ನೀವು ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಥವಾ ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆಯನ್ನ ಹೊಂದಿದ್ದರೆ ನೀವು ಜಾರಿಗೆ ಬಂದಿರುವ ಈ ಹೊಸ ನಿಯಮವನ್ನ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. ಈ ಮೂರು ಬ್ಯಾಂಕಿನಲ್ಲಿ ಯಾರೆಲ್ಲಾ ಎರಡು ಲಕ್ಷಕ್ಕಿಂತ ಅಧಿಕ ಹಣವನ್ನು ಇಟ್ಟಿದ್ದಾರೋ, ಅವರು ಈ ನಿಯಮವನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ.
ಇತ್ತೀಚಿಗೆ ಭಾರತೀಯ ತೆರಿಗೆ ಇಲಾಖೆ ತೆರಿಗೆ ನಿಯಮವನ್ನ ಕಠಿಣ ಮಾಡಿರುವುದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಅದೇ ರೀತಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆಯನ್ನು ಹೊಂದಿರುವವರು ಹಣ ಠೇವಣಿ ಮಾಡುವುದಕ್ಕೂ ಸಂಬಂಧಪಟ್ಟಂತೆ ಕೆಲವು ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.
ಇನ್ನು ಮುಂದೆ ಈ ಮೂರು ಬ್ಯಾಂಕಿನಲ್ಲಿ ಹಣವನ್ನ ಠೇವಣಿ ಮಾಡುವವರು ಕಡ್ಡಾಯವಾಗಿ ಕೆವೈಸಿ ಯನ್ನ ಅಪ್ಡೇಟ್ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಯಾವುದೇ ಬ್ಯಾಂಕಿನಲ್ಲಿ ಹೆಚ್ಚಿನ ಹಣವನ್ನ ಡೆಪಾಸಿಟ್ ಮಾಡಿದ್ರೆ ನೀವು ಪಾನ್ ಕಾರ್ಡನ್ನ ಕೊಡಬೇಕಾಗುತ್ತದೆ. ಅದೇ ರೀತಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಬ್ಯಾಂಕ್ ಆಫ್ ಬರೋಡಾದಲ್ಲಿ ನೀವು ಒಂದೇ ಬಾರಿಗೆ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನ ಜಮಾ ಮಾಡಬೇಕಿದ್ರೆ ನೀವು ಕಡ್ಡಾಯವಾಗಿ ಪಾನ್ ಕಾರ್ಡನ್ನು ಕೊಡಬೇಕು.
ಅದೇ ರೀತಿಯಲ್ಲಿ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರು ಪದೇ ಪದೇ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿದರೆ ಅವರು ಆ ಹಣಕ್ಕೆ ಮೂಲವನ್ನ ಕೊಡಬೇಕಾಗುತ್ತದೆ. ಭಾರತೀಯ ತೆರಿಗೆ ಇಲಾಖೆ ಈಗ ಪ್ರತಿಯೊಬ್ಬರ ಬ್ಯಾಂಕ್ ಖಾತೆಯ ಮಾಹಿತಿಯನ್ನ ಪಡೆದುಕೊಂಡಿದೆ. ಅದೇ ರೀತಿಯಲ್ಲಿ ಭಾರತೀಯ ತೆರಿಗೆ ಇಲಾಖೆ ಯಾವ ವ್ಯಕ್ತಿ ಬ್ಯಾಂಕ್ ಖಾತೆಗೆ ಪದೇ ಪದೇ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನ ಜಮಾ ಮಾಡುತ್ತಾನೋ ಆತನಿಗೆ ತೆರಿಗೆ ನೋಟೀಸ್ ಕಳುಹಿಸಲು ಮುಂದಾಗಿದೆ.
ಒಬ್ಬ ವ್ಯಕ್ತಿ ತೆರಿಗೆ ನೋಟೀಸ್ ನ್ನ ಪಡೆದುಕೊಂಡರೆ ಆ ತೆರಿಗೆ ನೋಟೀಸ್ ಗೆ ಕಡ್ಡಾಯವಾಗಿ ಉತ್ತರವನ್ನು ಕೊಡಬೇಕು. ಹಣ ಎಲ್ಲಿಂದ ಬಂತು ಮತ್ತು ಆ ಹಣಕ್ಕೆ ಮೂಲ ಯಾವುದು ಅನ್ನುವುದರ ಬಗ್ಗೆ ನೀವು ಉತ್ತರವನ್ನು ಕೊಡಬೇಕಾಗುತ್ತದೆ. ಒಂದುವೇಳೆ ತೆರಿಗೆ ಇಲಾಖೆಯ ನೋಟೀಸ್ಗೆ ಉತ್ತರವನ್ನ ಕೊಡದೆ ಇದ್ದರೆ ಶೇಕಡ 70ರಷ್ಟು ದಂಡವನ್ನ ಪಾವತಿ ಮಾಡಬೇಕು. ಸಾಮಾನ್ಯವಾಗಿ ಎಲ್ಲಾ ಬ್ಯಾಂಕುಗಳಿಗೆ ಈ ನಿಯಮ ಅನ್ವಯವಾಗುತ್ತದೆ.
ಆದರೆ ಇತ್ತೀಚಿಗೆ ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡದಲ್ಲಿ ಹೆಚ್ಚಿನ ಜನರು ತಮ್ಮ ಖಾತೆಯನ್ನು ತೆರೆಯುತ್ತಿದ್ದಾರೆ. ಈ ಕಾರಣಗಳಿಂದ ಖಾತೆ ಹೊಂದಿರುವ ಪ್ರತಿಯೊಬ್ಬರು ಕೂಡ ಈ ನಿಯಮವನ್ನು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ.

ಈ 3 ಬ್ಯಾಂಕ್ ನಲ್ಲಿ 2 ಲಕ್ಷದವರೆಗೆ ಹಣ ಇದ್ದವರಿಗೆ ಹೊಸ ರೂಲ್ಸ್ | Bank Account Rules
WhatsApp Group
Join Now