ಹೃದಯಾಘಾತದಿಂದ ಬೆಳೆದು ನಿಂತ ಮಗ ಸಾವು – ಅಪ್ಪ ಮಾಡಿದ ಕೆಲಸ ಊರೇ ಮೆಚ್ಚುವಂಥದ್ದು!

Spread the love

ಇಳಿವಯಸ್ಸಿನಲ್ಲಿ ಬೆಳೆದು ನಿಂತ ಮಗ ಸಾವನ್ನಪ್ಪಿದರೆ ಅಂಥಾ ಸ್ಥಿತಿ ಯಾರಿಗೂ ಬೇಡ. ಪುತ್ರ ಶೋಕಂ ನಿರಂತರಂ ಎಂಬುದು ಆರ್ಯೋಕ್ತಿ. ಆದರೆ ಇಲ್ಲೊಬ್ಬ ತಂದೆ ತಮ್ಮ ಮಗನನ್ನು ಕಳೆದುಕೊಂಡ ಮೇಲೂ ಸಹ ಆತನ ನೆನಪಿನಲ್ಲಿ ವಿಶಿಷ್ಟ ರೀತಿಯಲ್ಲಿ ಸಮಾಜ ಸೇವೆ ಮಾಡುವ ಮೂಲಕ ಊರಿಗೇ ಮಾದರಿಯಾಗಿದ್ದಾರೆ.

ಹೃದಯಾಘಾತದಿಂದ ಮಗ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆತನ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಇಂಥಾ ದುರ್ಘಟನೆ ಮತ್ತೆ ಯಾರ ಬಾಳಲ್ಲೂ ನಡೆಯದಿರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ತುಮಕೂರು ತಾಲೂಕಿನ ಹೆಬ್ಬಾಕ ಗ್ರಾಮದ ನೀಲಕಂಠಸ್ವಾಮಿ‌ ಎಂಬುವರು ಕಳೆದ ಎರಡು ವಾರಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಆತನ ಪೋಷಕರು ಮಗನ ಅಕಾಲಿಕ ಸಾವಿನಿಂದ ತೀವ್ರ ನೊಂದಿದ್ದ‌ ಹೆತ್ತವರು‌ ನಮ್ಮ ಮಗನಿಗೆ ಬಂದ ಸ್ಥಿತಿ ಮತ್ಯಾರಿಗೂ ಬಾರದಿರಲಿ ಅಂತ ಗ್ರಾಮದ ಪ್ರತಿಯೊಬ್ಬರಿಗೂ ಉಚಿತ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಅಷ್ಟೆ ಅಲ್ಲದೇ, ಎಲ್ಲಾ ಶಾಲಾ ಮಕ್ಕಳು ಹಾಗೂ ಊರಿನ ವೃದ್ಧರಿಗೆ ಉಚಿತವಾಗಿ ರಕ್ತದೊತ್ತಡ, ಮಧುಮೇಹ ತಪಾಸಣೆಯೊಂದಿಗೆ ಇಸಿಜಿ ಮೂಲಕ ಹೃದಯದ ಆರೋಗ್ಯವನ್ನೂ ವೈದ್ಯರ ಮುಖೇನ ಪರಿಶೀಲಿಸಿದ್ದಾರೆ.

ಇದೇ ವೇಳೆ ವೇಳೆ 13 ವರ್ಷದ ಉದಯ್ ಎಂಬ ಬಾಲಕನೊಬ್ಬನಿಗೆ ಶಾಲೆಯಿದ್ದಾಗಲೇ ಎದೆನೋವು ಕಾಣಿಸಿಕೊಂಡ ಹಿನ್ನೆಯಲ್ಲಿ ಆತನಿಗೂ ತಪಾಸಣೆ ನಡೆಸಲಾಯ್ತು. ಪರೀಕ್ಷಿಸಿದ ವೈದ್ಯರು ಯಾವುದೇ ಸಮಸ್ಯೆ ಇಲ್ಲ ಅಂತ ಹೇಳಿದ್ದು, ಆತನ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ. ನೀಲಕಂಠಸ್ವಾಮಿ ಪೋಷಕರ ಕೃತ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

WhatsApp Group Join Now

Spread the love

Leave a Reply