ಬೆಂಗಳೂರು ಟ್ರಾಫಿಕ್‌ಗಿಂತ ಬಾಹ್ಯಾಕಾಶ ಪ್ರಯಾಣ ಸುಲಭ ಎಂದ ಗಗನಯಾತ್ರಿ ಶುಭಾಂಶು ಶುಕ್ಲಾ

Spread the love

ಬೆಂಗಳೂರು ಟ್ರಾಫಿಕ್‌ ಅಂದ್ರೆ ಯಾರಿಗೆ ತಾನೆ ಭಯ ಇಲ್ಲ? ಅಪ್ಪಿ ತಪ್ಪಿಯೂ ಮಾತಿನ ಮಧ್ಯೆ ಬೆಂಗಳೂರು ಟ್ರಾಫಿಕ್‌ ವಿಚಾರ ಬಂದ್ರೆ ಒಂದು ಕ್ಷಣ ಅವರು ಸೈಲೆಂಟ್‌ ಆಗ್ತಾರೆ. ಅಷ್ಟರಮಟ್ಟಿಗೆ ಸಿಲಿಕಾನ್‌ ಸಿಟಿಯ ಟ್ರಾಫಿಕ್‌ ಹವಾ ಇಟ್ಟಿದೆ. ಗಗನಯಾತ್ರಿ ಶುಭಾಂಶು ಶುಕ್ಲಾ ಕೂಡ ಬೆಂಗಳೂರು ಟ್ರಾಫಿಕ್‌ ಬಗ್ಗೆ ಮಾತನಾಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಶುಭಾಂಶು ಶುಕ್ಲಾ, “ಬಾಹ್ಯಾಕಾಶದಿಂದ ಬೆಂಗಳೂರಿಗೆ ಬರುವುದು ಸುಲಭ. ಆದರೆ ಮಾರತ್ತಹಳ್ಳಿಯಿಂದ ಮಾದಾವರಕ್ಕೆ ಹೋಗುವುದು ತುಂಬಾ ಕಷ್ಟ” ಎಂದು ಹಾಸ್ಯ ಮಾಡಿದ್ದಾರೆ.

ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಅಲ್ಲೇ ಇದ್ದರು. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಮಾರತ್ತಹಳ್ಳಿಯಿಂದ ಮಾದಾವರ ತಲುಪುವ ಸಮಯಕ್ಕಿಂತ ಬೇಗನೆ ಬಾಹ್ಯಾಕಾಶವನ್ನೇ ತಲುಪಬಹುದು ಎಂದು ಶುಭಾಂಶು ಹೇಳಿದ್ದಾರೆ. ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಭಾರತೀಯ ವಾಯುಪಡೆಯ ಅಧಿಕಾರಿ ಮತ್ತು ಪರೀಕ್ಷಾ ಪೈಲಟ್. 2027ರಲ್ಲಿ ಉಡಾವಣೆಯಾಗಲಿರುವ ಭಾರತದ ಮೊದಲ ಮಾನವಸಹಿತ ಮಿಷನ್ ಗಗನಯಾನಕ್ಕೆ ಆಯ್ಕೆಯಾಗಿ ತರಬೇತಿ ಪಡೆದ ನಾಲ್ಕು ಗಗನಯಾತ್ರಿಗಳಲ್ಲಿ ಅವರು ಒಬ್ಬರಾಗಿದ್ದಾರೆ.

ಮಾರತಹಳ್ಳಿಯಿಂದ ಈ ಸ್ಥಳಕ್ಕೆ ಪ್ರಯಾಣವು ನನ್ನ ನಿಗದಿತ ಭಾಷಣಕ್ಕಿಂತ ಮೂರು ಪಟ್ಟು ಹೆಚ್ಚು ಸಮಯ ತೆಗೆದುಕೊಂಡಿತು ಎಂದು ತಮಾಷೆ ಮಾಡಿದ್ದಾರೆ. ನಾನು ಬೆಂಗಳೂರಿನ ಇನ್ನೊಂದು ಬದಿಯಲ್ಲಿರುವ ಮಾರತಹಳ್ಳಿಯಿಂದ ಇಲ್ಲಿಗೆ ಬರುತ್ತಿದ್ದೇನೆ. ತಮ್ಮ ಪ್ರಯಾಣದ ಕಠಿಣ ಭಾಗವೆಂದರೆ ಬಾಹ್ಯಾಕಾಶದಿಂದ ಭೂಮಿಗೆ ಹಿಂತಿರುಗುವುದು ಅಲ್ಲ, ಅದು ಬೆಂಗಳೂರಿನಾದ್ಯಂತ ಪ್ರಯಾಣಿಸುವುದು ಎಂದು ತಮಾಷೆ ಮಾಡಿದ್ದಾರೆ.

ಮಾರತ್ತಹಳ್ಳಿಯಲ್ಲಿರುವ ತಮ್ಮ ಮನೆಯಿಂದ ಶೃಂಗಸಭೆ ನಡೆಯುವ ಸ್ಥಳಕ್ಕೆ ರಸ್ತೆ ಪ್ರಯಾಣವು ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನನಗೆ ಮಾತನಾಡಲು ನಿಗದಿಪಡಿಸಿದ ಸಮಯಕ್ಕಿಂತ ಮೂರು ಪಟ್ಟು ಹೆಚ್ಚು ಸಮಯ ತೆಗೆದುಕೊಂಡಿತು. ನೀವು ನನ್ನ ಬದ್ಧತೆಯನ್ನು ಮೆಚ್ಚಲೇಬೇಕು ಎಂದಿದ್ದಾರೆ. ಬೆಂಗಳೂರು ಬಾಹ್ಯಾಕಾಶದಿಂದ ಗೋಚರಿಸುವ ಅತ್ಯಂತ ಪ್ರಕಾಶಮಾನವಾದ ನಗರ ಎಂದೂ ಶುಕ್ಲಾ ಹೇಳಿದ್ದಾರೆ.

ಈ ಕಾರ್ಯಕ್ರಮದ ಸಮಾರೋಪದಲ್ಲಿ ಶುಕ್ಲಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದ ಬೆಂಗಳೂರಿಗೆ ಹೋಗುವುದು ಸುಲಭ, ಆದರೆ ಮಾರತ್ತಹಳ್ಳಿಯಿಂದ ಈ ಸ್ಥಳಕ್ಕೆ ಬರುವುದು ಕಷ್ಟಕರ ಎಂದಿದ್ದಾರೆ. ಇಂತಹ ವಿಳಂಬಗಳು ಮರುಕಳಿಸದಂತೆ ಸರ್ಕಾರ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಖರ್ಗೆ ಹೇಳಿದ್ದಾರೆ.

ಶುಕ್ಲಾ ಅವರ ಹೇಳಿಕೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ಬೆಂಗಳೂರು ಅತ್ಯಂತ ಕೆಟ್ಟ ಟ್ರಾಫಿಕ್ ಅನ್ನು ಹೊಂದಿದೆ ಎಂಬುದು ಗೊತ್ತಿರುವುದೇ. ಆದರೆ ಬಾಹ್ಯಾಕಾಶಕ್ಕೆ ಹೋಗಲು ವರ್ಷಗಳಿಂದ ತರಬೇತಿ ಪಡೆಯುತ್ತಿರುವ ಪೈಲಟ್‌ಗೂ ಸಹ ಟ್ರಾಫಿಕ್‌ ಇಷ್ಟು ಕಾಡುತ್ತೆ ಎಂಬುದು ಗೊತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

WhatsApp Group Join Now

Spread the love

Leave a Reply