ಬಟ್ಟೆ ಒಣ ಹಾಕುವ ಹಗ್ಗದಿಂದ ಕುತ್ತಿಗೆ ಬಿಗಿದು ಪತ್ನಿಯ ಹತ್ಯೆ ಮಾಡಿದ ವೃದ್ಧ.!

Spread the love

ಬೆಂಗಳೂರಿನಲ್ಲಿ ವೃದ್ಧ ದಂಪತಿಗಳ ನಡುವಿನ ಜಗಳ ವಿಕೋಪಕ್ಕೆ ತಿರುಗಿ ದುರಂತ ಸಾವಿನಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆಯೊಂದು ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವೆಂಕಟೇಶನ್ (65) ಎಂಬ ನಿವೃತ್ತ ಚಾಲಕ ತನ್ನ ಪತ್ನಿ ಬೇಬಿ(60) ಕೊಲೆ ಮಾಡಿ, ತಾನೂ ನೇಣಿಗೆ ಶರಣಾಗಿದ್ದಾನೆ. ವೆಂಕಟೇಶನ್ BMTC ಡ್ರೈವರ್ ಆಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.

ಘಟನೆಗೆ ಕಾರಣವೇನು?

ಹತ್ಯೆಗೀಡಾದ ವೃದ್ಧೆ ಬೇಬಿಗೆ ಸ್ಟ್ರೋಕ್ ಹೊಡೆದಿದ್ದ ಕಾರಣ ಹಾಸಿಗೆ ಹಿಡಿದು (ಬೆಡ್ ರಿಡನ್) ಮಲಗಿದ್ದರು ಎನ್ನಲಾಗಿದೆ. ಈ ವೃದ್ಧ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಅವರು ಹೊರಗೆ ಹೋದಾಗ ಸಣ್ಣಪುಟ್ಟ ವಿಚಾರಗಳಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಇದೇ ರೀತಿ ಕಳೆದ ಮಂಗಳವಾರ (2ನೇ ತಾರೀಖು) ಸಹ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದೆ.

ಇದರಿಂದ ತೀವ್ರ ಕುಪಿತಗೊಂಡ ವೃದ್ಧ ವೆಂಕಟೇಶನ್ ಅವರು ಮನೆಯಲ್ಲಿದ್ದ ಬಟ್ಟೆ ಒಣಗಾಕುವ ಹಗ್ಗದಿಂದಲೇ ಪತ್ನಿ ಬೇಬಿ ಅವರ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ಪತ್ನಿಯ ಕೊಲೆ ಮಾಡಿದ ಬಳಿಕ, ಅದೇ ಹಗ್ಗವನ್ನು ಬಳಸಿಕೊಂಡು ತಾವೂ ನೇಣಿಗೆ ಶರಣಾಗಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ:

ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸಿದ್ದಾರೆ.

WhatsApp Group Join Now

Spread the love

Leave a Reply