ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ (ಗಿಲ್ಲಿ ನಟರಾಜ್) ಅಧಿಕೃತವಾಗಿ ಟ್ರೋಫಿ ಗೆದ್ದು ಕನ್ನಡಿಗರ ಮನಗೆದ್ದಿದ್ದಾರೆ. ಜನವರಿ 18, 2026ರಂದು ನಡೆದ ಫಿನಾಲೆಯಲ್ಲಿ ಗಿಲ್ಲಿ ಭರ್ಜರಿ ಮತಗಳೊಂದಿಗೆ ವಿನ್ನರ್ ಆಗಿ ಹೊರಹೊಮ್ಮಿದ್ದು, ₹50 ಲಕ್ಷ ಬಹುಮಾನ ಹಣ, ಹೊಸ SUV ಕಾರು ಮತ್ತು ಹೋಸ್ಟ್ ಕಿಚ್ಚ ಸುದೀಪ್ ಅವರಿಂದ ₹10 ಲಕ್ಷ ಗಿಫ್ಟ್ ಪಡೆದಿದ್ದಾರೆ.
ರಕ್ಷಿತಾ ಶೆಟ್ಟಿ ಮೊದಲ ರನ್ನರ್ ಅಪ್ ಆಗಿದ್ದರೆ, ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ಗಿಲ್ಲಿ ನಟ ಆರಂಭದಿಂದಲೇ ತಮ್ಮ ನೈಸರ್ಗಿಕ ಹಾಸ್ಯ, ಗ್ರಾಮೀಣ ವ್ಯಕ್ತಿತ್ವ ಮತ್ತು ಖಡಕ್ ಟಾಂಗ್‌ಗಳೊಂದಿಗೆ ವೀಕ್ಷಕರ ಮನಸ್ಸನ್ನು ಗೆದ್ದರು. ನಾಮಿನೇಷನ್ ಸಮಯದಲ್ಲಿ ಸ್ಪಷ್ಟವಾಗಿ ಕಾರಣಗಳನ್ನು ನೀಡಿ ಎದುರಾಳಿಗಳನ್ನು ಎದುರಿಸಿದರು. ಫಿನಾಲೆಯವರೆಗೂ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ವಾಗ್ವಾದಗಳು ನಡೆದಿದ್ದವು, ಆದರೆ ಶೋ ಮುಗಿದ ನಂತರವೂ ಚರ್ಚೆಗಳು ಮುಂದುವರೆದಿವೆ.
ಅಶ್ವಿನಿ ಗೌಡರ ಕಾಮೆಂಟ್:
ಫಿನಾಲೆಯ ನಂತರ ಇಂಟರ್ವ್ಯೂವೊಂದರಲ್ಲಿ ಅಶ್ವಿನಿ ಗೌಡ ಹೇಳಿದ್ದು,’ಬಡವರ ಮಕ್ಕಳು ಗೆಲ್ಲಬೇಕು. ಆದರೆ ಗಿಲ್ಲಿ ನಿಜವಾಗಲೂ ಬಡವನಾ? ನಿಜವಾದ ಬಡವ ಬೇರೆ, ಬಡವನ ಥರ ಗೆಟಪ್ ಹಾಕ್ಕೊಂಡು ಬದುಕೋದು ಬೇರೆ. ಬಹುಶಃ ಅವರ ಆಟ ಎಲ್ಲರಿಗೂ ಇಷ್ಟವಾಗಿದೆ ಇರಬೇಕು. ಗಿಲ್ಲಿಯನ್ನು ಬಡವ ಅಂತ ಕರೆಯೋದು ತಪ್ಪು. ಅವರ ವ್ಯಕ್ತಿತ್ವ ಆಟದ ಬಗ್ಗೆ ನನಗೆ ಖಂಡಿತವಾಗಿಯೂ ಖುಷಿಯಾಗಿದೆ. ಅವರಿಗೆ ಒಳ್ಳೆಯದಾಗಲಿ. ಬಡವ ಎನ್ನುವ ಸ್ಟ್ರಾಟಜಿಯನ್ನು ಇಲ್ಲಿ ಬಳಸುವುದು ತಪ್ಪು.’
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗಿಲ್ಲಿ ಅಭಿಮಾನಿಗಳು ಅಶ್ವಿನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ಇದನ್ನು ‘ಸೋಲಿನ ಬೇಸರ’ ಎಂದು ಕರೆಯುತ್ತಿದ್ದಾರೆ. ಗಿಲ್ಲಿ ತಮ್ಮ ಗೆಲುವನ್ನು ಸರಳವಾಗಿ ಸ್ವೀಕರಿಸಿ, ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಗಿಲ್ಲಿ ನಟರ ಗೆಲುವು ಕನ್ನಡದಾದ್ಯಂತ ಸಂಭ್ರಮಕ್ಕೆ ಕಾರಣವಾಗಿದ್ದು, ಫ್ಯಾನ್ಸ್ ರಸ್ತೆಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಈ ಗೆಲುವು ತಮ್ಮ ನೈಜ ವ್ಯಕ್ತಿತ್ವ ಮತ್ತು ಹಾಸ್ಯದ ಶಕ್ತಿಯ ಪ್ರತಿಫಲ ಎಂದು ಗಿಲ್ಲಿ ಹೇಳಿದ್ದಾರೆ.
ಗಿಲ್ಲಿ ‘ಬಡವನ ಥರ ಗೆಟಪ್ ಹಾಕ್ಕೊಂಡು ಬಿಗ್ ಬಾಸ್ ಗೆದ್ದಿದ್ದಾರೆ’ : ಅಶ್ವಿನಿ ಗೌಡ
WhatsApp Group
Join Now