ಆಧಾರ್ ಕಾರ್ಡ್ ವಿಷಯವಾಗಿ ಕೇಂದ್ರ ಸರ್ಕಾರ ಈಗ ಮಹತ್ವದ ಆದೇಶವನ್ನು ಹೊರಡಿಸಿದೆ. ಯಾರು 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡನ್ನ ಹೊಂದಿದ್ದಾರೋ ಅವರು ತಕ್ಷಣ ಈ ಕೆಲಸವನ್ನ ಮಾಡಿಸಿಕೊಳ್ಳಬೇಕಾಗಿದೆ. 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡನ್ನ ಹೊಂದಿರುವವರು ಈ ಕೆಲಸವನ್ನ ತಕ್ಷಣ ಮಾಡದೇ ಇದ್ದರೆ ಅವರು ಕೆಲವು ಸರ್ಕಾರಿ ಯೋಜನೆಗಳ ಲಾಭವನ್ನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾದ್ರೆ 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡನ್ನ ಹೊಂದಿರುವವರಿಗೆ ಕೇಂದ್ರ ಸರ್ಕಾರ ಕೊಟ್ಟಿರುವ ಎಚ್ಚರಿಕೆ ಏನು.? ತಿಳಿಯೋಣ.
ಆಧಾರ್ ಕಾರ್ಡ್ ಅನ್ನುವುದು ನಮ್ಮ ದೇಶದ ಒಂದು ಪ್ರಮುಖ ಗುರುತಿನ ಚೀಟಿಯಾಗಿದೆ ಅನ್ನುವುದು ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಈ ಕಾರಣಗಳಿಂದ ಕಾಲ ಕಾಲಕ್ಕೆ ಆಧಾರ್ ಕಾರ್ಡನ್ನ ಅಪ್ಡೇಟ್ ಮಾಡುವುದು ಅತೀ ಕಡ್ಡಾಯವಾಗಿದೆ. ಅದೇ ರೀತಿಯಲ್ಲಿ 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನ ಕಡ್ಡಾಯವಾಗಿ ಅಪ್ಡೇಟ್ ಮಾಡಬೇಕಾಗಿದೆ.
ಹೆಸರು ಬದಲಾಯಿಸಿಕೊಂಡಿದ್ದರೆ, ಮೊಬೈಲ್ ಸಂಖ್ಯೆ ಬದಲಾಯಿಸಿಕೊಂಡಿದ್ದರೆ ಅಥವಾ ವಿಳಾಸ ಬದಲಾಗಿದ್ದರೆ ಅಥವಾ ಜನ್ಮ ದಿನಾಂಕ ತಪ್ಪಾಗಿದ್ದರೆ ಕಡ್ಡಾಯವಾಗಿ ಅಪ್ಡೇಟ್ ಮಾಡಿಕೊಳ್ಳಬೇಕಾಗಿದೆ. ಜೂನ್ 14, 2026 ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡುವ ಕೊನೆಯ ದಿನಾಂಕವಾಗಿದೆ. ಇನ್ನು ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇರುವವರು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಸುಲಭವಾಗಿ ಯಾವುದೇ ಶುಲ್ಕವಿಲ್ಲದೇ ಅಪ್ಡೇಟ್ ಮಾಡಬಹುದು. ಸರ್ಕಾರಿ ಶುಲ್ಕವಾಗಿ 50 ರೂಪಾಯಿ ಶುಲ್ಕವನ್ನ ನೀವು ಪಾವತಿ ಮಾಡಿದರೆ ಸಾಕಾಗುತ್ತದೆ.
ಒಂದುವೇಳೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇದ್ದರೆ ಅಂದರೆ ಜೂನ್ 14, 2026ರ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇದ್ದರೆ ಅವರು ಕಡ್ಡಾಯವಾಗಿ ದಂಡವನ್ನ ಪಾವತಿ ಮಾಡಬೇಕಾಗುತ್ತದೆ. ವಿಶೇಷವಾಗಿ 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡನ್ನ ಯಾರು ಹೊಂದಿದ್ದಾರೋ ಅವರು ಕಡ್ಡಾಯವಾಗಿ ಆಧಾರ್ ಕಾರ್ಡನ್ನ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಸಮಯದಲ್ಲಿ ನೀವು ಕೆಲವು ಅಗತ್ಯ ದಾಖಲೆಗಳನ್ನ ಕಡ್ಡಾಯವಾಗಿ ನೀಡಬೇಕಾಗುತ್ತದೆ.

ದೇಶಾದ್ಯಂತ ಆಧಾರ್ ಕಾರ್ಡ್ ನಿಯಮ ಬದಲು | ಹೊಸ ನಿಯಮವೇನು.? Aadhaar Card Rules Updates
WhatsApp Group
Join Now