ಮಹಾರಾಷ್ಟ್ರದ ಬಾರಾಮತಿ ಬಳಿ ಖಾಸಗಿ ವಿಮಾನ ಅಪಘಾತದಲ್ಲಿ ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ (Ajit Pawar Plane Crash) ಅಜಿತ್ ಪವಾರ್ ನಿಧನರಾಗಿದ್ದಾರೆ. ಲ್ಯಾಂಡಿಂಗ್ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ.
ಈ ವಿಮಾನ ದುರಂತ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಒಂದೆಡೆ ಅಹಮದಾಬಾದ್ ಭೀಕರ ವಿಮಾನ ದುರಂತ ಸಂಭವಿಸಿ ವರ್ಷವಾಗುವ ಮೊದಲೇ ಇಂತಹ ಮತ್ತೊಂದು ದುರ್ಘಟನೆ ಸಂಭವಿಸಿರೋದು ಭಯ ಹುಟ್ಟಿಸಿದರೆ, ಮತ್ತೊಂದೆಡೆ ವಿಮಾನ ಸುರಕ್ಷತೆಗಳ ಬಗ್ಗೆ ದೇಶದ ಜನರಲ್ಲಿ ಅತಂಕ ಮೂಡುವಂತೆ ಮಾಡಿದೆ.
ಇದೆಲ್ಲದರ ಮಧ್ಯೆ ಬಾರಾಮತಿ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿದ ಸುದ್ದಿ ಹರಿದಾಡುತ್ತಿದ್ದಂತೆ ಕರ್ನಾಟಕದ ಜನರಲ್ಲಿ ಇತ್ತೀಚಿನ ಸುದ್ದಿಯೊಂದು ಮತ್ತೆ ನೆನಪಿಗೆ ಬರುವಂತೆ ಮಾಡಿದೆ. ಅದು ಮತ್ಯಾವುದೂ ಅಲ್ಲ, ಇತ್ತೀಚೆಗೆ ಕೋಡಿಶ್ರೀ ಮಠದ ಶಿವಾನಂದ ಶಿವಯೋಗೆ ರಾಜೇಂದ್ರ ಸ್ವಾಮೀಜಿ ನುಡಿದಿದ್ದ ಭವಿಷ್ಯ. ಹೌದು.. ಕೋಡಿಶ್ರೀ ಸ್ವಾಮೀಜಿ ನುಡಿದ ಭವಿಷ್ಯ ತಿಂಗಳೊಳಗೆ ನಿಜವಾಯ್ತೇನೋ ಅನ್ನುವ ಆತಂಕ ಜನರಲ್ಲಿ ಮೂಡಿದೆ.
ಕೋಡಿಶ್ರೀ ಹೇಳಿದ್ದೇನು?
ಈ ಹೊಸ ವರ್ಷದ ಆರಂಭದಲ್ಲಿ ರಾಜ್ಯ ರಾಜಕೀಯದ ಬಗ್ಗೆ (Kodi Shree Prediction) ಕೋಡಿ ಮಠದ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದರು. ಬೀದರ್ನಲ್ಲಿ ಮಾತಾಡಿದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಸದ್ಯದ ರಾಜ್ಯ ರಾಜಕೀಯದ ಪರಿಸ್ಥಿತಿ ನೋಡಿದ್ರೆ, ಬದಲಾವಣೆ ಕಷ್ಟ, ಕಷ್ಟ ಎಂದಿದ್ದರು. ಬದಲಾವಣೆ ಸಾಧ್ಯವೇ ಇಲ್ಲ ಎನ್ನುವಂತೆ ಕಟ್ಟುನಿಟ್ಟಿನ ಭವಿಷ್ಯ ನುಡಿದಿದ್ದರು. ಆದರೆ ಇದಕ್ಕೂ ಹೆಚ್ಚು ಭಯ ಸೃಷ್ಟಿಸಿದ್ದು ಮತ್ತೊಂದು ಭವಿಷ್ಯ.
ಹೌದು ಅದೇ ದಿನ ಮಾತನಾಡಿದ್ದ ಕೋಡಿಶ್ರೀಗಳು ಮತ್ತೊಂದು ಭಯಾನಕ ಭವಿಷ್ಯ ಹೇಳಿದ್ದರು. ಜಗತ್ತಿನಲ್ಲಿ ಸತ್ತಿರುವ ಈ ಕೋಟ್ಯಂತರ ಜನರ ಆತ್ಮಗಳಿಗೆ ಸರಿಯಾದ ಸಂಸ್ಕಾರವಾಗಿಲ್ಲ. ಈ ಅತೃಪ್ತ ಆತ್ಮಗಳು ಜಗತ್ತಿನಾದ್ಯಂತ ಸಂಚರಿಸುತ್ತಿರುವುದರಿಂದ ಮನುಕುಲಕ್ಕೆ ದೊಡ್ಡ ಅಪಾಯವಿದೆ. ಆದ್ದರಿಂದ 2025ಕ್ಕಿಂತಲೂ 2026ರಲ್ಲಿ ಜಗತ್ತಿಗೆ ಹತ್ತು ಪಟ್ಟು ಹೆಚ್ಚಿನ ಅಪಾಯವಿದೆ ಎಂದು ಹೇಳಿದ್ದರು. ಮುಖ್ಯವಾಗಿ, ಈ ದೇಶಕ್ಕೆ ಅಪಾಯ ಇದೆ, ಸಾವು-ನೋವಾಗುವ ಲಕ್ಷಣ ಇದೆ. ಇಬ್ಬರು ಮಹಾ ವ್ಯಕ್ತಿಗಳು ಸಾವನ್ನಪ್ಪುವ ಲಕ್ಷಣಗಳು ಕಾಣ್ತಿದೆ ಎಂದು ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದರು.
ಸದ್ಯ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದ ಭವಿಷ್ಯ ನಿಜವಾಯ್ತೇನೋ ಅನ್ನುವ ಅನುಮಾನ ಸೃಷ್ಟಿಸಿದ್ದು, ಈ ವರ್ಷ ಇಬ್ಬರು ಮಹಾ ವ್ಯಕ್ತಿಗಳು ಸಾವನ್ನಪ್ಪುವ ಲಕ್ಷಣಗಳು ಕಾಣ್ತಿದೆ ಎಂದು ಹೇಳಿದ ಎರಡೇ ವಾರದಲ್ಲಿ ಅಂದರೆ ತಿಂಗಳೊಳಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ಹೀಗಾಗಿ ಇಬ್ಬರು ಮಹಾ ವ್ಯಕ್ತಿಗಳ ಸಾವಿನ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾದ ಬಗ್ಗೆ ಭವಿಷ್ಯದಲ್ಲಿ ನಂಬಿಕೆ ಇರುವ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಮೊದಲ ತಿಂಗಳಲ್ಲೇ ನಿಜವಾಯ್ತಾ ಕೋಡಿಶ್ರೀ ಭವಿಷ್ಯ? ಒಬ್ಬ ‘ಮಹಾ’ ನಾಯಕ ಸಾವು
WhatsApp Group
Join Now