ಅರಣ್ಯ ಅಧಿಕಾರಿ ಮೇಲೆ ಲೋಕಾಯುಕ್ತದ ದಾಳಿ: 26 ಕೋಟಿ ಮೌಲ್ಯದ ಆಸ್ತಿ ಪತ್ತೆ!

Spread the love

ಶಿವಮೊಗ್ಗ: ಅರಣ್ಯ ಇಲಾಖೆ ಸಹಾಯಕ ಆಯುಕ್ತ ತೇಜಸ್ ಕುಮಾರ್ ಮೇಲೆ ಲೋಕಾಯುಕ್ತವು ದಾಳಿ ನಡೆಸಿದ್ದು, ಚಿತ್ರದುರ್ಗದ ರೆಸಾರ್ಟ್ ಸೇರಿದಂತೆ ಒಟ್ಟು ಐದು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ.

ದಾಳಿ ವೇಳೆ ಬರೋಬ್ಬರಿ 26.55 ಕೋಟಿ ರೂಪಾಯಿಯ ಮೌಲ್ಯದ ಆಸ್ತಿ ಪತ್ತೆ ಆಗಿದ್ದು, ಅದರಲ್ಲಿ 4 ನಿವೇಶನಗಳು, 8 ಮನೆ, 16 ಎಕರೆ ಜಮೀನಿನ ದಾಖಲೆಗಳು ಸೇರಿವೆ.

ಜೊತೆಗೆ 92 ಲಕ್ಷ ಮೌಲ್ಯದ ವಾಹನಗಳು ಮತ್ತು 50 ಸಾವಿರ ನಗದು ಕೂಡ ಪತ್ತೆ ಮಾಡಲಾಗಿದೆ.

ತೇಜಸ್ ಕುಮಾರ್ ವೃತ್ತಿಯಲ್ಲಿ ಸದ್ಯ ವರ್ಗಾವಣೆ ಆದೇಶದಲ್ಲಿದ್ದು, ಶಿವಮೊಗ್ಗ ಅರಣ್ಯ ಇಲಾಖೆಯಲ್ಲಿ ಮ್ಯಾನೇಜರ್ ಆಗಿ ಹುದ್ದೆ ಹೊಂದಿದ್ದಾರೆ.

WhatsApp Group Join Now

Spread the love

Leave a Reply