ಮಗನನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಅಪಘಾತ – ತಾಯಿ, ಮಗು ಸಾವು!

Spread the love

ಬೆಳ್ಳಂ ಬೆಳಗ್ಗೆಯೇ ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾಲೇಜು ಬಸ್ ಡಿಕ್ಕಿ ಹೊಡೆದ ಪರಿಣಾಮ ಶಾಲೆ ಕಡೆಗೆ ಹೋಗ್ತಿದ್ದ ತಾಯಿ-ಮಗ ಸಾವನ್ನಪ್ಪಿರುವ ದಾರುಣ ಘಟನೆ ವಿವೇಕನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮಗನನ್ನ ಶಾಲೆಗೆ ಕರೆದುಕೊಂಡು ಹೋಗ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ರಸ್ತೆ ದಾಟುತ್ತಿದ್ದ ವೇಳೆ ತಾಯಿ-ಮಗನಿಗೆ ಬಸ್ ಡಿಕ್ಕಿ

ಮಗನ ಜೊತೆ ಶಾಲೆಗೆ ತಾಯಿ ಕೂಡ ನಡೆದುಕೊಂಡು ಹೋಗುತ್ತಿದ್ರು. ಇಬ್ಬರು ವಿವೇಕನಗರ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಖಾಸಗಿ ಕಾಲೇಜು ಬಸ್ ಮಹಿಳೆ ಮತ್ತು ಮಗನಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮಹಿಳೆ ಹಾಗೂ ಬಾಲಕ ಸಾವನ್ನಪ್ಪಿದ್ದು, ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದ ಬಳಿ ಚಾಲಕ ಎಸ್ಕೇಪ್

ಶಾಲೆಗೆ ಹೋಗ್ತಿದ್ದ ತಾಯಿ- ಮಗನ ಪಾಲಿಗೆ ಖಾಸಗಿ ಕಾಲೇಜು ಬಸ್ ಯಮಸ್ವರೂಪಿಯಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಬಸ್ ಚಾಲಕ ಎಸ್ಕೇಪ್ ಆಗಿದ್ದಾನೆ. ಅಶೋಕನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಲೆಯಲ್ಲೇ ಸಹಾಯಕಿ ಆಗಿದ್ದ ತಾಯಿ

ಮೃತ ಮಹಿಳೆ ಸಂಗೀತಾ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡ್ತಿದ್ದರು. ಇವರು ಮೂಲತಃ ಆಂಧ್ರ ಪ್ರದೇಶ ಮೂಲದವರಾಗಿದ್ದಾರೆ. ಸಂಗೀತಾ ಪತಿ ಪ್ರಸಾದ್ ಎಂಬುವವರು ಕೂಡ ಚಾಲಕನಾಗಿ ಕೆಲಸ ಮಾಡ್ತಿದ್ದಾರೆ.

ತಾನು ಕೆಲಸ ಮಾಡ್ತಿದ್ದ ಶಾಲೆಗೆ ಮಗನನ್ನ ಸೇರಿಸಿದ್ದ ಸಂಗೀತಾ. 8 ವರ್ಷದ ಮಗನೊಂದಿಗೆ ಬೆಳಗ್ಗೆ 6.30ರ ಸುಮಾರಿಗೆ ಶಾಲೆಗೆ ಕೆಲಸಕ್ಕೆಂದು ತೆರಳ್ತಿದ್ದರು ಎನ್ನಲಾಗ್ತಿದೆ.

WhatsApp Group Join Now

Spread the love

Leave a Reply