ಮಹಿಳೆ ಜೊತೆಗೆ ಅಸಭ್ಯ ವರ್ತನೆ ಆರೋಪ : ಬೆತ್ತಲೆಯಾಗಿ ಮಸಾಜ್ ಮಾಡಿಸಿಕೊಂಡ ಸ್ವಾಮೀಜಿ.!

Spread the love

ಮಹಿಳೆಯೊಬ್ಬರ ಜೊತೆಗೆ ಸ್ವಾಮೀಜಿಯೊಬ್ಬರು ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಧಾರವಾಡ ಜಿಲ್ಲೆಯ ಕವಲಗೇರಿ ಮಠದ ಶಿವಾನಂದ ಮಠದ ಸರಸ್ವತಿ ಸ್ವಾಮೀಜಿ ಬೆತ್ತಲೆಯಾಗಿ ಮಹಿಳೆಯಿಂದ ಮಸಾಜ್ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಸದ್ಯ ಇದರ ವಿಡಿಯೋ ವೈರಲ್‌ ಆಗಿದೆ. ಘಟನೆ ಸಂಬಂಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ.

ಸುಮಾರು 5 ಜನರ ಗುಂಪು ಈ ವಿಡಿಯೋವನ್ನಿಟ್ಟುಕೊಂಡು ಸ್ವಾಮೀಜಿಯನ್ನ ಬ್ಲಾಕ್‌ಮೇಲ್ ಮಾಡಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿತ್ತು. ಗ್ರಾಮದ ವ್ಯಕ್ತಿಯೊಬ್ಬರ ಸಮ್ಮುಖದಲ್ಲಿ 10 ಲಕ್ಷಕ್ಕೆ ಡೀಲ್ ಓಕೆ ಆಗಿತ್ತು. ಬಳಿಕ ಸ್ವಾಮೀಜಿ ವಿಡಿಯೋ ಡಿಲೀಟ್‌ ಮಾಡುವಂತೆ ಹೇಳಿ ಮಠಕ್ಕೆ ಕರೆಸಿಕೊಂಡು 7 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಬಾಕಿ 3 ಲಕ್ಷ ಹಣ ಬಂದಿಲ್ಲ ಅಂತ ವಿಡಿಯೋ ವೈರಲ್‌ ಮಾಡಿದ್ದಾರೆ ಎಂದು ಹೇಳಲಾಗಿದೆ.

WhatsApp Group Join Now

Spread the love

Leave a Reply