ಪ್ರಿವೆಡ್ಡಿಂಗ್ ಶೂಟ್ ಮುಗಿಸಿ ಬರುವಾಗ ಬೈಕ್ ಗೆ ಲಾರಿ ಡಿಕ್ಕಿ : ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಜೋಡಿ ಸಾವು!

Spread the love

ಕೊಪ್ಪಳದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಇನ್ನೆರಡು ವಾರದಲ್ಲಿ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಜೋಡಿಯೊಂದು ಪ್ರಿವೆಡ್ಡಿಂಗ್ ಶೂಟಿಂಗ್‌ಗೆ ಹೋಗಿ ಬರುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಭಾನುವಾರ ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪ ನಡೆದಿದೆ.

ಕರಿಯಪ್ಪ ಮಡಿವಾಳ್‌ ಹನುಮನಹಟ್ಟಿ (26) ಹಾಗೂ ಕವಿತಾ ಪವಾಡೆಪ್ಪ ಮಡಿವಾಳ (19) ಮೃತ ಜೋಡಿ. 5 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಡಿ.21ರಂದು ಮದುವೆ ನಿಶ್ಚಯವಾಗಿತ್ತು. ಅದರ ಪ್ರಯುಕ್ತ ಪ್ರೀವೆಡ್ಡಿಂಗ್ ಶೂಟಿಂಗ್‌ಗಾಗಿ ಹೊಸಪೇಟೆಯ ಪಂಪಾವನ, ಮುನಿರಾಬಾದಿನ ಜಲಾಶಯದ ಕಡೆ ತೆರಳು ಮರಳುತ್ತಿದ್ದರು.

WhatsApp Group Join Now

ಗೋ ಮಾತೆಗೆ ಚಿಕನ್‌ ಮೋಮಸ್‌ ತಿನ್ನಿಸಿದ ಯುವಕ; ಹಲ್ಲೆ ಮಾಡಿ, ಮೆರವಣಿಗೆ ಮಾಡಿಸಿದ ಬಜರಂಗ ದಳ!

ಕವಿತಾರನ್ನು ತಮ್ಮ ಗಂಗಾವತಿಯ ಮನೆಗೆ ಬಿಟ್ಟು ಹೋಗಲು ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಕ್ವಾರಿಯ ಲಾರಿಯೊಂದು ಬೈಕ್ ಮೇಲೆ ಹರಿದಿದೆ. ಪರಿಣಾಮ ಕವಿತಾ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಕರಿಯಪ್ಪ ತೀವ್ರವಾಗಿ ಗಾಯಗೊಂಡು ಗಂಗಾವತಿ ಆಸತ್ರೆಯಲ್ಲಿ ಮೃತಪಟ್ಟಿದಾರೆ.


Spread the love

Leave a Reply