ಕೊಡವ ಸಮುದಾಯದಿಂದ ನನಗಿಂತಲೂ ಮೊದಲು ಚಿತ್ರರಂಗಕ್ಕೆ ಬಂದಿದ್ದಾರೆ – ನಟಿ ಪ್ರೇಮ

Spread the love

ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಮೊದಲು ಬಂದಿದ್ದು ನಾನೇ ಎನ್ನುವ ನಟಿ ರಶ್ಮಿಕಾ ಮಂದಣ್ಣ ಹೇಳಿಕೆಗೆ ಹಿರಿಯ ನಟಿ ಪ್ರೇಮ ಪ್ರತಿಕ್ರಿಯಿಸಿದ್ದು, ಚಿತ್ರರಂಗಕ್ಕೆ ಕೊಡವ ಸಮುದಾಯದಿಂದ ನನಗಿಂತ ಮುಂಚೆ ಚಾಮರಾಜಪೇಟೆ ಮೂಲದ ಶಶಿಕಲಾ ಎಂಬುವವರು ಬಂದಿದ್ದರು.

ಅವರು ಪೋಷಕ ಪಾತ್ರದಲ್ಲಿ ಮೊದಲು ಕಾಣಿಸಿಕೊಂಡಿದ್ದರು. ಅದಾದ ಬಳಿಕ ನಾನು ನಟಿಯಾಗಿ ಬಂದೆ. ನಂತರ ಕೊಡವ ಸಮುದಾಯದ ಹಲವಾರು ಜನರು ಚಿತ್ರರಂಗಕ್ಕೆ ಬಂದಿದ್ದಾರೆ ಎಂದು ಹೇಳಿದರು.

ನಟಿ ರಶ್ಮಿಕಾ ಮಂದಣ್ಣ ಹೇಳಿಕೆ ಕುರಿತು ಮಾತನಾಡಲು ನಮ್ಮ ಕೊಡವ ಸಮುದಾಯವಿದೆ. ಅವರು ಚರ್ಚೆ ಮಾಡಿ, ಮಾತನಾಡುತ್ತಾರೆ. ಈ ಬಗ್ಗೆ ಮಾತಾಡುವಷ್ಟು ದೊಡ್ಡವಳು ನಾನಲ್ಲ. ಅಷ್ಟೊಂದು ದೊಡ್ಡ ವ್ಯಕ್ತಿಯೂ ನಾನಲ್ಲ. ಒಬ್ಬೊಬ್ಬರ ಭಾವನೆಗಳು ಒಂದೊಂದು ರೀತಿಯಾಗಿರುತ್ತದೆ. ಅವರು ಈ ಸಮುದಾಯದ ವಿಷಯವನ್ನು ಯಾಕೆ ಮಾತನಾಡಿದ್ದಾರೋ ನನಗೂ ಗೊತ್ತಾಗಿಲ್ಲ ಎಂದರು.

ಈಗಿನವರ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ನಾನು ಮೊದಲಿನಿಂದಲೂ ನನಗೆ ಕೊಟ್ಟಿರುವ ಪಾತ್ರವನ್ನು ಸರಿಯಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ನಾವೆಲ್ಲರೂ ರಾಜಕುಮಾರ್ ಅಂತವರನ್ನು ನೋಡಿಕೊಂಡು ಬೆಳೆದಿದ್ದೇವೆ. ಆದರೆ ಈಗಿನವರೂ ಬೇಗ ಬೆಳೆಯಬೇಕು, ಹಣ ಗಳಿಸಬೇಕು, ಕಾರು ತೆಗೆದುಕೊಳ್ಳಬೇಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಮೊದಲು ಯಾವುದೇ ಕೆಲಸದಲ್ಲಿಯೂ ಎಲ್ಲರೂ ತಮ್ಮದೇ ಆದ ಸ್ಥಾನವನ್ನು ರೂಪಿಸಿಕೊಳ್ಳಬೇಕು ಎಂದರು.

WhatsApp Group Join Now

Spread the love

Leave a Reply