ಸರ್ಕಾರೀ ಜಾಗದಲ್ಲಿದ್ದವರಿಗೆ ಕೊನೆಗೂ ದೊಡ್ಡ ಗುಡ್ ನ್ಯೂಸ್ | Akrama Sakarama 2025

Spread the love

ಹಲವು ವರ್ಷಗಳಿಂದ ಸರ್ಕಾರಿ ಭೂಮಿಯನ್ನ ಬಳಕೆ ಮಾಡಿಕೊಳ್ಳುತ್ತಿರುವವರಿಗೆ ಈಗ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಾಕಷ್ಟು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿಯನ್ನ ಮಾಡಿಕೊಂಡು ಬರುತ್ತಿರುವ ಅರಣ್ಯ ಭಾಗದ ರೈತರಿಗೆ ತೊಂದರೆಯನ್ನು ಕೊಟ್ಟು ಅವರನ್ನ ಒಕ್ಕಲೆಬ್ಬಿಸಬಾರದು ಅಂತ ಈಗ ಸಾರ್ವಜನಿಕ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟಿದ್ದಾರೆ.

ಸಾಕಷ್ಟು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿಯನ್ನ ಮಾಡುತ್ತಿರುವ ರೈತರಿಗೆ ಯಾವುದೇ ಕಾರಣಕ್ಕೂ ನೋಟೀಸ್ ಕೊಡಬಾರದು. ಅವರಿಗೆ ತೊಂದರೆಯನ್ನು ಕೊಟ್ಟು ಒಕ್ಕಲೆಬ್ಬಿಸುವ ಕೆಲಸವನ್ನ ಮಾಡಬಾರದು ಅಂತ ಅರಣ್ಯ ಇಲಾಖೆಗೆ ಈಗ ಮಧು ಬಂಗಾರಪ್ಪ ಅವರು ಸೂಚನೆಯನ್ನ ಕೊಟ್ಟಿದ್ದಾರೆ. ಅಷ್ಟೇ ಮಾತ್ರವಲ್ಲದೆ ಅಧಿಕಾರಿಗಳು ರೈತರ ಪರವಾಗಿ ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪುಗಳನ್ನ ಪಾಲಿಸಬೇಕು ಅಂತ ಆದೇಶವನ್ನು ಹೊರಡಿಸಿದ್ದಾರೆ.

ಈ ಮೂಲಕ ಸರ್ಕಾರಿ ಭೂಮಿಯಲ್ಲಿ ವ್ಯವಸಾಯವನ್ನ ಮಾಡುತ್ತಿರುವ ಎಲ್ಲಾ ರೈತರಿಗೆ ಮಧುಬಂಗಾರಪ್ಪ ಅವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅಷ್ಟೇ ಮಾತ್ರವಲ್ಲದೆ ಅಧಿಕಾರಿಗಳು ಹೊಸದಾಗಿ ಒತ್ತುವರಿ ಮಾಡಿಕೊಳ್ಳುವವರಿಗೆ ಅವಕಾಶವನ್ನು ಕೊಡಬಾರದು. ಅರಣ್ಯ ಒತ್ತುವರಿಯನ್ನ ಸಕ್ರಮಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಅಂತ ಈಗ ಅಧಿಕಾರಿಗಳಿಗೆ ಮಧುಬಂಗಾರಪ್ಪ ಅವರು ಸೂಚನೆಯನ್ನು ಕೊಟ್ಟಿದ್ದಾರೆ.

WhatsApp Group Join Now

Spread the love

Leave a Reply