‘ಸ್ವಾಭಿಮಾನವನ್ನು RSS ನವರ ಚಡ್ಡಿಗಳಿಗೆ ಅಡ ಇಟ್ಟವರು ದಲಿತತ್ವದ ಪಾಠ ಹೇಳುವುದು ಕುಚೋದ್ಯವಲ್ಲದೆ ಇನ್ನೇನು!’ : ಪ್ರಿಯಾಂಕ್ ಖರ್ಗೆ
ಮಾನ್ಯ ಚಲವಾದಿ ನಾರಾಯಣಸ್ವಾಮಿಯವರು ನನ್ನ ಬಗ್ಗೆ ಬಗೆಬಗೆಯ ಮಾತುಗಳನ್ನಾಡಿದ್ದಾರೆ, ಬಹುಷಃ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ನನ್ನ ಬಗ್ಗೆ ಮಾತನಾಡುವುದು ಅವರಿಗೆ ಅನಿವಾರ್ಯ, ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ದಿನವೇ ಅವರ ರಾಜಕೀಯದ ಕೊನೆಯ ದಿನವಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ. ಈ ಸಂಬಂಧ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, RSS ನವರ ಚಡ್ಡಿಗಳನ್ನು ತಲೆ ಮೇಲೆ ಹೊತ್ತು ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಬದಲು ನನ್ನ ತಂದೆಯವರ ಸೈದ್ದಾಂತಿಕ ನೆರಳಿನಲ್ಲಿ ಮುಂದುವರೆಯುವುದು ಅತ್ಯಂತ ಗೌರವಯುತ ರಾಜಕಾರಣ … Read more