ಬೆಂಗಳೂರಿನಲ್ಲಿ (Bengaluru) ಗ್ಯಾಸ್ ಗೀಸರ್ (Gas Geyser) ಅವಘಡಕ್ಕೆ ಮತ್ತೊಂದು ಬಲಿಯಾಗಿದೆ. ಸ್ನಾನ ಮಾಡುವ ವೇಳೆ ವಿಷಕಾರಿ ಅನಿಲ ಬಿಡುಗಡೆಯಾದ ಪರಿಣಾಮ 24 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದೆ. ಮೃತ ಯುವತಿಯನ್ನು 24 ವರ್ಷದ ಭೂಮಿಕಾ ಎಂದು ಗುರುತಿಸಲಾಗಿದೆ.
ಕಳೆದ 15 ದಿನಗಳಿಂದ ಭೂಮಿಕಾ ಮತ್ತು ಕೃಷ್ಣಮೂರ್ತಿ ಎಂಬುವವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅದರಂತೆ ಇದೀಗ ಸ್ನಾನಕ್ಕೆ ಹೋದಾಗ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಈ ಅವಘಡ ಸಂಭವಿಸಿದೆ.
ಕೃಷ್ಣಮೂರ್ತಿ ನವೆಂಬರ್ 29 ರಂದು ಬೆಳಿಗ್ಗೆ ಕಚೇರಿಗೆ ಹೋಗಿದ್ದರು. ಈ ನಡುವೆ ಪತ್ನಿ ಭೂಮಿಕಾ ಸ್ನಾನದ ಗೃಹಕ್ಕೆ ಹೋದಾಗ, ಗ್ಯಾಸ್ ಗೀಸರ್ ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆ ಉಂಟಾಗಿ ವಿಷಕಾರಿ ಹೊಗೆ ಬಂದಿದೆ.
ಈ ವಿಷಕಾರಿ ಹೊಗೆಯನ್ನು ಉಸಿರಾಡಿದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
WhatsApp Group
Join Now