ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ರಾಜ್ಯಾದ್ಯಂತ ‘ಅಕ್ಕಪಡೆ’ ಜಾರಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

Spread the love

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗೃಹ ಇಲಾಖೆಯು ಸಹಯೋಗದೊಂದಿಗೆ “ಅಕ್ಕ ಪಡೆ” ಎಂಬ ಒಂದು ನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ.

ಪ್ರಸ್ತುತ ಆಧುನಿಕ ಮತ್ತು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ (ಅತ್ಯಾಚಾರ, ಲೈಂಗಿಕ ಕಿರುಕುಳ, ಮಾನವ ಕಳ್ಳ ಸಾಗಣೆ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ & ಪೋಕ್ಸ್) ಅಂತಹ ಪ್ರಕರಣಗಳಿಂದ ಮಹಿಳೆಯರು ಮತ್ತು ಮಕ್ಕಳ ಮೇಲೆ ಮಾನಸಿಕ, ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಹಿಂಸೆಗೊಳಪಟ್ಟಿರುತ್ತಾರೆ.. ಆದುದರಿಂದ ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಪ್ರಖರವಾಗಿ ನಡೆಯುವ ಅಪರಾಧಗಳ ಬಗ್ಗೆ ಕಾನೂನು ಅರಿವು & ಜಾಗೃತಿ ಮೂಡಿಸಲು ಶಿಕ್ಷಣ ನೀಡುವುದು, ಜೊತೆಗೆ ಸಂಕಷ್ಟದಲ್ಲಿ ಇರುವ ಮಹಿಳಾ ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ/ ನೆರವು ನೀಡುವ ಉದ್ದೇಶದಿಂದ “ಅಕ್ಕ ಪಡೆ” ಎಂಬ ತಂಡವನ್ನು ದಿನಾಂಕ:28/11/2025 ರಿಂದ ರಾಜ್ಯದ 31 ಜಿಲ್ಲೆ & 5 ಪೊಲೀಸ್ ಕಮೀಷನರೇಟ್ಗಳಲ್ಲಿ ಜಾರಿಗೆ ತರಲಾಗಿದೆ.

“ಅಕ್ಕ ಪಡೆಯ ರಚನೆ

ಅಕ್ಕ ಪಡೆಯ ತಂಡಕ್ಕೆ ಪ್ರತಿ ಜಿಲ್ಲೆ/ ಕಮೀಷನರೇಟ್ಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು 04 ಸಂಖ್ಯೆಯ ಮಹಿಳಾ ಹೋಂಗಾರ್ಡ್ಗಳನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸತಕ್ಕದ್ದು, ಅಲ್ಲದೇ ವೈಯಕ್ತಿಕವಾಗಿ ಗಮನ ಹರಿಸಿ ಸದೃಢ ದೇಹದಾರ್ಡ್ಯತೆ ಮತ್ತು ಆರೋಗ್ಯ ಹೊಂದಿರುವ 35 ವರ್ಷದೊಳಗಿನ ರವರನ್ನು ನೇಮಿಸುವುದು.

ಆಯ್ಕೆ ಮಾಡಿದ ಮಹಿಳಾ ಹೋಂಗಾರ್ಡ್ ರವರಿಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನಗಳ ಕುರಿತು ಸಂಪೂರ್ಣ ತರಬೇತಿಯನ್ನು ನೀಡಿ ಅವರಿಗೆ ಈ ಬಗ್ಗೆ ಕೈಪಿಡಿಯನ್ನು ನೀಡಿ ಕರ್ತವ್ಯವನ್ನು ನಿರ್ವಹಿಸಲು ತಿಳಿಸುವುದು. ಒಂದು ವಾರದ ತರಬೇತಿ ನೀಡಲು ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳುವುದು.

ಅಕ್ಕ ಪಡೆ ತಂಡದಲ್ಲಿ ಕರ್ತವ್ಯ ನಿರ್ವಹಿಸುವ 04 ಮಹಿಳಾ ಹೋಂ ಗಾರ್ಡ್ ರವರಿಗೆ ಸರ್ಕಾರವು ನಿಗಧಿಪಡಿಸಿದ ವೇತನದ ವೆಚ್ಚವನ್ನು ಮಹಿಳಾ ಮತ್ತು ಮಕ್ಕಳ ಅಭೀವೃದ್ಧಿ ಇಲಾಖೆಯಿಂದ ಗೌರವ ಧನ ಮಂಜೂರಿಸುವುದು ಅಲ್ಲದೇ ಅಕ್ಕ ಪಡೆ ತಂಡಗಳು ಜಿಲ್ಲಾ ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಗಸ್ತು ಸಂಚರಿಸಲು ಅಗತ್ಯವಾದ ವಾಹನಗಳನ್ನು (ಮಹೇಂದ್ರ ಬೊಲೆರೊ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಂಚಿಕೆಮಾಡಲಾಗುವುದು. ಇಲಾಖೆಯಿಂದ ಘಟಕಗಳಿಗೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಂಚಿಕೆಮಾಡಲಾದ ವಾಹನಗಳ ಚಾಲನೆ, ನಿರ್ವಹಣೆ, ಮತ್ತು ಇಂಧನದ ವೆಚ್ಚವನ್ನು ಆಯಾ ಪೊಲೀಸ್ ಇಲಾಖೆಯ ಘಟಕಾಧಿಕಾರಿಗಳು ಸಾರಿಗೆ ವೆಚ್ಚದಡಿ ಭರಿಸಲು ಕ್ರಮವಹಿಸಬೇಕಾಗಿರುತ್ತದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಂಚಿಕೆಮಾಡಲಾಗಿರುವ ವಾಹನವನ್ನು ಅಕ್ಕ ಪಡೆಯ ಕರ್ತವ್ಯಕ್ಕೆ ಮಾತ್ರ ಉಪಯೋಗಿಸುವುದು ಮತ್ತು ಸದರಿ ವಾಹನಕ್ಕೆ ಪ್ರತ್ಯಕ ಲಾಗ್ ಬುಕ್ ನಿರ್ವಹಣೆಯನ್ನು ಮಾಡಲು ಸೂಚಿಸಿದೆ.

ಅಕ್ಕ ಪಡೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಹೋಂ ಗಾರ್ಡ್ ಗಳಿಗೆ ಕಮಾಂಡೋ (camouflage) ಸಮವಸ್ತ್ರವನ್ನು ಆಯಾ ಜಿಲ್ಲಾ ಪೊಲೀಸ್ ಮತ್ತು ಕಮೀಷನರೇಟ್ ಕಛೇರಿಯಿಂದ ಒದಗಿಸುವುದು.

ಅಕ್ಕ ಪಡೆಯ ಕಾರ್ಯನಿರ್ವಹಣೆಯನ್ನು ಜಿಲ್ಲಾ ಮತ್ತು ಕಮೀಷನರೇಟ್ ಮಟ್ಟದಲ್ಲಿ ಪರಿಶೀಲಿಸಲು ಹಾಗೂ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಕೆಳಕಂಡಂತೆ ಸಮಿತಿಯನ್ನು ರಚಿಸುವುದು

ಜವಾಬ್ದಾರಿಗಳೇನು.?

• ಅಕ್ಕ ಪಡೆ ತಂಡದಲ್ಲಿ 02 ಸಂಖ್ಯೆಯ ಹೋಂಗಾರ್ಡ್ಗಳು ಬೆಳಿಗ್ಗೆ 6.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯ ವರೆಗೆ ಮೊದಲನೆ ಪಾಳಿ ಮತ್ತು 02 ಹೋಂಗಾರ್ಡ್ಗಳು ಎರಡನೇ ಪಾಳೆಯಲ್ಲಿ 2.00 ರಿಂದ ರಾತ್ರಿ 10.00 ಗಂಟೆ ವರೆಗೆ ಗಸ್ತು ಕರ್ತವ್ಯ ನಿರ್ವಹಿಸುವುದು.

• ಅಕ್ಕ ಪಡೆಯ ತಂಡದಲ್ಲಿ ಮಹಿಳಾ ಠಾಣೆಯ ಇಬ್ಬರು ಮಹಿಳಾ ಪಿಸಿಗಳೊಂದಿಗೆ ಸಂಖ್ಯೆ ಹೋಂಗಾರ್ಡ್ಗಳು ಪತಿ ದಿನ ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವುದು 1+2 ಮತ್ತು ಈ ಬಗ್ಗೆ ಪಿಐ ಮಹಿಳಾ ಠಾಣೆರವರು ಉಸ್ತುವಾರಿವಹಿಸುವುದು.

• ಅಕ್ಕ ಪಡೆಯ ತಂಡವು ಪ್ರತಿ ಜಿಲ್ಲೆ ಮತ್ತು ಕಮೀಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವುದು.

• ಪ್ರತಿ ದಿನ ಕರ್ತವ್ಯ ನಿರ್ವಹಿಸಿದ ಬಗ್ಗೆ ಕರ್ತವ್ಯಯಾದಿ (Duty Dairy) ನಿರ್ವಹಿಸುವುದು.

• ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅಕ್ಕ ಪಡೆ ತಂಡವು ಸ್ಥಳೀಯ ಪೊಲೀಸರ ನಿಕಟ ಸಹಯೋಗದೊಂದಿಗೆ ಬೆಳೆಗೆ, 7.00 ರಿಂದ ರಾತ್ರಿ 8.00 ರವರೆಗೆ ಎರಡು ಪಾಳಿಗಳಲ್ಲಿ ಅಂದರೆ, ಬೆಳೆಗೆ 7.00 ರಿಂದ ಮಧ್ಯಾಹ್ನ 2.00 ಗಂಟೆ ಮತ್ತು ಮಧ್ಯಾಹ್ನ ಪಾಳಿಯಲ್ಲಿ 2.00 ರಿಂದ ರಾತ್ರಿ 8.00 ಗಂಟೆಯ ವರೆಗೆ ಕಾರ್ಯನಿರ್ವಹಿಸುವುದು.

• ತಂಡದ ಸದಸ್ಯರನ್ನು ಶಾಲೆ, ಕಾಲೇಜು, ಬಾಲಕಿಯರ/ಮಹಿಳಾ ಹಾಸ್ಟೆಲ್, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಸ್ಥಳೀಯ ಮಾರುಕಟ್ಟೆ ಪ್ರೇಕ್ಷಣಿಯ ಸ್ಥಳಗಳು ಪವಿತ್ರ ಸ್ಥಳಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳಿಗೆ ಬೇಟಿ ಕೊಟ್ಟು ಅಲ್ಲಿ ಆಗುವ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದು ಅಲ್ಲದೆ ಮಹಿಳೆಯರ ಮತ್ತು ಮಕ್ಕಳ ವಿರುದ್ಧ ಅಹಿತಕರ ಘಟನೆ ಸಂಭವಿಸಿದಲ್ಲಿ ಕೂಡಲೇ ಜಿಲ್ಲಾ/ ಕಮಿಷನರೇಟ್ ವ್ಯಾಪ್ತಿಯ ನಿಯಂತ್ರಣ ಕೊಠಡಿಗೆ ಶೀಘ್ರುವಾಗಿ ಮಾಹಿತಿ ರವಾನಿಸುವುದು.

• ಜಾಗೃತಿ : ಅಕ್ಕ ಪಡೆಯ ತಂಡವು ಶಾಲಾ, ಕಾಲೇಜು ಮತ್ತು ವಿಧ್ಯಾರ್ಥಿ/ವಿಧ್ಯಾರ್ಥಿನಿಯರ ವಸತಿ ನಿಲಯಗಳಿಗೆ ಪ್ರತಿ ವಾರ ಕಡ್ಡಾಯವಾಗಿ ಭೇಟಿ ನೀಡುವುದು, ಅಲ್ಲದೆ ಸಾರ್ವಜನಿಕ ಜನ ಸಂದಣಿ ಸ್ಥಳಗಳಲ್ಲಿ ಮಹಿಳೆಯರ ವಿರುದ್ದ ಲೈಂಗಿಕ ಕಿರುಕಳು ಕುರಿತು ಮೂಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು

• ಅಕ್ಕ ಪಡೆಯ ತಂಡವು ಪ್ರತಿ ನಿತ್ಯ ಜಿಲ್ಲಾ/ ಕಮೀಷನರೇಟ್ನ ವ್ಯಾಪ್ತಿಯಲ್ಲಿ ಬರುವ ಶಾಲಾ ಮತ್ತು ಕಾಲೇಜುಗಳಿಗೆ ತೆರಳಿ ಮಕ್ಕಳಲ್ಲಿ ಪೋಕೋ ಮತ್ತು ಸೈಬರ್ ಅಪರಾಧ ಹಾಗೂ ಮಾದಕ ವಸ್ತು ಸೇವನೆ ದುಷ್ಪರಿಣಾಮದ ಬಗ್ಗೆ ಜಾಗೃತಿಯ ಕುರಿತು ಅರಿವು ಮೂಡಿಸುವುದು.

• ವಾರದಲ್ಲಿ ಒಂದು ದಿನ ಜಿಲ್ಲೆಯ ಇತರೇ ತಾಲ್ಲೂಕುಗಳಲ್ಲಿ ಮತ್ತು ಪ್ರಮುಖ ಪಟ್ಟಣಗಳ ಶಾಲೆ & ಕಾಲೇಜುಗಳು ಹಾಗೂ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ. ಜನನಿಬಿಡ ಪದೇಶಗಳಲ್ಲಿ ಗಸ್ತು (Patroling) ಮೂಲಕ ಮಹಿಳೆ & ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಬಗ್ಗೆ ಕ್ರಮ ಕೈಗೊಳ್ಳುವುದು.

WhatsApp Group Join Now

Spread the love

Leave a Reply