ಆಧಾರ್ ಕಾರ್ಡ್ ಇದ್ದವರಿಗೆ 5 ಬಿಗ್ ಗುಡ್ ನ್ಯೂಸ್ ಕೊಟ್ಟ ಸರ್ಕಾರ | Aadhaar Card Updates

Spread the love

Aadhaar Card Updates : ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ನ್ನ ಹೊಂದಿರುತ್ತಾರೆ. ಆಧಾರ್ ಕಾರ್ಡ್ ಅನ್ನೋದು ಒಂದು ಪ್ರಮುಖವಾದ ಗುರುತಿನ ಚೀಟಿಯಾಗಿದೆ. ಎಲ್ಲಾ ಸರ್ಕಾರಿ ಕೆಲಸಗಳು ಆಗಿರಬಹುದು ಅಥವಾ ಖಾಸಗಿ ಕೆಲಸಗಳು ಆಗಿರಬಹುದು ಎಲ್ಲಾ ಕೆಲಸಗಳಿಗೆ ಆಧಾರ್ ಕಾರ್ಡ್ ಒಂದು ಪ್ರಮುಖವಾದ ದಾಖಲೆಯಾಗಿದೆ. ಭಾರತೀಯ ನಿಯಮದ ಪ್ರಕಾರ ಆಧಾರ್ ಕಾರ್ಡನ್ನ ಬಳಸಿಕೊಂಡು ಈ ಐದು ಸರ್ಕಾರಿ ಪ್ರಯೋಜನಗಳನ್ನ ಸುಲಭವಾಗಿ ಪಡೆದುಕೊಳ್ಳಬಹುದು. ಹಾಗಾದರೆ ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗುವ ಆ ಐದು ದೊಡ್ಡ ಪ್ರಯೋಜನ ಯಾವುದು ಅನ್ನುವುದನ್ನ ತಿಳಿಯೋಣ.

WhatsApp Group Join Now
  • ಆಧಾರ್ ಕಾರ್ಡನ್ನ ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡನ್ನ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದವರು ಗ್ಯಾಸ್ ಸಬ್ಸಿಡಿ ಆಗಿರಬಹುದು ಅಥವಾ ಕಿಸಾನ್ ಸಮ್ಮಾನ್ ಯೋಜನೆಯ ಹಣವಾಗಿರಬಹುದು ಸುಲಭವಾಗಿ ಪಡೆದುಕೊಳ್ಳಬಹುದು. ಈ ಹಿಂದೆ ಮಧ್ಯವರ್ತಿಗಳು ಮತ್ತು ಭ್ರಷ್ಟಾಚಾರಿಗಳಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿತ್ತು ಆದರೆ ಈಗ ಆಧಾರ್ ಕಾರ್ಡನ್ನ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ ಕಾರಣ ಸರ್ಕಾರದಿಂದ ನೇರವಾಗಿ ಫಲಾನುಭವಿಗಳಿಗೆ ಹಣ ಜಮವಾಗುತ್ತದೆ.
  • ಆಧಾರ್ ಕಾರ್ಡನ್ನ ನೀವು ಪ್ರಮುಖ ಗುರುತಿನ ಚೀಟಿಯಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ರೇಷನ್ ಕಾರ್ಡುಗಳನ್ನ ಮತ್ತು ವೋಟರ್ ಐಡಿಗಳನ್ನ ಪ್ರಮುಖ ಗುರುತಿನ ಚೀಟಿಯಾಗಿ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಆಧಾರ್ ಕಾರ್ಡನ್ನ ಪ್ರಮುಖ ಗುರುತಿನ ಚೀಟಿಯಾಗಿ ಬಳಕೆ ಮಾಡಿಕೊಳ್ಳಬಹುದು. ಸಿಮ್ ಕಾರ್ಡ್ ಖರೀದಿ ಆಗಿರಬಹುದು. ಹೊಸ ಪಾಸ್ಪೋರ್ಟ್ ಮಾಡಿಸಲು ಆಗಿರಬಹುದು ಅಥವಾ ಬ್ಯಾಂಕ್ ಖಾತೆ ತೆರೆಯುವುದು ಆಗಿರಬಹುದು ಹೀಗೆ ಯಾವುದೇ ಕೆಲಸವನ್ನ ಮಾಡಲು ಇನ್ನು ಮುಂದೆ ಆಧಾರ್ ಕಾರ್ಡನ್ನ ಬಳಕೆ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರ ಈಗ ಆಧಾರ್ ಕಾರ್ಡನ್ನ ಪ್ರಮುಖವಾದ ಗುರುತಿನ ಚೀಟಿ ಅಂತ ಘೋಷಣೆ ಮಾಡಿದೆ.
  • ಆಧಾರ್ ಕಾರ್ಡ್ ಮೂಲಕ ಕೆಲವು ಮೊಬೈಲ್ ಸೇವೆಯನ್ನ ಪಡೆದುಕೊಳ್ಳಬಹುದು. ಹೌದು, ಮೊಬೈಲ್ ಅಥವಾ ಸಿಮ್ ಖರೀದಿ ಮಾಡುವ ಸಮಯದಲ್ಲಿ ನೀವು ಆಧಾರ್ ಕಾರ್ಡ್ ಕೊಡುವುದು ಕಡ್ಡಾಯವಾಗಿದೆ. ಕೆಲವು ವಂಚನೆಯನ್ನ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಿಮ್ ಕಾರ್ಡ್ ಮತ್ತು ಮೊಬೈಲ್ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ನಿಮ್ಮ ಮೊಬೈಲ್ ಕಳವಾದಾಗ ಅಥವಾ ನಿಮ್ಮ ಸಿಮ್ ಕಾರ್ಡನ್ನ ಬೇರೆಯವರು ದುರುಪಯೋಗಪಡಿಸಿಕೊಂಡರೆ ನೀವು ಆಧಾರ್ ಕಾರ್ಡ್ ಮೂಲಕ ಅದನ್ನ ಸುಲಭವಾಗಿ ಪತ್ತೆ ಹಚ್ಚಬಹುದು. ಅಷ್ಟೇ ಮಾತ್ರವಲ್ಲದೆ ಡಿಜಿಟಲ್ ಸೇವೆಯಲ್ಲಿ ನೀವು ಆಧಾರ್ ಕಾರ್ಡನ್ನ ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.
  • ಮಕ್ಕಳು ಮತ್ತು ವೃದ್ಧರಿಗೆ ಆಧಾರ್ ಕಾರ್ಡಿಂದ ಸಾಕಷ್ಟು ಪ್ರಯೋಜನಗಳಿವೆ. ನವಜಾತ ಶಿಶುಗಳು ಮತ್ತು ವೃದ್ದರಿಗೆ ಆಧಾರ್ ಕಾರ್ಡ್ ಅನ್ನೋದು ಒಂದು ಪ್ರಮುಖವಾದ ದಾಖಲೆಯಾಗಿದೆ. ಶಾಲಾ ಪ್ರವೇಶವಾಗಿರಬಹುದು, ವಿದ್ಯಾರ್ಥಿ ವೇತನವಾಗಿರಬಹುದು ಅಥವಾ ಮಕ್ಕಳ ಆರೋಗ್ಯ ಯೋಜನೆಗಳು ಆಗಿರಬಹುದು. ಆಧಾರ್ ಕಾರ್ಡ್ ಪ್ರಮುಖವಾದ ದಾಖಲೆಯಾಗಿದೆ. ಅದೇ ರೀತಿಯಲ್ಲಿ ವೃದ್ಧರು ಕೂಡ ಆಧಾರ್ ಕಾರ್ಡ್ ಬಳಸಿಕೊಂಡು ಆರೋಗ್ಯ ಸೇವೆಯನ್ನ ಉಚಿತವಾಗಿ ಪಡೆದುಕೊಳ್ಳಬಹುದು. ಅಷ್ಟೇ ಮಾತ್ರವಲ್ಲದೆ ವೃದ್ದರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರುವ ಜೀವನ್ ಪ್ರಮಾಣಪತ್ರ ಸೌಲಭ್ಯವು ಮನೆಯಲ್ಲಿಯೇ ಪಿಂಚಣಿಯನ್ನು ಪಡೆದುಕೊಳ್ಳಲು ಸಹಾಯಕವಾಗಲಿದೆ.
  • ಆಧಾರ್ ಕಾರ್ಡ್ ಈಗ ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. ಡಿಜಿ ಲಾಕರ್ ಗಳಿಂದ ದಾಖಲೆಗಳನ್ನ ಡೌನ್ಲೋಡ್ ಮಾಡಿಕೊಳ್ಳುವುದಕ್ಕೆ ಮತ್ತು ಈ ಶ್ರಮ್ ಕಾರ್ಡಿನ ಪ್ರಮಾಣಪತ್ರವನ್ನು ಪಡೆದುಕೊಳ್ಳುವುದಕ್ಕೆ ಆಧಾರ್ ಕಾರ್ಡ್ ಪ್ರಮುಖವಾದ ದಾಖಲೆಯಾಗಿದೆ. ಆಧಾರ್ ಕಾರ್ಡನ್ನ ಬಳಸಿಕೊಂಡು ನಿಮ್ಮ ಬ್ಯಾಂಕಿಂಗ್ ಸೇವೆಯನ್ನ ನೀವು ಡಿಜಿಟಲೀಕರಣ ಗೊಳಿಸಿಕೊಳ್ಳಬಹುದು. ಆಧಾರ್ ಕಾರ್ಡ್ ಈಗ ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ ಅಂತ ಹೇಳಿದ್ರೆ ತಪ್ಪಾಗಲ್ಲ.

Spread the love

Leave a Reply