ವಿಕಲ ಚೇತನ ಯುವತಿ ಮೇಲೆ ಅತ್ಯಾಚಾರ ನಡೆದಿದ್ದು, ಅತ್ಯಾಚಾರದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಲಾಗಿದೆ. ಅಲ್ಲದೇ ಗರ್ಭಿಣಿ ಎಂದು ತಿಳಿದ ಬಳಿಕ, ಆಕೆಯನ್ನು ಮದುವೆಯಾಗುವುದಾಗಿ ಯುವಕ ಸುಳ್ಳು ಹೇಳಿದ್ದಾನೆಂದು ಆರೋಪಿಸಲಾಗಿದೆ.
ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, 26 ವರ್ಷದ ಯುವತಿ 27 ವರ್ಷದ ಪೃಥ್ವಿ ಎಂಬ ಪಕ್ಕದ ಮನೆಯ ಯುವಕನ ವಿರುದ್ಧ ದೂರು ನೀಡಿದ್ದಾಳೆ.
ಈ ಯುವತಿ ಮನೆಯಲ್ಲಿ ಒಬ್ಬಳೇ ಇರುವಾಗ ಬಂದಿದ್ದ ಪೃಥ್ವಿ, ಅತ್ಯಾಚಾರ ಮಾಡಿ, ಯಾರಿಗೂ ಹೇಳಬೇಡ. ಯಾರಿಗಾದರೂ ವಿಷಯ ತಿಳಿದರೆ, ನಿಮ್ಮ ಅಪ್ಪ-ಅಮ್ಮನನ್ನು ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆನ್ನಲಾಗಿದೆ.
ಘಟನೆ ನಡೆದು ತಿಂಗಳು ಕಳೆದಿದ್ದು, ಯುವತಿಗೆ ವಾಂತಿ ಶುರುವಾಾದ ಹಿನ್ನೆಲೆ ಆಸ್ಪತ್ರೆಗೆ ಕರೆದ”ಯ್ಯಲಾಗಿದೆ. ಆಗ ವೈದ್ಯರು ಆಕೆಗೆ ಸ್ಕ್ಯಾನಿಂಗ್ ಮಾಡಿಸಿ ಎಂದು ಸಲಹೆ ನೀಡಿದ್ದಾರೆ. ಸ್ಕ್ಯಾನಿಂಗ್ ಮಾಡಿದಾಗ, ಆಕೆ ಗರ್ಭಿಣಿ ಎಂದು ತಿಳಿದಿದೆ. ಬಳಿಕ ಇಬ್ಬರಿಗೂ ಮದುವೆ ಮಾಡಿಸಬೇಕು ಎಂದು ಎರಡೂ ಫ್ಯಾಮಿಲಿ ಮಾತನಾಡಿದೆ.
ಆದರೆ ಮದುವೆಯಾಗುವುದಾಗಿ ನಂಬಿಸಿ, ಇದೀಗ ಯುವಕ ಮದುವೆಯಾಗುವುದಿಲ್ಲವೆಂದು ಮೋಸ ಮಾಡಿದ್ದಾನೆಂದು ಸಂತ್ರಸ್ತ ಯುವತಿ ದೂರು ನೀಡಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಕಲಚೇತನ ಯುವತಿ ಮೇಲೆ ಅತ್ಯಾ*ಚಾರ : ಮದುವೆಯಾಗುವುದಾಗಿ ನಂಬಿಸಿ ಮೋಸ..!
WhatsApp Group
Join Now