ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶೇಷ ಸಾಧನೆಯನ್ನು ಮಾಡಿದ್ದರು. ಇನ್ಸ್ಟಾಗ್ರಾಂನಲ್ಲಿ ನೂರು ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ವಿಶ್ವದ ಮೊದಲ ನಾಯಕರಾಗಿ ಹೊರಹೊಮ್ಮಿದ್ದರು. ಇದನ್ನು, ಬಿಜೆಪಿ ನಾಯಕ ಅಣ್ಣಾಮಲೈ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಕ್ಕೆ, ಪ್ರಕಾಶ್ ರಾಜ್ ಲೇವಡಿ ಮಾಡಿದ್ದರು. ಇದಕ್ಕೆ, ಮಾಜಿ ಐಪಿಎಸ್ ತಿರುಗೇಟು ನೀಡಿದ್ದಾರೆ.
ಬಿಜೆಪಿ, ಸಂಘ ಪರಿವಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವವರಲ್ಲಿ ಮಂಚೂಣಿಯಲ್ಲಿರುವ ನಟ ಪ್ರಕಾಶ್ ರಾಜ್ ಮತ್ತೊಮ್ಮೆ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ಟ್ವೀಟ್’ ಒಂದಕ್ಕೆ ಪ್ರತಿಕ್ರಿಯೆ ನೀಡಿದ ರೀತಿಗೆ, ಬಿಜೆಪಿ ಬೆಂಬಲಿಗರು ಗರಂ ಆಗಿದ್ದಾರೆ.
ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಸಾಮಾಜಿಕ ಜಾಲತಾಣದಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ್ದರು. ಇನ್ಸ್ಟಾಗ್ರಾಂನಲ್ಲಿ ನೂರು ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ವಿಶ್ವದ ಮೊದಲ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದನ್ನು, ಬಿಜೆಪಿ ನಾಯಕರು ಟ್ವೀಟ್ ಮೂಲಕ ಶೇರ್ ಮಾಡಿಕೊಂಡಿದ್ದರು.
ಎಕ್ಸ್’ನಲ್ಲಿ ಬಿಜೆಪಿ ನಾಯಕ ಅಣ್ಣಾಮಲೈ ಬರೆದುಕೊಂಡಿದ್ದೇನು?
ಆದೇ ರೀತಿ ಬಿಜೆಪಿ ನಾಯಕ ಅಣ್ಣಾಮಲೈ, ಮೋದಿ ಇನ್ಸ್ಟಾ ಸಾಧನೆಯನ್ನು ಹೀಗೆಂದು ಬರೆದುಕೊಂಡಿದ್ದರು. ’ಕೆಲವರು ಸೋಶಿಯಲ್ ಮೀಡಿಯಾದ ಆಲ್ಗೋರಿದಂ ಅರ್ಥ ಮಾಡಿಕೊಳ್ಳಲು ನಿದ್ದೆಯಿಲ್ಲದ ರಾತ್ರಿಯನ್ನು ಕಳೆಯುತ್ತಿದ್ದಾರೆ. ಆದರೆ, ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ, ಆಲ್ಗೋರಿದಂ ಅನ್ನು ಭೇದಿಸುವುದಲ್ಲ, ಬದಲಿಗೆ ಆಲ್ಗೋರಿದಂ ಬದಲಾಗುತ್ತದೆ. ಅವರು ನಿರ್ದೇಶಿಸುತ್ತಾರೆ, ಜಗತ್ತು ಅವರನ್ನು ಅನುಸರಿಸುತ್ತಾರೆ. ಮೋದಿಯವರ ಇನ್ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಈಗ ನೂರು ಮಿಲಿಯನ್ ದಾಟಿದೆ’ ಎಂದು ಅಣ್ಣಾಮಲೈ ಬರೆದುಕೊಂಡಿದ್ದರು.
ಅಣ್ಣಾಮಲೈ ಟ್ವೀಟ್’ಗೆ ಪ್ರಕಾಶ್ ರಾಜ್ ಕೌಂಟರ್
ಅಣ್ಣಾಮಲೈ ಅವರ ಟ್ವೀಟ್’ಗೆ ಪ್ರಕಾಶ್ ರಾಜ್, ’ಇದರಿಂದ ಏನಾದರೂ ಲಾಭವಿದೆಯಾ, ದೇಶ ಈ ಮಾತನ್ನು ಕೇಳಲು ಬಯಸುತ್ತದೆ’ ಎಂದು #JustAsking ಹ್ಯಾಷ್’ಟ್ಯಾಗ್ ಮೂಲಕ ಲೇವಡಿ ಮಾಡಿದ್ದರು. ಇದಕ್ಕೆ, ಅಣ್ಣಾಮಲೈ ಮತ್ತೆ ತಿರುಗೇಟು ನೀಡಿದ್ದಾರೆ. ಪ್ರಕಾಶ್ ರಾಜ್ ಅವರ ಟ್ವೀಟಿಗೆ ಸುಮಾರು ಎರಡೂವರೆ ಸಾವಿರ ತರಹೇವಾರು ಕಾಮೆಂಟುಗಳು ಬಂದಿದೆ. ಅಷ್ಟೇ ಅಲ್ಲದೇ, ಸುಮಾರು 2.6 ಸಾವಿರ ರಿಟ್ವೀಟ್ ಅನ್ನು ಪಡೆದುಕೊಂಡಿದೆ.
ಅಣ್ಣಾಮಲೈ ಬರ್ನಲ್, ಜೆಲೊಸಿಲ್ ತಿರುಗೇಟ್ ಕೊಟ್ಟಿದ್ದು ಹೀಗೆ
ವಾಟ್ ಈಸ್ ದಿ ಯೂಸ್ ಎನ್ನುವ ಪ್ರಕಾಶ್ ರಾಜ್ ಟ್ವೀಟ್’ಗೆ ಅಣ್ಣಾಮಲೈ ಕೌಂಟರ್ ಕೊಟ್ಟಿದ್ದು ಹೀಗೆ, ’ಅಣ್ಣಾ ನನ್ನ ಕಡೆಯಿಂದ ನಿಮಗೆ ಪುಕ್ಕಟೆ ಸಲಹೆ, ನಿಮಗಾಗಿರುವ ಅಸಿಡಿಟಿಗೆ ಜೆಲೋಸಿಲ್ ಮಾತ್ರೆ ಮತ್ತು ಉರಿಗೆ ಬರ್ನಲ್ ಯಾವತ್ತೂ ಕೂಡಾ ಸಮಯಕ್ಕೆ ಸರಿಯಾಗಿ ನಿಮಗೆ ಸಿಗುವಂತಾಗಲಿ’ ಎಂದು ಅಣ್ಣಾಮಲೈ, ಪ್ರಕಾಶ್ ರಾಜ್ ಅವರ ಕಾಲೆಳೆದಿದ್ದಾರೆ. ಅಣ್ಣಾಮಲೈ ಈ ತಿರುಗೇಟಿಗೆ ಸುಮಾರು ನಲವತ್ತು ಸಾವಿರ ಲೈಕ್ಸ್ ಬಂದಿದು, ಸಾವಿರಾರು ಕಾಮೆಂಟುಗಳು ಕೂಡಾ ಬಂದು ಬಿದ್ದಿದೆ.