ಸಂಸತ್ತಲ್ಲಿ ಪ್ರಧಾನಿಗೆ ಬೆದರಿಕೆ, ಅಮಿತ್‌ ಶಾ ರಾಜೀನಾಮೆ ನೀಡಲಿ : ಬಿ.ಕೆ.ಹರಿಪ್ರಸಾದ್‌

Spread the love

ಲೋಕಸಭೆ ಸ್ಪೀಕರ್‌ ಹೇಳಿಕೆಯು ಕೇಂದ್ರ ಗೃಹ ಸಚಿವರ ವೈಫಲ್ಯವನ್ನು ತೋರಿಸುತ್ತದೆ. ಆದ್ದರಿಂದ ಕೂಡಲೇ ಅಮಿತ್‌ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಆಗ್ರಹಿಸಿದರು.

ದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವತಃ ಸ್ಪೀಕರ್‌ ಹೇಳಿಕೆ ನೋಡಿದರೆ ಸಂಸತ್ತಿನಲ್ಲಿ ಭದ್ರತಾಲೋಪ ಇದೆ ಎಂದಾಗುತ್ತದೆ.

ಪ್ರಧಾನಿಗೆ ಅವರ ಮನೆ (ಸಂಸತ್ತು)ಯಲ್ಲೇ ಬೆದರಿಕೆ ಇದೆ ಎಂದಾದರೆ, ಇದು ಅಮಿತ್‌ ಶಾ ವೈಫಲ್ಯವನ್ನು ಸೂಚಿಸುತ್ತದೆ. ಆದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇಂತಹ ಪುಕ್ಕಲು ಪ್ರಧಾನಿಯನ್ನು ಈ ದೇಶದಲ್ಲಿ ಯಾವತ್ತೂ ನೋಡಿರಲಿಲ್ಲ. ಆರೆಸ್ಸೆಸ್‌ನಲ್ಲಿ ತರಬೇತಿ ಪಡೆದವರೆಲ್ಲರೂ ಹೇಡಿಗಳು ಅಂತ ಮೊದಲೇ ಇದೆ. ಬ್ರಿಟಿಷರ ಕಾಲದಿಂದಲೂ ನೋಡಿದ್ದೇವೆ ಎಂದು ಮೂದಲಿಸಿದರು.

WhatsApp Group Join Now

Spread the love

Leave a Reply