ಬೆಂಗಳೂರಲ್ಲಿ ಪ್ರಿಯತಮನ ಪಾಲಿಗೆ ಪ್ರೇಯಸಿಯೇ ವಿಲನ್ ಆಗಿದ್ದಾಳೆ. ಕೈಕಾಲು ಕಟ್ಟಿ ಬಾಯಿಗೆ ಟೈಪ್ ಸುತ್ತಿ ಪ್ರಿಯಕರನ ಕೊಲೆ ಮಾಡಿದ್ದಾಳೆ. ಈ ಕೇಸ್ ಸಂಬಂಧ ಮಹಿಳೆಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಊರ್ವಶಿ ಅಲಿಯಾಸ್ ಸಿಂಧು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಹಾಸನ ಮೂಲದ ಪ್ರಿಯಕರ ಮೋಹನ ಕೃಷ್ಣ(29) ನನ್ನು ಇತ್ತೀಚೆಗೆ ಕೊಲೆ ಮಾಡಿದ್ದಳು.
ಪ್ರಾಥಮಿಕ ವಿಚಾರಣೆಯಲ್ಲಿ ಕಿರುಕುಳ ನೀಡುತ್ತಿರುವುದಕ್ಕೆ ಪ್ರಿಯಕರನನ್ನು ಕೊಲೆ ಮಾಡಿರುವುದಾಗಿ ಊರ್ವಶಿ ಪೊಲೀಸರಿಗೆ ತಿಳಿಸಿದ್ದಾಳೆ.
ಮೂರು ತಿಂಗಳ ಹಿಂದೆ ಬಾಗಲಗುಂಟೆಯ ವಿಜಯಲಕ್ಷ್ಮಿ ಬಡಾವಣೆಗೆ ಬಂದಿದ್ದ ಮೋಹನ ಕೃಷ್ಣ ಮತ್ತು ಊರ್ವಶಿ ತಮ್ಮನ್ನು ಪತಿ, ಪತ್ನಿ ಎಂದು ಹೇಳಿಕೊಂಡು ನಟರಾಜ್ ಅವರ ಮನೆ ಬಾಡಿಗೆ ಪಡೆದುಕೊಂಡಿದ್ದರು. ಮನೆ ಚಿಕ್ಕದಾಗಿದ್ದ ಕಾರಣ ಅದೇ ಮನೆಯ ಎದುರುಗಡೆ ಮತ್ತೊಂದು ಮನೆ ಬಾಡಿಗೆ ಪಡೆದುಕೊಂಡಿದ್ದರು.
ಮೋಹನ್ ಕೃಷ್ಣ ಪಿಗ್ನಿ ಕಲೆಕ್ಟರ್, ಊರ್ವಶಿ ಸಹ ನಿರ್ದೇಶಕಿ ಎಂದು ಮನೆ ಮಾಲೀಕರಿಗೆ ಹೇಳಿಕೊಂಡಿದ್ದರು. ಮೋಹನ್ ಕೃಷ್ಣ ಹಾಗೂ ಊರ್ವಶಿ ಇಬ್ಬರಿಗೂ ಕೂಡ ಈಗಾಗಲೇ ಮದುವೆಯಾಗಿದೆ. ಆದರೂ ಇಬ್ಬರೂ ಸಂಬಂಧ ಇಟ್ಟುಕೊಂಡಿದ್ದರು. ಅನಗತ್ಯವಾಗಿ ಅನುಮಾನ ವ್ಯಕ್ತಪಡಿಸಿ ಆತ ಕಿರುಕುಳ ನೀಡುತ್ತಿದ್ದ ಕಾರಣ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಊರ್ವಶಿ ಹೇಳಿಕೆ ನೀಡಿದ್ದಾಳೆ. ಸದ್ಯ ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮೂವರೊಡನೆ ಚಕ್ಕಂದ ಆಡುತ್ತಿದ್ದ ಕಿರುತೆರೆ ನಟಿ – ಇಬ್ಬರಿಗಾಗಿ ಒಬ್ಬನ ಕೈಕಾಲು ಕಟ್ಟಿ ಹತ್ಯೆ!
WhatsApp Group
Join Now