ಜೇನು ದಾಳಿಯಿಂದ (Bee Attck) ಅಂಗನವಾಡಿಯ ಸಹಾಯಕಿಯೊಬ್ಬಳು 20 ಮಕ್ಕಳ ಜೀವ ಉಳಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಘಟನೆ ಮಧ್ಯಪ್ರದೇಶದ ನೀಮಚ್ ಜಿಲ್ಲೆಯ ರಣಪುರ್ ಗ್ರಾಮದಲ್ಲಿ ನಡೆದಿದೆ.
ಮಡವಾಡ ಪಂಚಾಯತ್ನ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಜೇನುನೊಣಗಳ ಒಂದು ದೊಡ್ಡ ಹಿಂಡು ಇದ್ದಕ್ಕಿದ್ದಂತೆ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ದಾಳಿ ನಡೆಸಿದೆ. ಆ ವೇಳೆ ಅಂಗನವಾಡಿಯ ಕಾಂಚನ್ ಬಾಯಿ ಮೇಘವಾಲ್, ತನ್ನ ಸುರಕ್ಷತೆಯ ಬಗ್ಗೆ ಯೋಚಿಸದೆ, ಹತ್ತಿರದಲ್ಲಿ ಬಿದ್ದಿದ್ದ ಟಾರ್ಪಲ್ಗಳು ಮತ್ತು ಚಾಪೆಗಳನ್ನು ಹಿಡಿದು, ಮಕ್ಕಳಿಗೆ ಅವುಗಳನ್ನು ಸುತ್ತಿ, ಅವರನ್ನು ರಕ್ಷಿಸಿದ್ದಾರೆ.
ಆದರೆ ಕಾಂಚನ್ ಬಾಯಿ ತನ್ನ ಪ್ರಾಣವನ್ನು ಲೆಕ್ಕಿಸದೇ ಹೋಗಿದ್ದರಿಂದ ನೂರಾರು ಜೇನು ನೊಣಗಳು ಹಿಂಡು ಹಿಂಡಾಗಿ ಆಕೆಯನ್ನು ಕಚ್ಚಿವೆ. ಆದರೂ ಆಕೆ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾದಳು. ನಂತರ ಗ್ರಾಮಸ್ಥರು ಸಹಾಯ ಮಾಡಲು ಧಾವಿಸುವ ಹೊತ್ತಿಗೆ, ಕಾಂಚನ್ ಬಾಯಿ ಕುಸಿದು ಬಿದ್ದಿದ್ದಳು.
ತಕ್ಷಣ ಕಾನ್ಸ್ಟೆಬಲ್ ಕಲುನಾಥ್ ಮತ್ತು ಪೈಲಟ್ ರಾಜೇಶ್ ರಾಥೋಡ್ ಆಕೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಆಕೆ ಆಸ್ಪತ್ರೆ ಬರುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ್ದಾರೆ. ಆಕೆಯ ದೇಹದಲ್ಲಿ ಅಸಂಖ್ಯಾತ ಜೇನುನೊಣಗಳು ಕಚ್ಚಿದ ಗುರುತುಗಳು ಇದ್ದವು ಎಂದು ಅವರು ತಿಳಿಸಿದ್ದಾರೆ.
ಕಾಂಚನ್ ಬಾಯಿ ಅಂಗನವಾಡಿ ಕಾರ್ಯಕರ್ತೆಗಿಂತ ಹೆಚ್ಚಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹತ್ತಾರು ಮಕ್ಕಳ ಪ್ರಾಣ ಉಳಿಸಿದ್ದಾರೆ. ಮಂಗಳವಾರ ಮರಣೋತ್ತರ ಪರೀಕ್ಷೆಯ ನಂತರ ಆಕೆಯ ಶವ ರಣಪುರ ಗ್ರಾಮಕ್ಕೆ ತಲುಪಿದಾಗ ಗ್ರಾಮಸ್ಥರು ಕಂಬನಿ ಹಾಕಿದ್ದಾರೆ.
ಜೇನು ದಾಳಿಯಿಂದ 20 ಮಕ್ಕಳನ್ನು ರಕ್ಷಿಸಿ ತಾನೇ ಪ್ರಾಣ ಕಳೆದುಕೊಂಡ ಅಂಗನವಾಡಿ ಸಹಾಯಕಿ.!
WhatsApp Group
Join Now