ಅವನೇ ಬೇಕು ಅಂತ ಪ್ರೀತಿಸಿ ಮದುವೆಯಾದವಳು ಇಂದು ಆತ್ಮಹತ್ಯೆ – ಆಸ್ಪತ್ರೆಯಲ್ಲಿ ಸಾವು-ಬದುಕಿನ ಜೊತೆ ಗಂಡನ ಹೋರಾಟ

Spread the love

ಅವನೇ ಬೇಕು ಅಂತ ಪ್ರೀತಿಸಿ ಮದುವೆಯಾದವಳು ಇಂದು ಹೆಣವಾಗಿ ಮಸಣ ಸೇರಿದ್ದಾಳೆ. ಇತ್ತ ಏನಾದ್ರೂ ಒಟ್ಟಿಗೆ ಬದುಕೋಣ ಅಂತ ಯುವತಿಗೆ ತಾಳಿ ಕಟ್ಟಿದವನು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿದ್ದಾನೆ. ಈ ಜೋಡಿ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದವರು ಯಾರು.?

ಗಂಡ-ಹೆಂಡ್ತಿ ನಡುವಿನ ಜಗಳಕ್ಕೆ ಕೂಸು ಬಡವಾಯ್ತು.

ಪತಿ-ಪತ್ನಿ ಕಲಹಕ್ಕೆ ಬಲಿಯಾಯ್ತ ಬದುಕು!?

ಸಂಸಾರದಲ್ಲಿ ಜಗಳ ಬರುತ್ತೆ, ಹೋಗುತ್ತೆ ಅಂತಾರೆ. ಆದ್ರೆ ಈ ಕಲಹ ಸಾವಿನಲ್ಲಿ ಅಂತ್ಯ ಕಾಣೋದೆ ದುರಂತ. ಕಳೆದ ಐದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದ ಹಾಸನದ ರಂಜಿತಾ ಹಾಗೂ ಚೇತನ್ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು, ಕೌಟುಂಬಿಕ ಕಲಹಕ್ಕೆ ಗೃಹಿಣಿ ರಂಜಿತಾ ಬಲಿಯಾಗಿದ್ದಾಳೆ.

ಪತಿಯಿಂದ ಆತ್ಮಹತ್ಯೆ ಯತ್ನ

ಹಾಸನ ತಾಲೂಕಿನ ಅದ್ದಿಹಳ್ಳಿ ಗ್ರಾಮದ ನಿವಾಸಿಯಾಗಿರುವ ಪತಿ ಚೇತನ್ ಹಾಗೂ ರಂಜಿತಾ ದಂಪತಿಗೆ ಒಂದು ಮಗು ಕೂಡ ಇದೆ. ಇಬ್ಬರ ನಡುವಿನ ಜಗಳ ಇದೀಗ ಜೀವವನ್ನೇ ಬಲಿಪಡೆಯೋ ಮಟ್ಟಿಗೆ ಬಂದು ನಿಂತಿದ್ದು ದುರಂತವಾಗಿದೆ. ದಂಪತಿ ಹೊಂದಾಣಿಕೆ‌ ಕೊರತೆಯಿಂದ ನಿತ್ಯ ಜಗಳ ಮಾಡಿಕೊಳ್ತಿದ್ದರಂತೆ. ಈ ಗಲಾಟೆಗೆ ಬೇಸತ್ತು ರಂಜಿತ್ ಕಳೆದ ಎರಡು ದಿನಗಳ ಹಿಂದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಪತಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರೋ ವೇಳೆ ಪತ್ನಿ ರಂಜಿತಾ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಗಂಡನನ್ನ ನೋಡಿಕೊಂಡು ಮನೆಗೆ ಮರಳಿದ್ದ ರಂಜಿತಾ, ಗಂಡನ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗ್ತಿದೆ.

ವರದಕ್ಷಿಣೆ ಕಿರುಕುಳದ ಆರೋಪ

ಮಗಳನ್ನು ಕಳೆದುಕೊಂಡ ರಂಜಿತಾ ಕುಟುಂಬಸ್ಥರು, ಚೇತನ್ ಹಾಗೂ ಕುಟುಂಬಸ್ಥರ ವಿರುದ್ದ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಮಗಳ ಸಾವಿಗೆ ಆತನ ಪತಿ ಚೇತನ್ ಕಾರಣ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ದೂರು ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

WhatsApp Group Join Now

Spread the love

Leave a Reply