ನಡು ರಸ್ತೆಯಲ್ಲಿಯೇ ಹೊತ್ತಿ ಉರಿದ `ಪ್ರವಾಸಿ ಬಸ್’ : ಮಡಿಕೇರಿಯಲ್ಲಿ ತಪ್ಪಿದ ಭಾರೀ ದುರಂತ.!

ಪ್ರವಾಸಿಗರನ್ನು ಕರೆದೊಯ್ದು ವಾಪಸ್ಸಾಗುತ್ತಿದ್ದ ಕೇರಳ ನೋಂದಣಿ ಹೊಂದಿದ ಖಾಸಗಿ ಪ್ರವಾಸಿ ಬಸ್ಸೊಂದು ವಿರಾಜಪೇಟೆಯ ಮಾಕುಟ್ಟ ಸಮೀಪವಿರುವ ಮಗಡಿಪಾರೆ ಆಂಜನೇಯ ದೇವಾಲಯದ ಬಳಿ ನಡು ರಸ್ತೆಯಲ್ಲೇ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ವರದಿಯಾಗಿದೆ. ಈ ಅವಘಡದಿಂದ ಕೊಡಗು-ಕೇರಳ ಸಂಪರ್ಕ ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಮೈಸೂರಿನಲ್ಲಿ ಪ್ರವಾಸಿಗರನ್ನು ಇಳಿಸಿ, ವಾಪಸ್ ಕೇರಳಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್, ಅಪಘಾತ ಸಂಭವಿಸಿದ ಸಮಯದಲ್ಲಿ ಬಸ್‌ನಲ್ಲಿ ಪ್ರವಾಸಿಗರು ಇರಲಿಲ್ಲ. ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರು ಮಾತ್ರ ಇದ್ದು, … Read more

ಬ್ರೀಝಾ ಕಾರು ಕೊಡೋವರೆಗೂ ತಾಳಿ ಕಟ್ಟಲ್ಲ ಎಂದ ಮದುಮಗ : ಮದುಮಗಳು ಮಾಡಿದ್ದೇನು ಗೊತ್ತಾ?

ಉತ್ತರಪ್ರದೇಶದ ಬರೇಲಿಯಲ್ಲಿ ಮದುವೆ ಮಂಟಪದಲ್ಲೇ ವಿವಾಹ ಕ್ಯಾನ್ಸಲ್ ಆಗಿರುವ ಘಟನೆ ನಡೆದಿದೆ . ವಿವಾಹ ಕ್ಯಾನ್ಸಲ್ ಆಗಲು ವಧು ತೆಗೆದುಕೊಂಡ ಉತ್ತಮ ನಿರ್ಧಾರವೇ ಕಾರಣ ಎನ್ನಲಾಗಿದೆ. ಆಗಿದ್ದೇನು..? ಬರೇಲಿಯ ಓರ್ವ ಯುವಕ ಮತ್ತು ಯುವತಿಯ ವಿವಾಹ ನಿಶ್ಚಯವಾಗಿ ಮೇನಲ್ಲಿ ನಿಶ್ಚಿತಾರ್ಥವಾಗಿತ್ತು. ಡಿಸೆಂಬರ್‌ನಲ್ಲಿ ಮದುವೆ ದಿನಾಂಕ ಫಿಕ್ಸ್ ಆಗಿತ್ತು. ಮದುವೆ ದಿಬ್ಬಣ ಮನೆಯ ತನಕ ಬಂದು, ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ, ಮದುವೆಯೇ ಕ್ಯಾನ್ಸಲ್ ಆಗಿದೆ. ಮಧುಮಗ ವರದಕ್ಷಿಣೆಯಾಗಿ ವಧುವಿನ ತಂದೆ ಬಳಿ 20 ಲಕ್ಷ ರೂಪಾಯಿ ಮತ್ತು … Read more

ಪಾರ್ಟಿ ಮಾಡುತ್ತಿದ್ದವರ ಬಳಿ ಹಣ ಕೇಳಿದ ಪೊಲೀಸರು.? ; ಹೆದರಿ ಬಿಲ್ಡಿಂಗ್ನಿಂದ ಕೆಳಗೆ ಹಾರಿದ ಯುವತಿ

ಇತ್ತೀಚಿಗೆ ಬೆಂಗಳೂರಿನ ಒಬ್ಬ ಪೊಲೀಸ್ ಹೆಡ್ ಕಾನ್ಸ್ಟೇಬಲ್  ಕಳ್ಳತನದ ಆರೋಪಿಯನ್ನು ಬಂಧಿಸಿದ ನಂತರ ಆತನಿಂದಲೇ ಹಣ ವಸೂಲು ಮಾಡಿದ ಘಟನೆ ನಡೆದಿತ್ತು. ಈ ರೀತಿ ಬೆಂಗಳೂರಿನ (Bengaluru) ಪೊಲೀಸರೇ ಅಪರಾಧಗಳಲ್ಲಿ ಶಾಮೀಲಾಗಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದ ಬೆನ್ನಲ್ಲೇ ಬೆಂಗಳೂರು ಪೊಲೀಸರ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪಾರ್ಟಿ ಮಾಡುತ್ತಿದ್ದ ಯುವಕ-ಯುವತಿಯರಿಂದ ಪೊಲೀಸರು ಹಣ ಕೇಳಿದ್ದಕ್ಕಾಗಿ ಭಯಗೊಂಡ ಯುವತಿಯೊಬ್ಬಳು ಹೋಟೆಲ್ ಬಾಲ್ಕನಿಯಿಂದ ಕೆಳಗೆ ಹಾರಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ. ಸಾವು, ಬದುಕಿನ ನಡುವೆ ಹೋರಾಡುತ್ತಿರುವ … Read more

ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಹೋಗಿದ್ದ ಪತ್ನಿ, ಆಕೆ ಕುಟುಂಬದ 6 ಜನರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಗಂಡ!

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಕ್ರೂರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ಗಂಡನ ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಹೋಗಿದ್ದ ಪತ್ನಿ ಮತ್ತು ಆಕೆಯ ಕುಟುಂಬದ ಆರು ಮಂದಿಯ ಮೇಲೆ ಗಂಡ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಡಿಸೆಂಬರ್ 10 ರಂದು ತೆಲಸಂಗ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ತಕ್ಷಣ ವಿಜಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನೆಯ ವಿವರ : ಅಥಣಿ ತಾಲೂಕಿನ ಯಲಿಹಡಲಗಿ … Read more

ಆಸ್ಟ್ರೇಲಿಯಾವನ್ನೇ ಬೆಚ್ಚಿಬೀಳಿಸಿದ ತಂದೆ-ಮಗ; ಯಹೂದಿಗಳ ಮೇಲೆ ದಾಳಿ ನಡೆಸಿದ ಸಾಜಿದ್ ಮತ್ತು ನವೀದ್ ಯಾರು?

ಆಸ್ಪ್ರೇಲಿಯಾದ ಬಾಂಡಿ ಬೀಚ್‌ನಲ್ಲಿ ಹನುಕ್ಕಾ ಹಬ್ಬದ ಸಂಭ್ರಮದಲ್ಲಿದ್ದ ಯಹೂದಿಗಳನ್ನು ಗುರಿಯಾಗಿಸಿಕೊಂಡು, ನಡೆದ ಗುಂಡಿನ ದಾಳಿಯಿಂದಾಗಿ 16 ಜನರು ಮೃತಪಟ್ಟಿದ್ದಾರೆ ಎಂದು ನ್ಯೂ ಸೌಥ್ಸ್‌ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಯಹೂದಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಸಾಜಿದ್‌ ಅಕ್ರಮ್‌ ಮತ್ತು ನವೀದ್‌ ಅಕ್ರಮ್‌ ಯಾರು? ಇವರಿಬ್ಬರ ನಂಟೇನು.?ಏನಿದು ಘಟನೆ? ಭಾನುವಾರ ಸಿಡ್ನಿಯ ಬೀಚ್‌ನಲ್ಲಿ ನಡೆದಂತಹ ಘಟನೆ ಕಳೆದ 30 ವರ್ಷಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಎಂಟು ದಿನಗಳ ಕಾಲ ನಡೆಯುವ ಹನುಕ್ಕಾ ಬೈ ದಿ ಸೀ ಹಬ್ಬ … Read more

ಶಾಮನೂರು ಶಿವಶಂಕರಪ್ಪ : ಓದಿದ್ದು ಹತ್ತನೇ ಕ್ಲಾಸು , ಕಟ್ಟಿದ್ದು ಸಾವಿರಾರು ಕೋಟಿ ರೂ. ಸಾಮ್ರಾಜ್ಯ!

ಹಿರಿಯ ರಾಜಕಾರಣಿ, ಉದ್ಯಮಿ, ಮುತ್ಸದ್ಧಿ ಶಾಮನೂರು ಶಿವಶಂಕರಪ್ಪ ಭಾನುವಾರ ವಯೋಸಹಜ ಖಾಯಿಲೆಗಳಿಂದ ಮೃತಪಟ್ಟಿದ್ದಾರೆ. ಅವರ ಜೀವನದ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ. ಶಾಮನೂರು ಶಿವಶಂಕರಪ್ಪ ಜೂನ್ 16 1931ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಶಾಮನೂರು ದಾಂಪತ್ಯ‌ ಜೀವನ ಶಾಮನೂರು ಶಿವಶಂಕರಪ್ಪನವರ ಪತ್ನಿ ಎಸ್ಎಸ್ ಪಾರ್ವತಮ್ಮ. ಈ ದಂಪತಿಗೆ ಏಳು ಜನ ಮಕ್ಕಳು. ಎಸ್ಎಸ್ ಮಲ್ಲಿಕಾರ್ಜುನ್ ಈಗ ತೋಟಗಾರಿಕೆ ಸಚಿವರಾಗಿದ್ದಾರೆ. ಎಸ್ ಎಸ್ ಮಲ್ಲಿಕಾರ್ಜುನ ಅಲ್ಲದೇ ಎಸ್ಎಸ್ ಬಕ್ಕೇಶ್, ಎಸ್ಎಸ್ … Read more

ಡಿಸೆಂಬರ್‌ 15 ರಂದು ಯಾವ ರಾಶಿಗೆ ಶುಭ.? ಯಾವ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

2025 ಡಿಸೆಂಬರ್‌ 15 ಸೋಮವಾರದಂದು ಯಾವ ರಾಶಿಗೆ ಶುಭವಾಗಲಿದೆ? ಯಾವ ರಾಶಿಗೆ ನಷ್ಟವಾಗಲಿದೆ..? ನಿಮ್ಮ ರಾಶಿಗೆ ಅನುಸಾರ ಯಾರಿಗೆ ಶುಭ? ಯಾರಿಗೆ ಅಶುಭ? ಎಲ್ಲಾ ರಾಶಿಗಳ ಪಾಪ ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲ ನೀಡುತ್ತವೆ. ಈ ದಿನ ಈ ರಾಶಿಯವರು ತುಂಬಾ ಮಂಗಳಕರ ಎಂದು ನಂಬಲಾಗುತ್ತದೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ಈ ಕೆಳಗೆ … Read more

ನನ್ನ ಮಗನಿಗೆ ಆಪರೇಷನ್‌ ಇತ್ತು, ಆದ್ರೆ 140 ಕೋಟಿ ಜನರಿಗಾಗಿ ನಾನು ಇಲ್ಲಿಯೇ ಉಳಿದೆ: ʻವೋಟ್‌ ಚೋರಿʼ ಸಮಾವೇಶದಲ್ಲಿ ಖರ್ಗೆ!

ಇಂದು ನನ್ನ ಮಗನಿಗೆ 8 ಗಂಟೆಯ ಆಪರೇಷನ್‌ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್‌ ಮಾಡಿ ಬರಲೇಬೇಕು ಅಂತ ಹೇಳಿದ್ರು. ನಾನು ಅದಕ್ಕೆ ಗಡಿಯಲ್ಲಿ ಸೈನಿಕರು ಜೀವ ಬಲಿ ಕೊಡ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ರು. ಅವರ ತ್ಯಾಗದ ಮುಂದೆ ನಮ್ಮದೇನು? ಅಂತ ಹೇಳಿ ದೇಶಕ್ಕಾಗಿ ನಾನು ಇಲ್ಲಿಯೇ ಉಳಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶ ಬೃಹತ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ … Read more

Santhosh Lad : ಶಿವಾಜಿ ಸೇನೆಯಲ್ಲಿ ಮುಸ್ಲಿಮರಿದ್ದರು.! ಸಂತೋಷ್ ಲಾಡ್ ಹೇಳಿಕೆಗೆ ಮರಾಠ ಯುವಕರ ಆಕ್ರೋಶ.!

ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿರುದ್ಧ ಮರಾಠಾ ಸಮುದಾಯದ ಯುವಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಭಾಷಣದ ಬಳಿಕ ಮಾತನಾಡಿದ ಸಂತೋಷ್ ಲಾಡ್, ನಾನೂ ಕೂಡ ಶಿವಾಜಿ ಮಹಾರಾಜರ ವಂಶಸ್ಥನೇ. ಆದರೆ ಇತಿಹಾಸ ತಿರುಚಲಾಗಿದೆ. ಮರಾಠರು ಮುಸ್ಲಿಂ ವಿರೋಧಿಗಳಾಗಿರಲಿಲ್ಲ, ಮೊಘಲರ ವಿರೋಧಿಗಳಾಗಿದ್ದು ಎಂದಿದ್ದಾರೆ. ಶಿವಾಜಿ ಮಹಾರಾಜರಿಗೆ ಸಿಂಹದ ಉಗುರು ಪ್ಲಾನ್ ನೀಡಿದ್ದು ಒಬ್ಬ ಮುಸ್ಲಿಂ ಸೇವಕ ಅಂತ ಲಾಡ್ ಹೇಳಿದ್ರು. ಇದಕ್ಕೆ ಸಿಟ್ಟಿಗೆದ್ದ ಮರಾಠ … Read more

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಬೆನ್ನಲ್ಲೇ, ರಾಜ್ಯದಲ್ಲಿ ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ!

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೊಟ್ಟೆಗಳ ಮಾದರಿ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಘೋಷಣೆ ಮಾಡಿದೆ. ಮೊಟ್ಟೆಗಳನ್ನು ಲ್ಯಾಬ್ ನಲ್ಲಿ ಪರೀಕ್ಷಿಸುವಂತೆ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ ಒಂದು ವೇಳೆ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದರೆ ಮೊಟ್ಟೆ ಉತ್ಪಾದಕರ ವಿರುದ್ಧ ಕಠಿಣವಾದ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ರಾಜ್ಯಾದ್ಯಂತ ಮೊಟ್ಟೆಗಳ ಮಾದರಿ … Read more