ರೀತಿ ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿಸಿದವರನ್ನ ಬ್ಯಾಂಕ್ಗಳು ಬ್ಲಾಕ್ ಲಿಸ್ಟ್ಗೆ ಸೇರಿಸುವುದು ಸಾಮಾನ್ಯ ಕ್ರಮ. ಇಂತಹ ವ್ಯಕ್ತಿಗಳಿಗೂ ಕೂಡ ಇನ್ಮುಂದೆ ಸಾಲ ಸಿಗುವುದಿಲ್ಲ. ಆದಾಯದ ಸಾಕ್ಷಿ ಇಲ್ಲದವರು, ಸ್ಯಾಲರಿ ಪ್ರೂಫ್ ಇಲ್ಲದವರು, ಇನ್ನು ಐಟಿಆರ್ ಫಾರ್ಮ್ ಇಲ್ಲದವರಿಗೆ, ಲೋನ್ ಸಿಗುವುದಿಲ್ಲ.
ಆರ್ಬಿಐ ಡಿಫಾಲ್ಟರ್ ಬ್ಲಾಕ್ ಲಿಸ್ಟ್ ಲಿಸ್ಟ್ ನಲ್ಲಿ ಇದ್ದವರಿಗೆ ಲೋನ್ ಕೂಡ ಇನ್ಮುಂದೆ ಪ್ರೊಸೆಸ್ ಆಗುವುದಿಲ್ಲ. ಹೆಚ್ಚಿನ ಇಎಂಐ ಇರುವವರು ಅಂದ್ರೆ ಆದಾಯ ಐವತ್ತು ಗಿಂತ ಹೆಚ್ಚು ಇಎಂಐ ಇದ್ದರೆ ಇನ್ಮುಂದೆ ಹೊಸ ಲೋನ್ ಸಿಗುವುದಿಲ್ಲ. ಆರ್ಬಿಐ ಈ ಕುರಿತು ಈ ನಿಯಮ ಮೊದಲೇ ಜಾರಿ ಮಾಡಿದ್ರು ಕೂಡ ಈಗ ಮತ್ತಷ್ಟು ಕಟ್ಟುನಿಟ್ಟಾಗಿ ಆಗಿ ಅನುಸರಿಸಬೇಕು ಎಂದು ಬ್ಯಾಂಕ್ ಗಳಿಗೆ ಸೂಚನೆ ನೀಡಿವೆ. ಸಾರ್ವಜನಿಕರು ಸಾಲ ಪಡೆಯಬೇಕಾದ್ರೆ ಇನ್ಮುಂದೆ ಈ ರೂಲ್ಸ್ ಕೂಡ ಅನುಸರಿಸುವ ಅವಶ್ಯಕ.