Horoscope Today : ಡಿಸೆಂಬರ್‌ 12 ರಂದು ಯಾವ ರಾಶಿಗೆ ಶುಭ.? ಯಾವ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಉಜ್ವಲ ಕಲ್ಪನಾಶಕ್ತಿ, ಕ್ರಿಯಾತ್ಮಕ ಪ್ರೇರಣೆ ಮತ್ತು ನಾವೀನ್ಯ ಕಲಾತ್ಮಕತೆ ಇವೆಲ್ಲವೂ ಇಂದು ನಿಮ್ಮ ದಿನವನ್ನು ಗುರುತಿಸಲಿದೆ. ಇಂದು ನಿಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿಯು ಅತ್ಯುತ್ತಮವಾಗಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನೀವು ಅದೃಷ್ಟಕಾರಿ ಮೇಷ ರಾಶಿಯವರು ಕಲ್ಪನಾ ಲೋಕದಲ್ಲಿರುತ್ತೀರಿ ಮತ್ತು ನಿಮ್ಮ ಕ್ರಿಯಾತ್ಮಕತೆ ಮತ್ತು ನಾವೀನ್ಯತೆಯು ಉತ್ತುಂಗಕ್ಕೇರಲಿದೆ. ಸಾಹಿತ್ಯ, ಕಲೆ ಮತ್ತು ಶೈಕ್ಷಣಿಕ ಆಸಕ್ತಿಗಳು ಇಂದಿನ ಗ್ರಹಗತಿಗಳ ಅದ್ಭುತ ಪ್ರಭಾವದ ಅನುಗ್ರಹವನ್ನು ಪಡೆಯಲಿದೆ. ಇವೆಲ್ಲದರ ಜೊತೆಗೆ ಮನೆಯಲ್ಲಿನ ಸೊಗಸಾದ ಮತ್ತು ಅಕ್ಷುಬ್ಧ ವಾತಾವರಣವು … Read more

ದೇಹದಲ್ಲಿ ಇದೊಂದು ವಿಟಮಿನ್‌ ಕೊರತೆಯಿದ್ದರೆ ಆಗುತ್ತೆ ಹಾರ್ಟ್ ಅಟ್ಯಾಕ್.!

ಇಂದಿನ ಕಾಲದಲ್ಲಿ, ಹೃದ್ರೋಗದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ವಯಸ್ಕರು ಮಾತ್ರವಲ್ಲ, ಯುವಕರು ಸಹ ಇದನ್ನು ಎದುರಿಸಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೃದ್ರೋಗವು ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ಹೃದಯ ಕಾಯಿಲೆ ಹೆಚ್ಚುತ್ತಿರುವುದರ ಹಿಂದೆ ಅನೇಕ ಅಂಶಗಳಿವೆ. ಅವುಗಳಲ್ಲಿ ಮುಖ್ಯವಾಗಿ ಅನಾರೋಗ್ಯಕರ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾನಸಿಕ ಒತ್ತಡ ಸೇರಿವೆ. ಕೆಲವು ಅಧ್ಯಯನಗಳು ಜೀವಸತ್ವಗಳ ಕೊರತೆಯು ಹೃದಯವನ್ನು ದುರ್ಬಲಗೊಳಿಸಲು ಸಹ ಕೆಲಸ ಮಾಡುತ್ತದೆ ಎಂದು ತೋರಿಸಿವೆ. ಇವು ಯಾವ ಜೀವಸತ್ವಗಳು ಎಂದು ನಾವು ನಿಮಗೆ … Read more

ಬೆತ್ತಲೆ ಫೋಟೋ ವೈರಲ್ ಬೆದರಿಕೆ ; ಮನನೊಂದು ಕೇರಳದ MBA ವಿದ್ಯಾರ್ಥಿ ಆತ್ಮಹತ್ಯೆ

ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಹೆಸರುಘಟ್ಟ ರಸ್ತೆಯ ಶಾಂತಿನಗರದಲ್ಲಿ ನಡೆದಿದೆ. ಕೇರಳ ಮೂಲದ ಜಗನ್ ಮೋಹನ್ (25) ಮೃತ ವಿದ್ಯಾರ್ಥಿ. ಖಾಸಗಿ ಕಾಲೇಜಿನಲ್ಲಿ ಎಂಬಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಾಲೇಜು ಸಮೀಪದಲ್ಲಿರುವ ಶಾಂತಿನಗರದಲ್ಲಿ ರೂಂ ಬಾಡಿಗೆ ಪಡೆದು ವಾಸವಿದ್ದು,  ಇದೀಗ ಅದೇ ರೂಮಿನಲ್ಲಿ ಡೆತ್‌ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಡಿಯೋ ಕಾಲ್ ಟಾರ್ಚರ್ಗೆ ಹೆದರು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಡೆತ್ನೋಟ್ನಲ್ಲಿ 3 ಫೋನ್ ನಂಬರ್ ಉಲ್ಲೇಖ … Read more

ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ವಂದೇ ಮಾತರಂ ಬಳಸಲಾಗ್ತಿದೆ : ನಟ ಕಿಶೋರ್‌ ಆಕ್ರೋಶ!

ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘೋಷವಾಗಿದ್ದ ವಂದೇ ಮಾತರಂ ಗೀತೆ 150ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಂಕಿಮಚಂದ್ರ ಚಟರ್ಜಿ ಅವರು ಬರೆದ ದೇಶಪ್ರೇಮದ ಗೀತೆಯನ್ನು ಚರ್ಚೆಯನ್ನು ಸಂಸತ್ತಿನಲ್ಲಿ ಇರಿಸಿಕೊಳ್ಳಲಾಗಿದೆ. ಸಂಸತ್‌ನ ಚಳಿಗಾಲದ ಅಧಿವೇಶನದ ಆರಂಭದ ದಿನಗಳನ್ನು ವಂದೇ ಮಾತರಂ ಚರ್ಚೆಗೆ ಮೀಸಲಿಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ವಿಪಕ್ಷದ ಅನೇಕ ನಾಯಕರು ಇದರ ಬಗ್ಗೆ … Read more

2 ಸರ್ಕಾರಿ ಬಸ್, ಜೀಪ್ ಮಧ್ಯೆ ಭೀಕರ ಸರಣಿ ಅಪಘಾತ : ಗಂಡ-ಹೆಂಡತಿ ಸೇರಿ ಮೂವರು ಸಾವು

ಎರಡು ಕೆಎಸ್ಆರ್ಟಿಸಿ ಬಸ್ ಮತ್ತು ಜೀಪ್ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ (Serial Accident) ಗಂಡ ಹೆಂಡತಿ ಸೇರಿ ಮೂವರು ಸಾವನ್ನಪ್ಪಿರುವಂತಹ (death) ಘಟನೆ ಕಲಬುರಗಿಯ ಸಂಚಾರಿ ಠಾಣೆ 1ರ ವ್ಯಾಪ್ತಿಯಲ್ಲಿ ನಡೆದಿದೆ. ಸುಲೋಚನಾ(70), ಚಂದ್ರಕಾಂತ್ (82) ಮತ್ತು ಚಾಲಕ ಮಿಟ್ಟೆಸಾಬ್(35) ಮೃತರು. ಇನ್ನು ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದದ್ದೇನು? ಇನ್ನು ಮೃತರು ಅಫಜಲಪುರ ತಾಲ್ಲೂಕಿನ ತೆಲ್ಲೂಣಗಿ ಗ್ರಾಮದ ನಿವಾಸಿಗಳು. … Read more

ಡಿವೈಡರ್‌ ದಾಟಿ ಬಸ್‌‍ಗೆ ಡಿಕ್ಕಿ ಹೊಡೆದ ಕಾರು, ಮೂವರು ಯುವಕರ ದುರ್ಮರಣ

ಅತೀ ವೇಗವಾಗಿ ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿ ಸಾರಿಗೆ ಬಸ್‌‍ಗೆ ಗುದ್ದಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದೇವನಹಳ್ಳಿ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ. ಮೃತರನ್ನು ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿ ಗ್ರಾಮದ ಸುಮನ್‌ (28), ಸಾಗರ್‌ (23) ಹಾಗೂ ಮೋಹನ್‌ಕುಮಾರ್‌(33) ಎಂದು ಗುರುತಿಸಲಾಗಿದೆ. ಚಿಕ್ಕಬಳ್ಳಾಪುರದ ಕಡೆಯಿಂದ ಕಾರಿನಲ್ಲಿ ಈ ಮೂವರು ಯುವಕರು ರಾತ್ರಿ 11.30 ರ ಸಮಯದಲ್ಲಿ ಬೆಂಗಳೂರು ಕಡೆಗೆ ಬರುತ್ತಿದ್ದಾಗ … Read more

ಹಾಸ್ಟೆಲ್ನಲ್ಲಿ BAMS ವಿದ್ಯಾರ್ಥಿ ಅನುಮಾನಾಸ್ಪದ ಸಾವು : ಕಾಲೇಜ್ ವಿರುದ್ಧ ಕೊಲೆ, ಸಾಕ್ಷಿ ನಾಶ ಆರೋಪ

ಕಾಲೇಜ್ ಹಾಸ್ಟೆಲ್ನಲ್ಲಿ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ವಿದ್ಯಾರ್ಥಿಯ (student) ಶವ ಪತ್ತೆ (dead body found)ಆಗಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದ ಎಸ್ಬಿಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಸ್ಟೆಲ್ನಲ್ಲಿ ನಡೆದಿದೆ. BAMS ಅಂತಿಮ ವರ್ಷದಲ್ಲಿ ಓದುತ್ತಿದ್ದ ಈಶ್ವರ ಗಾದಗೆ(21) ಮೃತ ವಿದ್ಯಾರ್ಥಿ. ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕುಟುಂಬಸ್ಥರು ಆಡಳಿತ‌ ಮಂಡಳಿ, ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಟುಂಬಸ್ಥರಿಗೆ ಮಾಹಿತಿ ನೀಡದೇ ಆಸ್ಪತ್ರೆಗೆ ಮೃತದೇಹವನ್ನು … Read more

12 ವೋಟ್ ಪಡೆದಿದ್ದು ಸರ್ದಾರ್ ವಲ್ಲಭಾಯಿ ಪಟೇಲ್, ಆದ್ರೆ ನೆಹರೂ ಹೇಗೆ ಪ್ರಧಾನಿಯಾದ್ರು

ಸ್ವಾತಂತ್ರ್ಯಾ ನಂತರ ಪ್ರಧಾನಿ ಯಾರಾಗಬೇಕು ಎಂದು ಮತದಾನವಾದಾಗ ಸರ್ದಾರ್ ವಲ್ಲಭಾಯಿ ಪಟೇಲ್ ಗೆ 12 ಮತಗಳು ಬಂದಿತ್ತು. ನೆಹರೂಗೆ ಕೇವಲ 2 ಮತ ಬಂದಿದ್ದು. ಆದರೆ ಕೊನೆಗೆ ಪ್ರಧಾನಿಯಾಗಿದ್ದು ನೆಹರೂ. ಇಲ್ಲಿಯೇ ಮತಗಳ್ಳತನ ಆರಂಭವಾಗಿತ್ತು ಎಂದು ಗೃಹಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಮೇಲೆ ಮತಗಳ್ಳತನದ ಆರೋಪ ಮಾಡಿದ್ದರು. ಈ ಆರೋಪಗಳಿಗೆ ಉತ್ತರಿಸುತ್ತಿದ್ದ ಅಮಿತ್ ಶಾ ಮೊದಲು ಮತಗಳ್ಳತನ ಆರಂಭವಾಗಿದ್ದೇ ನೆಹರೂವಿನಿಂದ ಎಂದಿದ್ದಾರೆ. … Read more

‘BJP- RSS ಭಿನ್ನಾಭಿಪ್ರಾಯದಿಂದ ಪಿತೂರಿ: ವೀರೇಂದ್ರ ಹೆಗ್ಗಡೆ ಅವರ ಮೇಲೆ ಷಡ್ಯಂತ್ರ ; ನನ್ನ ನಿರ್ಧಾರಕ್ಕೆ ಜೈನ ಸಮುದಾಯದಿಂದ ಮೆಚ್ಚುಗೆ’

ವೀರೇಂದ್ರ ಹೆಗ್ಗಡೆ ಅವರ ಕಷ್ಟಕಾಲದಲ್ಲಿ ನಾನು ತೆಗೆದುಕೊಂಡ ಒಂದು ನಿರ್ಧಾರದಿಂದ ಇಡೀ ದೇಶದ ಜೈನ ಸಮುದಾಯದವರು ನೀವು ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಹೇಳಿದರು. ಆಚಾರ್ಯರತ್ನ ಶ್ರೀ 108 ಬಾಹುಬಲಿ ಮುನಿಮಹಾರಾಜರ 94 ನೇ ಜನ್ಮಜಯಂತಿ ಮಹೋತ್ಸವದಲ್ಲಿ ಬುಧವಾರ ಭಾಗವಹಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿದರು. ವೀರೇಂದ್ರ ಹೆಗಡೆ ಅವರ ಮೇಲೆ ಯಾವ ರೀತಿ ಷಡ್ಯಂತ್ರ ಆಯಿತು. ಆಗ ಅವರ ಕಷ್ಟಕಾಲದಲ್ಲಿ ನಾವು ತೆಗೆದುಕೊಂಡ ನಿರ್ಧಾರವನ್ನು ರಾಷ್ಟ್ರೀಯ, ರಾಜ್ಯ … Read more

ಮಂಡ್ಯದಲ್ಲಿ 9 ನೇ ತರಗತಿ ವಿದ್ಯಾರ್ಥಿನಿಗೆ ‘ಲೈನ್’ : ಶಾಲಾ ಬಸ್ ಅಡ್ಡಗಟ್ಟಿದ ಪುಂಡರು ಅರೆಸ್ಟ್

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ವಡ್ಡರಹಳ್ಳಿಯಲ್ಲಿ ಪುಂಡರು ಶಾಲಾ ಬಸ್ ತಡೆದ ಘಟನೆ ನಡೆದಿದೆ. ಬಸ್ ತಡೆದ ಪುಂಡರು ಚಾಲಕನಿಗೆ ಆವಾಜ್ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಡ್ಡರಹಳ್ಳಿ ಗ್ರಾಮದ ಕಿರಣ್ ಮತ್ತು ಗಿರೀಶ್ ಎಂಬ ಯುವಕರು 9 ನೇ ತರಗತಿ ವಿದ್ಯಾರ್ಥಿನಿಗೆ ಲೈನ್ ಹೊಡೆಯುತ್ತಿರುತ್ತಾರೆ. ಬಾಲಕಿಯನ್ನ ಬಸ್ ನಿಂದ ಕೆಳಗೆ ಇಳಿಸುವಂತೆ ಆಗ್ರಹಿಸಿ ಚಾಲಕನಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಪುಂಡರ ಕೃತ್ಯವನ್ನ ಚಾಲಕ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, … Read more