ಇನ್ಶೂರೆನ್ಸ್ ಹಣಕ್ಕಾಗಿ ಹಾವು ಕಚ್ಚಿಸಿ ತಂದೆಯನ್ನೇ ಕೊಂದ ಮಕ್ಕಳು

ಮೂರು ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಮಕ್ಕಳು ಹಾವು ಕಚ್ಚಿಸಿ ತಂದೆಯನ್ನೇ ಕೊಲೆಗೈದಿರುವ ಘಟನೆ ತಮಿಳುನಾಡು ಜಿಲ್ಲೆಯ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ. ಎಸ್ ಐಟಿ ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿದೆ. ತಂದೆಯ ಇನ್ಶೂರೆನ್ಸ್ ಹಣಕ್ಕಾಗಿ ಮಕ್ಕಳಿಬ್ಬರು ತಂದೆಯನ್ನು ಹಾವು ಕಚ್ಚಿಸಿ ಕೊಲೆಗೈದಿದ್ದಾರೆ. ಹಾವು ಕಡಿತದಿಂದ ಸಾವು ಎಂದು ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇನ್ಶೂರೆನ್ಸ್ ಕಂಪನಿ ಈ ಬಗ್ಗೆ ಅನುಮಾನಗೊಂಡಿದೆ. ಈ ವೇಳೆ ವಿಶೇಷ ತನಿಖಾ ತಂಡ ಪ್ರಕರಣ ಕೈಗೆತ್ತಿಕೊಂಡಿದೆ. ಇ.ಪಿ.ಗಣೇಶನ್ (56) ಇಪರ್ತಿಪೇಟೆ ತಮ್ಮ ನಿವಾಸದಲ್ಲಿ … Read more

ಮೆಸ್ಸಿ ಕಾರ್ಯಕ್ರಮದಲ್ಲೂ ದೇವರ ಜಪವೇ..?: ದೇವೇಂದ್ರ ಫಡ್ನವೀಸ್ ಕಾಲೆಳೆದ ನಟ ಕಿಶೋರ್

ಕೆಲ ದಿನಗಳ ಹಿಂದೆ ಭಾರತ ಪ್ರವಾಸದಲ್ಲಿದ್ದ ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರು, ಮುಂಬೈನ ವಾಂಖೆಡೆ ಮೈದಾನಕ್ಕೆ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿ ನೆರೆದಿದ್ದ ಅಭಿಮಾನಿಗಳು ‘ಮೆಸ್ಸಿ ..ಮೆಸ್ಸಿ’ ಎಂದು ಕೂಗುತ್ತಿದ್ದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ‘ಗಣಪತಿ ಬಪ್ಪಾ ಮೋರಯಾ’ ಎಂದು ಘೋಷಣೆ ಕೂಗುವ ಮೂಲಕ ಅಲ್ಲಿನ ಜನರ ಗಮನ ಸೆಳೆಯಲು ಮುಂದಾದ ಈ ಘಟನೆಗೆ ಸಂಬಂಧಿಸಿದಂತೆ ನಟ ಕಿಶೋರ್ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತಾನಾಡಿರುವ … Read more

ಬೆಂಗಳೂರು ಮಕ್ಕಳ ಪಾಲಿನ ರಾಕ್ಷಸ ರಂಜನ್ ಲಾಕ್; ಗುದ್ದೋದು, ಒದೆಯೋದರ ಹಿಂದಿನ ಸತ್ಯ ಕಕ್ಕಿದ ಜಿಮ್ ಟ್ರೇನರ್!

ರಾಜ್ಯ ರಾಜಧಾನಿ ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆ ಬನಶಂಕರಿಯ ಪಕ್ಕದಲ್ಲಿರುವ ತ್ಯಾಗರಾಜನಗರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಈ ಬಡಾವಣೆಯ ರಸ್ತೆಯಲ್ಲಿ ಆಟವಾಡುತ್ತಿದ್ದ ಪುಟ್ಟ ಮಕ್ಕಳನ್ನು ಕಂಡರೆ ಫುಟ್‌ಬಾಲ್‌ನಂತೆ ಸಾಯುವಂತೆ ಒದೆಯೋದು, ಗುದ್ದೋದು, ಬೈಕ್ ಹತ್ತಿಸೋದು, ತಲೆ ಚಚ್ಚುವುದನ್ನು ಮಾಡುತ್ತಿದ್ದ ರಾಕ್ಷಸ ಪ್ರವೃತ್ತಿಯ ಜಿಮ್ ಟ್ರೈನರ್ ರಂಜನ್ ಆಟ ಇದೀಗ ಪೊಲೀಸರ ಮುಂದೆ ಬಟಾಬಯಲಾಗಿದೆ. ಘಟನೆಯ ವಿವರ ಆರೋಪಿ ರಂಜನ್ (35) ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದು, ಕಳೆದ ಕೆಲವು ದಿನಗಳಿಂದ ಜಿಮ್‌ಗೆ ಹೋಗುವುದನ್ನು ಬಿಟ್ಟು ಮನೆಯಲ್ಲೇ ಉಳಿದಿದ್ದನು. … Read more

ಮಗು ಬೆಳ್ಳಗಿದೆ, ತಾಯಿ ಕಪ್ಪಗಿದ್ದಾಳೆಂದು ಕಿಡ್ನ್ಯಾಪ್ ಆರೋಪ; ದಾಖಲೆ ತೋರಿಸಿ ಪಾರಾದ ಮಹಿಳೆ!

ಉತ್ತರ ಪ್ರದೇಶದ ಆಗ್ರಾದ ಸರಾಫಾ ಮಾರುಕಟ್ಟೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರ ಮಗುವಿನ ಬಣ್ಣವನ್ನು ನೋಡಿ ಸಾರ್ವಜನಿಕರು ಮಗು ಅಪಹರಣವಾಗಿರಬಹುದು ಎಂದು ಶಂಕಿಸಿದ ಘಟನೆ ನಡೆದಿದೆ. ಮಾರುಕಟ್ಟೆಯ ನಮಕ್ ಕಿ ಮಂಡಿ ಪ್ರದೇಶದಲ್ಲಿ ನಡೆದ ಈ ಹೈಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಗುರುವಾರ ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಮಾರುಕಟ್ಟೆಯಲ್ಲಿ ತಿನ್ನಲು ಆಹಾರ ನೀಡುವಂತೆ ಕೇಳುತ್ತಿದ್ದರು. ಆದರೆ, ಆ ಮಹಿಳೆಯ ಮೈಬಣ್ಣಕ್ಕೂ ಆಕೆ … Read more

ಸತ್ರೂ ನನ್ನ ಬಾಡಿ ಆರ್ ಎಸ್‌ಎಸ್ ಗೆ ಹೋಗಲ್ಲ ಎಂದ ಬಿಕೆ ಹರಿಪ್ರಸಾದ್ : ನೆಟ್ಟಿಗರ ಪ್ರತಿಕ್ರಿಯೆ ನೋಡಿ

ಸತ್ರೂ ನನ್ನ ಬಾಡಿ ಆರ್ ಎಸ್‌ಎಸ್ ಗೆ ಹೋಗಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ನೆಟ್ಟಿಗರೊಬ್ಬರು ವ್ಯಂಗ್ಯ ಮಾಡಿದ್ದು ಇಲ್ಲಿ ಕಸ ಹಾಕಬಾರದು ಎಂದು ಆರ್ ಎಸ್‌ಎಸ್ ನಲ್ಲಿ ಬೋರ್ಡ್ ಇದೆ ಎಂದಿದ್ದಾರೆ. ವಿಧಾನಪರಿಷತ್ ನಲ್ಲಿ ಆರ್ ಎಸ್‌ಎಸ್ ಬಗ್ಗೆ ಬಿಜೆಪಿ ಸದಸ್ಯ ಶಾಂತಾರಾಮ್ ಸಿದ್ದಿ ಮಾತನಾಡುವಾಗ ಬಿಕೆ ಹರಿಪ್ರಸಾದ್ ಕಾಲೆಳೆದರು. ಬಿಕೆ ಹರಿಪ್ರಸಾದ್ ಸದಾ ಆರ್ ಎಸ್‌ಎಸ್ ಸಂಘಟನೆ ವಿರುದ್ಧ ಕಿಡಿ ಕಾರುತ್ತಿರುತ್ತಾರೆ. ಶಾಂತಾರಾಮ್ ಸಿದ್ದಿ ಈ … Read more

ರೌಡಿ ಚಟುವಟಿಕೆ ಹಿನ್ನಲೆಯುಳ್ಳ ವ್ಯಕ್ತಿ ಜೊತೆಗೆ ಬರ್ತ್ ಡೇ ಪಾರ್ಟಿ: ಎಸ್‌ಐ ನಾಗರಾಜ್‌ಗೆ ಸಸ್ಪೆಂಡ್ ನೋಟೀಸ್

ಬೆಂಗಳೂರಿನ ಯಲಹಂಕ ನ್ಯೂಟೌನ್ ಪಿಎಸ್‌ಐ ನಾಗರಾಜ್ ಅವರನ್ನು, ಕ್ರಿಮಿನಲ್ ಹಿನ್ನೆಲೆಯುಳ್ಳ ‘ದಾಸ’ ಎಂಬಾತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸಮಾಜ ಘಾತುಕ ಶಕ್ತಿಗಳು ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (PSI) ನಾಗರಾಜ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಇತ್ತೀಚೆಗೆ ಪಿಎಸ್‌ಐ ನಾಗರಾಜ್ ಅವರು ಕ್ರಿಮಿನಲ್ ಹಿನ್ನೆಲೆಯುಳ್ಳ ‘ದಾಸ’ ಎಂಬ ವ್ಯಕ್ತಿಯ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. … Read more

ಭಾರತದ ಗಡಿಯತ್ತ ನುಗ್ಗಿದ ಮೂಲಭೂತವಾದಿ ಪ್ರತಿಭಟನಾಕಾರರು, ಹೈ ಅಲರ್ಟ್‌;‌ ನಿಯಂತ್ರಣ ತಪ್ಪುತ್ತಿದೆ ಬಾಂಗ್ಲಾದೇಶ!

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ನಾಯಕ ಷರೀಫ್‌ ಉಸ್ಮಾನ್‌ ಹಾದಿ ಹತ್ಯೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ, ಅಕ್ಷರಶಃ ನಿಯಂತ್ರಣ ತಪ್ಪುತ್ತಿದೆ. ಇಂಕ್ವಿಲಾಬ್ ಫೋರಂ ಮತ್ತು ಜಮಾತ್‌ ಉಗ್ರಗಾಮಿಗಳು ನಿನ್ನೆ (ಡಿ.19-ಶುಕ್ರವಾರ) ಬಾಂಗ್ಲಾದೇಶದ ಬೆನಪೋಲ್‌ನಿಂದ ಭಾರತದ ಗಡಿಯವರೆಗೆ ಮೆರವಣಿಗೆ ನಡೆಸಿ ಪ್ರತಿಭಟಿಸಿದ್ದಾರೆ. ಪ್ರತಿಭಟನಾಕಾರರು ಗಡಿ ಭಾಗಕ್ಕೆ ನುಗ್ಗುತ್ತಿರುವುದರಿಂದ, ಸೇನೆ ಹೈ ಅಲರ್ಟ್‌ ಘೋಷಣೆ ಮಾಡಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಭಾರತವನ್ನು ಒತ್ತಾಯಿಸಿದ ಪ್ರತಿಭಟನಾಕಾರರು, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಏತನ್ಮಧ್ಯೆ, ಚಟ್ಟೋಗ್ರಾಮ್‌ನಲ್ಲಿರುವ ಚಂದ್ರನಾಥ ದೇವಸ್ಥಾನದ ಹೊರಗೆ, … Read more

ಡ್ರಗ್ಸ್ ನೀಡಿ ಅತ್ಯಾಚಾರ, ತೀವ್ರ ರಕ್ತಸ್ರಾವದಿಂದ ಯುವತಿ ಸಾವು.! ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ.!

ಮೆಹಬೂಬ್‌ನಗರ ಜಿಲ್ಲೆಯ ಮೂಸಾಪೇಟ್ ಮಂಡಲದ ವೇಮುಲಾ ಗ್ರಾಮದಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ಬುಧವಾರ ರಾತ್ರಿ ಗ್ರಾಮದಲ್ಲಿ ಸರ್ಪಂಚ್ ಚುನಾವಣಾ ವಿಜಯೋತ್ಸವ ಆಚರಣೆ ನಡೆಯುತ್ತಿದ್ದಾಗ, ಯುವತಿಯೊಬ್ಬಳ ಜೀವನವನ್ನು ಕತ್ತಲೆಗೆ ತಳ್ಳಿದ ಭಯಾನಕ ಅಪರಾಧ ಬೆಳಕಿಗೆ ಬಂದಿದೆ. ಗ್ರಾಮದ 22 ವರ್ಷದ ಯುವತಿಯನ್ನು ಅವಳಿಗೆ ಪರಿಚಿತ ಯುವಕನೊಬ್ಬ ರೈತ ಮಾರುಕಟ್ಟೆಗೆ ಕರೆದೊಯ್ದಿದ್ದಾನೆ ಎಂದು ವರದಿಯಾಗಿದೆ. ಅಲ್ಲಿ, ಆಕೆಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಅತ್ಯಾಚಾರದ ನಂತರ, ಬಾಲಕಿ ತೀವ್ರ ರಕ್ತಸ್ರಾವದಿಂದ ಪ್ರಜ್ಞಾಹೀನಳಾಗಿದ್ದಳು. ಈ ಪರಿಸ್ಥಿತಿಯನ್ನು … Read more

ಕೆಲಸದಾಳು ಜೊತೆಗೇ ಯಜಮಾನಿಯ ಕುಚ್ ಕುಚ್! ಅಮ್ಮನ ಕಳ್ಳಾಟ ಕಣ್ಣಾರೆ ಕಂಡ ಮಗ, 6 ತಿಂಗಳ ಕೊಲೆ ಕೇಸ್ ಈಗ ಬಯಲಾಗಿದ್ದೇ ರೋಚಕ!

ವಿಜಯಪುರದಲ್ಲಿ ಕೆಲಸದಾಳುವೊಬ್ಬನ ಕೊಲೆ ನಡೆದು ಆರು ತಿಂಗಳಾದರೂ ಸುಳಿವಿರಲಿಲ್ಲ. ತಾಯಿಯ ಅಕ್ರಮ ಸಂಬಂಧಕ್ಕೆ ಕೋಪಗೊಂಡು ಮಗನೇ ಹತ್ಯೆ ಮಾಡಿ, ‘ದೃಶ್ಯಂ’ ಸಿನಿಮಾ ಮಾದರಿಯಲ್ಲಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ. ಅಂತಿಮವಾಗಿ, ವೈಜ್ಞಾನಿಕ ತನಿಖೆಯಿಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅವನೊಬ್ಬ ಕೆಲಸದಾಳು. ಊರಿನ ಗೌಡ್ತಿ ಮನೆಯಲ್ಲಿ ಕೆಲಸಕ್ಕಿದ್ದ. ಅವರು ಕೊಡೋ ಪುಡಿಗಾಸಿನಲ್ಲೇ ಜೀವನ ಮಾಡ್ತಿದ್ದ. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಆತ ನಾಪತ್ತೆಯಾಗಿಬಿಟ್ಟ. ಮಕ್ಕಳು ಹೋಗಿ ಗೌಡ್ತಿಯನ್ನ ಕೇಳಿದ್ರೆ ಆತ ಕೆಲಸಕ್ಕೇ ಬಂದಿಲ್ಲ ಅಂದ್ರು. ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಿದ್ರು. ಬಟ್ … Read more

Fatty Liver : ಡ್ರಿಂಕ್ಸ್ ಮಾಡಿದ್ರೆ ಮಾತ್ರ ಫ್ಯಾಟಿ ಲಿವರ್ ಬರೋದಲ್ಲ! ಈ ಅಭ್ಯಾಸಗಳಿಂದಲೂ ಬರುತ್ತೆ ಹುಷಾರ್

Fatty Liver : ದೇಹದಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸುವ ಯಕೃತ್ ಅಥವಾ ಲಿವರ್, ನಮ್ಮ ಆರೋಗ್ಯದ ರಕ್ಷಣಾಕಾರಿಯಂತೆ ಕೆಲಸ ಮಾಡುತ್ತದೆ. ಪ್ರೋಟೀನ್ ಉತ್ಪಾದನೆ, ಜೀರ್ಣಕ್ರಿಯೆ, ಪಿತ್ತರಸ ಉತ್ಪಾದನೆ ಸೇರಿದಂತೆ ಅನೇಕ ಕಾರ್ಯಗಳನ್ನು ನಿರ್ವಹಿಸುವ ಯಕೃತ್‌ ಮೇಲೆ ಸ್ವಲ್ಪ ಅಜಾಗರೂಕತೆಯೂ ಅಪಾಯವನ್ನು ಉಂಟುಮಾಡಬಹುದು. ಆದರೆ ಕೊಬ್ಬು ಸಂಗ್ರಹದಿಂದ ಸಂಭವಿಸುವ ಫ್ಯಾಟಿ ಲಿವರ್‌ನ ಬಗ್ಗೆ ಅರಿವು ಹೊಂದಿದರೆ, ದೇಹವನ್ನು ಸುರಕ್ಷಿತವಾಗಿಡಬಹುದು. ಫ್ಯಾಟಿ ಲಿವರ್ ಏಕೆ ಉಂಟಾಗುತ್ತದೆ? ಅಧಿಕ ಕೊಬ್ಬಿನ ಶೇಖರಣೆ, ಬೊಜ್ಜು, ಅತಿಯಾದ ಮದ್ಯಪಾನ.ಕಳಪೆ ಆಹಾರ, ಟ್ರಾನ್ಸ್ ಕೊಬ್ಬು, ಹೆಚ್ಚು … Read more