Annabhagya Scheme : ಜನವರಿ ತಿಂಗಳ ಹಣ ವರ್ಗಾವಣೆ ಪ್ರಾರಂಭ.! ನಿಮಗೂ ಬಂದಿದೆಯಾ ಬೇಗ ಪರಿಶೀಲಿಸಿ

Spread the love

Annabhagya Scheme : ನಮಸ್ಕಾರ ಸ್ನೇಹಿತರೇ, ಎಲ್ಲರಿಗೂ ಅನ್ನಭಾಗ್ಯ(Annabhagya) ಯೋಜನೆಯಡಿಯಲ್ಲಿ ಪ್ರತಿಯೊಂದು ವ್ಯಕ್ತಿಗೂ 5 ಕೆಜಿ ಅಕ್ಕಿಯ ಬದಲಾಗಿ ₹170 ರೂಪಾಯಿ ಹಣ, ಹಾಗು ಆರು ಜನ ಸದಸ್ಯರಿರುವ ರೇಷನ್ ಕಾರ್ಡ್ ಗೆ ಬರೋಬ್ಬರಿ ₹1,020 ರೂಪಾಯಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ(DBT) ಮೂಲಕ ರಾಜ್ಯ ಸರ್ಕಾರವು ವರ್ಗಾವಣೆ ಮಾಡುತ್ತಿದೆ. ಈಗಾಗಲೇ ಅನ್ನಭಾಗ್ಯ(Annabhagya) ಯೋಜನೆಯ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಈ ಹಣವು ಜಮಾವಣೆಯಾಗಿದ್ದು, ಆದರೆ ಈ ತಿಂಗಳು ಜನವರಿ ತಿಂಗಳಲ್ಲಿ ನಿಮಗೆ ಹಣ ಬಂದಿದೆಯಾ.? ಇಲ್ಲವೋ.? ಎನ್ನುವುದನ್ನು ತಿಳಿಯೋದು ಹೇಗೆ.? ನೋಡೋಣ.

WhatsApp Group Join Now

ಹೌದು ಸ್ನೇಹಿತರೇ, ಬಹಳ ಸುಲಭವಾಗಿ ನೀವು ನಿಮ್ಮ ಮನೆಯಲ್ಲಿ ಕುಳಿತುಕೊಂಡು, ಅಂದರೆ ನಿಮ್ಮ ಮೊಬೈಲ್ ಫೋನ್ ಮುಖಾಂತರ ಅನ್ನಭಾಗ್ಯ(Annabhagya) ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ.? ಅಥವಾ ಇಲ್ಲವಾ.? ಎಂದು ಪರಿಶೀಲಿಸಿಕೊಳ್ಳಬಹುದು. ಇದಕ್ಕಾಗಿ ನೀವು ಸೈಬರ್ ಸೆಂಟರ್ಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಬಹಳ ಸುಲಭವಾಗಿ ನೀವು ನಿಮ್ಮ ಅನ್ನಭಾಗ್ಯ(Annabhagya) ಯೋಜನೆಯ ಹಣ ನಿಮಗೆ ಸಿಕ್ಕಿದಿಯಾ ಅಥವಾ ಇಲ್ಲವಾ ಎನ್ನುವುದನ್ನು ನಿಮ್ಮ ಮೊಬೈಲ್ ಫೋನ್ ಮೂಲಕವೇ ತಿಳಿಯಬಹುದಾಗಿದೆ. ಹೇಗೆ ಅನ್ನುವುದನ್ನ ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಅನ್ನಭಾಗ್ಯ(Annabhagya) ಯೋಜನೆಯ ಡಿಬಿಟಿ ಸ್ಟೇಟಸ್ ತಿಳಿಯುವುದು ಹೇಗೆ.?

ಅನ್ನಭಾಗ್ಯ(Annabhagya) ಯೋಜನೆಯ ಡಿಬಿಟಿ ಸ್ಟೇಟಸ್ ತಿಳಿಯಲು ಮೊದಲನೆಯದಾಗಿ ನಿಮ್ಮ ಮೊಬೈಲ್ ಫೋನ್ ನಲ್ಲಿ ಕ್ರೋಮ್ ಬ್ರೌಸರ್(Chrome Browser)ನ್ನು ಓಪನ್ ಮಾಡಿಕೊಂಡು ಸರ್ಚ್ ಬಾರ್ ನಲ್ಲಿ ನೀವು ahara ಎಂದು ಟೈಪ್ ಮಾಡಿ ಸರ್ಚ್ ಮಾಡಿದಾಗ ನಿಮಗೆ ಕಾಣುವ ಮೊದಲನೇ ವೆಬ್ಸೈಟ್ ಗೆ ಭೇಟಿ ನೀಡಿ. ಇಲ್ಲದಿದ್ದರೆ ahara.kar.nic ಈ ಡೈರೆಕ್ಟ್ ಲಿಂಕ್ ಅನ್ನು ಬಳಸಿಕೊಂಡು, ನೀವು ನಿಮ್ಮ ಅನ್ನಭಾಗ್ಯ(Annabhagya) ಯೋಜನೆಯ ಈಗಿನ ಸ್ಥಿತಿಯನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

WhatsApp Group Join Now

ನಂತರ ನೀವು ಭೇಟಿ ನೀಡಿರುವ ahara.kar.nic ಲಿಂಕ್ ನ ಎಡಬದಿಯಲ್ಲಿ ಹಲವಾರು ಲಿಂಕ್ ಗಳು ಕಾಣುತ್ತವೆ. ಅದರಲ್ಲಿ ನೀವು ಇ-ಸ್ಥಿತಿ ಎಂಬ ಲಿಂಕನ್ನು ಕ್ಲಿಕ್ ಮಾಡಬೇಕು. ಅದರ ಕೆಳಗೆ ಕಾಣುವ ಡಿಬಿಟಿ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕು. ಡಿಬಿಟಿ ಸ್ಥಿತಿ ಮೇಲೆ ಕ್ಲಿಕ್ ಮಾಡಿದ ಇಲ್ಲಿ ನೀಡಿರುವಂತಹ ಪೇಜ್ ನಿಮಗೆ ಕಾಣಲು ಸಿಗುತ್ತದೆ.

ಬೆಂಗಳೂರು ಜಿಲ್ಲೆಗಳಿಗೆ (Only For Bengaluru Districts) :-

‘ಬೆಂಗಳೂರು ಜಿಲ್ಲೆಗಳಿಗೆ ಮಾತ್ರ ಇಲ್ಲಿ ಕ್ಲಿಕ್ ಮಾಡಿ (ONLY FOR BENGALURU DISTRICTS CLICK HERE)’ ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಿಕೊಳ್ಳಿ.

WhatsApp Group Join Now

ಈ ಲಿಂಕ್ ಮಾತ್ರ ನಿರ್ದಿಷ್ಟವಾಗಿ ಬೆಂಗಳೂರು ಜಿಲ್ಲೆಗಳಿಗೆ, ಅದರಲ್ಲಿ ಬೆಂಗಳೂರು (ನಗರ/ಗ್ರಾಮೀಣ) ಪ್ರದೇಶಗಳನ್ನು ಕೂಡ ಒಳಗೊಂಡಿದೆ. ಡಿಬಿಟಿ(DBT) ಪರಿಸ್ಥಿತಿಯನ್ನು ತಿಳಿಯಲು ನಿಮ್ಮ ರೇಷನ್ ಕಾರ್ಡ್ ನ ವಿವರ ಅಥವಾ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸುವ ಪೇಜ್ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.

ಕಲಬುರಗಿ/ಬೆಂಗಳೂರು ವಿಭಾಗಗಳಿಗೆ(ನಗರ/ಗ್ರಾಮೀಣ/ನಗರ ಹೊರತುಪಡಿಸಿ) (Only For Kalaburagi/Bengaluru Divisions/Bengaluru(Urban/Rural/City) :-

‘ಕಲಬುರಗಿ/ಬೆಂಗಳೂರು ವಿಭಾಗಗಳಿಗೆ(ನಗರ/ಗ್ರಾಮೀಣ/ನಗರ ಹೊರತುಪಡಿಸಿ) ಮೇಲೆ ಕ್ಲಿಕ್ ಮಾಡಿ’ ಎನ್ನುವ ಲಿಂಕ್ ಅನ್ನು ಕ್ಲಿಕ್ ಮಾಡಿ. ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಮುಂತಾದ ನಗರಗಳಿಗೆ ಈ ಸಂಪರ್ಕವನ್ನು ನೀಡಲಾಗಿದೆ. ಇದನ್ನು ಬಳಸಿಕೊಳ್ಳಬಹುದಾಗಿದೆ. ಈ ಜಿಲ್ಲೆಯವರಿಗೆ ಡಿಬಿಟಿ(DBT) ಪರಿಸ್ಥಿತಿಯನ್ನು ತಿಳಿಯಲು ನಿಮ್ಮ ರೇಷನ್ ಕಾರ್ಡ್ ನ ವಿವರ ಅಥವಾ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸುವ ಪೇಜ್ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.

ಬೆಳಗಾವಿ/ಮೈಸೂರು ವಿಭಾಗಳಿಗೆ (Only For Belagavi/Mysuru Divisions) :-

ಬೆಳಗಾವಿ/ಮೈಸೂರು ವಿಭಾಗಳಿಗೆ ಮೇಲೆ ಕ್ಲಿಕ್ ಮಾಡಿ’ ಎನ್ನುವ ಲಿಂಕ್ ಅನ್ನು ಕ್ಲಿಕ್ ಮಾಡಿ. ಈ ಲಿಂಕ್ ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರಕನ್ನಡ, ವಿಜಯಪುರ ಸೇರಿದಂತೆ ಮುಂತಾದ ವಿಭಾಗಗಳಿಗೆ ಈ ಲಿಂಕನ್ನು ನಿರ್ದೇಶಿಸಲಾಗಿದೆ. ಇಲ್ಲಿ ತಿಳಿಸಿರುವ ಜಿಲ್ಲೆಯವರಿಗೆ ಡಿಬಿಟಿ(DBT) ಪರಿಸ್ಥಿತಿಯನ್ನು ತಿಳಿಯಲು ನಿಮ್ಮ ರೇಷನ್ ಕಾರ್ಡ್ ನ ವಿವರ ಅಥವಾ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸುವ ಪೇಜ್ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.

ಡಿಬಿಟಿ ಸ್ಥಿತಿಯನ್ನು ಪರಿಶೀಲಿಸಲು ಅಗತ್ಯವಿರುವ ದಾಖಲೆಗಳು (Documents Required To Check DBT Status) :-

FieldInformation
Select Year 2023
Select monthJanuary
Enter RC Number Provide the
Ration Card Number

ಅನ್ನಭಾಗ್ಯ(Annabhagya) ಯೋಜನೆಯ ಡಿಬಿಟಿ(DBT) ಸ್ಟೇಟಸ್ ತಿಳಿಯಲು ನಿಮ್ಮ ಪಡಿತರ ಚೀಟಿ(Ration Card) ನಂಬರ್ ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನೀವು ನಮೂದಿಸಿದರೆ ಮಾತ್ರ ಅನ್ನಭಾಗ್ಯ(Annabhagya) ಯೋಜನೆಯ ಹಣ ನಿಮಗೆ ಜಮಾ ಆಗಿದೆಯಾ.? ಇಲ್ಲವಾ.? ಎನ್ನುವುದನ್ನು ತಿಳಿಯಬಹುದಾಗಿದೆ.

ಅನ್ನಭಾಗ್ಯ(Annabhagya) ಯೋಜನೆಯ ಡಿಬಿಟಿ ಸ್ಟೇಟಸ್ ತಿಳಿಯಲು (Check Your Annabhagya Status Of DBT) :-

ವರ್ಷವನ್ನು ಆಯ್ಕೆ ಮಾಡಿ (Select Year) :

ಅನ್ನಭಾಗ್ಯ(Annabhagya) ಯೋಜನೆಯ ಡಿಬಿಟಿ(DBT) ಸ್ಟೇಟಸ್ ತಿಳಿಯಲು ನೀವು ಯಾವ ವರ್ಷ ಎನ್ನುವುದನ್ನು ನಮೂದಿಸಬೇಕಾಗುತ್ತದೆ. ಲಭ್ಯವಿರುವ ಆಯ್ಕೆಗಳು 2022, 2023, 2024.

ತಿಂಗಳನ್ನು ಆಯ್ಕೆ ಮಾಡಿ (Select Month) :

ನಂತರ ನೀವು ಅನ್ನಭಾಗ್ಯ(Annabhagya) ಯೋಜನೆಯ ಡಿಬಿಟಿ(DBT) ಸ್ಟೇಟಸ್ ತಿಳಿಯಲು ನಿರ್ದಿಷ್ಟ ತಿಂಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ವರ್ಷದ ಎಲ್ಲ ತಿಂಗಳುಗಳು ಆಯ್ಕೆಯಲ್ಲಿ ಒಳಗೊಂಡಿದೆ.

ಪಡಿತರ ಚೀಟಿ ಸಂಖ್ಯೆ ನಮೂದಿಸಿ (Enter Ration Card Number) :

ಹಾಗೆಯೇ, ಅನ್ನಭಾಗ್ಯ(Annabhagya) ಯೋಜನೆಯ ಡಿಬಿಟಿ(DBT) ಸ್ಟೇಟಸ್ ತಿಳಿಯಲು ನೀವು ನಿಮ್ಮ ಪಡಿತರ ಚೀಟಿಯ ಸಂಖ್ಯೆ(Ration Card)ಯನ್ನು ಕಡ್ಡಾಯವಾಗಿ ನಮೂದಿಸಲೇಬೇಕಾಗುತ್ತದೆ.

ಕ್ಯಾಪ್ಚಾ ನಮೂದಿಸಿ (Enter Captcha) :

ಕೊನೆಯದಾಗಿ ಅನ್ನಭಾಗ್ಯ(Annabhagya) ಯೋಜನೆಯ ಡಿಬಿಟಿ(DBT) ಸ್ಟೇಟಸ್ ತಿಳಿಯಲು, ಸ್ವಯಂಚಾಲಿತ ಬಾಟ್ ಗಳು ಸಿಸ್ಟಮ್ ಗೆ ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಈ ಕ್ಯಾಪ್ಚಾ ಒಪ್ಶನ್ ಅನ್ನು ಬಳಸಲಾಗುತ್ತದೆ. ಈ ಕ್ಯಾಪ್ಚಾದಿಂದಾಗಿ ಬಳಕೆದಾರರು ಮನುಷ್ಯರೇ ಎನ್ನುವುದನ್ನು ನಿರ್ಧರಿಸಲು ಬಳಸಲಾಗುತ್ತದೆ.

Conclusion :

ಮೇಲೆ ತಿಳಿಸಿರುವಂತಹ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ನೀವು ಸಬ್ಮಿಟ್ ಮಾಡಿದರೆ, ಅನ್ನಭಾಗ್ಯ(Annabhagya) ಯೋಜನೆಯ ಡಿಬಿಟಿ(DBT) ಸ್ಟೇಟಸ್ ಅಂದರೆ, ನಿಮ್ಮ ಬ್ಯಾಂಕ್ ಖಾತೆಗೆ ಅನ್ನಭಾಗ್ಯ(Annabhagya) ಯೋಜನೆಯ ಹಣ ಜಮಾ ಆಗಿದೆಯಾ.? ಇಲ್ಲವಾ.? ಎನ್ನುವ ಸಂಪೂರ್ಣ ಮಾಹಿತಿ ನಿಮಗೆ ಕಾಣಸಿಗುತ್ತದೆ.

ಈ ರೀತಿ ನೀವು ನಿಮ್ಮ ಮೊಬೈಲ್ ಫೋನ್ ಮೂಲಕವೇ ಮನೆಯಲ್ಲಯೇ ಕುಳಿತುಕೊಂಡು ಅನ್ನಭಾಗ್ಯ(Annabhagya) ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುವಂತಹ ಮಾಹಿತಿಯನ್ನ ನೀವು ತಿಳಿದುಕೊಳ್ಳಬಹುದಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply