ಫೇಸ್ ಬುಕ್ ಗೆಳತಿಗಾಗಿ ಹೋಂ ಸ್ಟೇಗೆ ಹೋದ ಆಸಾಮಿ : ಹನಿಟ್ರ್ಯಾಪ್ ಗೆ ಸಿಲುಕಿ ತಪ್ಪಿಸಿಕೊಳ್ಳಲು ಬೆತ್ತಲಾಗಿ ಹೊರಗೋಡಿ ಬಂದ ಯುವಕ

Spread the love

ಮಡಿಕೇರಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಹನಿ ಟ್ರ್ಯಾಪ್ ಗೆ ಬಲಿಯಾದ ಯುವಕನೊಬ್ಬ ಬೆತ್ತಲಾಗಿ ಓಡಿ ಬಂದಿರುವ ಘಟನೆ ವರದಿಯಾಗಿದೆ. ಹೋಂ ಸ್ಟೇ ಇಂದ ಯುವಕ ಬೆತ್ತಲಾಗಿ ಓಡಿ ಬಂದಿದ್ದು ಆತನನ್ನು ಹಿಡಿದು ವಿಚಾರಣೆ ನಡೆಸಲಾಗಿದೆ.

ವಿಚಾರಣೆ ನಡೆಸಿದಾಗ ಫೇಸ್ಬುಕ್ ಗೆಳತಿಗಾಗಿ ಮಹೇಶ್ ಎನ್ನುವ ಯುವಕ ಮಡಿಕೇರಿಗೆ ಬಂದಿದ್ದ ಹೋಂ ಸ್ಟೇನಲ್ಲಿ ಹನಿ ಟ್ರ್ಯಾಪ್ ಮಾಡಿರುವ ಅನುಮಾನ ವ್ಯಕ್ತವಾಗುತ್ತಿದ್ದು ಹನಿ ಟ್ರ್ಯ್ಯಾಪಿಗೆ ಒಳಗಾಗಿ ಮಹೇಶ್ ಬೆತ್ತಲಾಗಿ ಹೋಂ ಸ್ಟೇ ನಿಂದ ಬೆತ್ತಲಾಗಿ ಹೊರಗಡೆ ಓಡಿ ಬಂದಿದ್ದನ್ನು ನೋಡಿ ಜನ ಶಾಕ್ ಆಗಿದ್ದಾರೆ ಈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಹನಿಟ್ರ್ಯಾಪ್ ಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.

ಫೇಸ್ಬುಕ್ ನಲ್ಲಿ ಮಹೇಶ್‌ಗೆ ಮಹಿಳೆ ಪರಿಚಯವಾಗಿದ್ದಾಳೆ, ಮಡಿಕೇರಿ ಮೂಲದ ಮಹಿಳೆಯ ಜೊತೆಗೆ ಮಹೇಶ್ ಸ್ನೇಹ ಬೆಳೆಸಿದ್ದಾಳೆ, ಮಡಿಕೇರಿಗೆ ಬರುವಂತೆ ಯುವಕನಿಗೆ ಮಹಿಳೆ ಕರೆದಿದ್ದಾಳೆ . ಮಂಗಳದೇವಿ ನಗರದಲ್ಲಿ ಇರುವ ಹೋಂ ಸ್ಟೇಗೆ ಮಹೇಶ್ ಬಂದಿದ್ದಾನೆ ಹೋಂಸ್ಟೇನಲ್ಲಿ ಮಹೇಶ್ಗೆ ಹನಿ ಟ್ರ್ಯಾಪ್ ಮಾಡಿದ್ದಾರೆ ಅಲ್ಲದೇ ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಹಣ ಸಹ ಕಿತ್ತುಕೊಂಡಿದ್ದಾರೆ. ಕೊನೆಗೆ ನಾನು ಅಲ್ಲಿಂದ ಓಡಿ ಬಂದಿದ್ದೇನೆ ಎಂದು ಮಹೇಶ್ ಹೇಳಿದ್ದು ಕೊನೆಗೆ ಪೊಲೀಸರು ಮಹೇಶನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

WhatsApp Group Join Now

Spread the love

Leave a Reply