ಮೇಷ :-
ಇಂದು ಹೊಂದಿಕೆಯಾಗುವಂತಹ ದೃಷ್ಟಿಯನ್ನು ಹೊಂದುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಇಂದು ನೀವು ಅತ್ಯಂತ ಹೊಣೆಯಿಂದ ಕಾರ್ಯನಿರ್ವಹಿಸಬೇಕಾಗಬಹುದು ಮತ್ತು ನಿಮ್ಮ ಕುಟುಂಬದ ಅಗತ್ಯತೆ ಹಾಗೂ ಬೇಡಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಇದು ನಿಮಗೆ ಶ್ರಮವನ್ನು ನೀಡಬಹುದು.
ಆದರೂ ನಿಮ್ಮ ಮಾತು ಹಾಗೂ ಸಿಡುಕಿನ ಮೇಲೆ ನಿಯಂತ್ರಣವಿರಲಿ ಇಲ್ಲವಾದಲ್ಲಿ ನೀವು ನಿಮ್ಮ ಆಪ್ತರ ಮನಸ್ಸನ್ನು ನೋಯಿಸುವ ಸಾಧ್ಯತೆಯಿದೆ. ಇಂತಹ ಚಟುವಟಿಕೆಗಳಿಗೆ ಆಸ್ಪದ ನೀಡಬೇಡಿ. ವಾಗ್ವಾದಗಳು ನಿಮ್ಮ ಮನಸ್ಸನ್ನು ಹಾಳಮಾಡಬಹುದು ಮತ್ತು ನಿಮ್ಮ ದೈನಂದಿನ ಆಹಾರಕ್ಕೆ ತೊಡಕುಂಟಾಗಬಹುದು. ಅನಗತ್ಯ ಖರ್ಚುವೆಚ್ಚಗಳನ್ನು ತಪ್ಪಿಸಿ. ನಾನಾರೀತಿಯ ಖರ್ಚುವೆಚ್ಚಗಳು ನಿಮಗೆ ಹೆಚ್ಚು ತೊಂದರೆಯನ್ನು ನೀಡಬಹುದು.
ವೃಷಭ :-
ಇಂದು ನಿಮಗೆ ಹಣದ ಮಳೆಗೆರೆಯಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಲಕ್ಷ್ಮೀದೇವಿಯು ನಿಮ್ಮ ಬಗ್ಗೆ ಅತೀವ ಸಂತೋಷವನ್ನು ಹೊಂದಿರುವಂತೆ ಅನಿಸುತ್ತದೆ. ಜೊತೆಗೆ ಆರ್ಥಿಕ ಲಾಭ, ಹಣಕಾಸು ಮೂಲಗಳ ವೃದ್ಧಿಯಾಗಲಿದೆ. ನಿಮ್ಮ ಮನಸ್ಸು ಸಂತಸದಿಂದ ಕೂಡಿರುತ್ತದೆ. ಇದು ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಲು ಸಹಾಯಮಾಡುತ್ತದೆ. ನಿಮ್ಮಲ್ಲಿ ಚೈತನ್ಯವನ್ನು ತುಂಬಲು ಮನರಂಜನೆ, ವಿನೋದಗಳಿಗೆ ಇದು ಉತ್ತಮ ಸಮಯ. ಈ ಚಟುವಟಿಕೆಗಳಿಗಾಗಿ ನಿಮ್ಮ ಬ್ಯಾಂಕ್ ಖಜಾನೆಯ ಸ್ವಲ್ಪ ಹಣ ಹೋದರೂ ಅದರ ಬಗ್ಗೆ ಚಿಂತಿಸಬೇಡಿ. ಮನೆಯಲ್ಲಿನ ಸಾಮಾನ್ಯ ಮತ್ತು ಸಂತೋಷಕರ ಸಂವಾದವು ಈ ದಿನವನ್ನು ಶಾಂತಿಯಿಂದ ಕಳೆಯಲು ನಿಮಗೆ ಅನುವು ಮಾಡಿಕೊಡುತ್ತದೆ.
ಮಿಥುನ :-
ಇಂದು ನೀವು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಮುಂಗೋಪ ಮತ್ತು ಒರಟು ಮಾತುಗಳು ಸಂಘರ್ಷವನ್ನುಂಟುಮಾಡಬಹುದು ಮತ್ತು ಮನಸ್ತಾಪಕ್ಕೆ ಕಾರಣವಾಗಬಹುದು. ಇದು ಅಹಿತಕರ ವಾತಾವರಣವನ್ನು ಸೃಷ್ಟಿಸಬಹುದು. ಧ್ಯಾನಮಾಡಿ. ನಿಮ್ಮ ಮನಸ್ಸಿಗೆ ಸಮಾಧಾನವಾಗುತ್ತದೆ. ಇಂದು ಉತ್ತಮವಾಗಿರದ ವಿಶೇಷವಾಗಿ ಕಣ್ಣಿನ ವ್ಯಾಧಿಯನ್ನು ಹೊಂದಿದವರ ಆರೋಗ್ಯ ವೃದ್ಧಿಗೂ ಇದು ಸಹಕಾರಿಯಾಗಲಿದೆ. ಇಂದು ನೀವು ಪಡೆದುಕೊಳ್ಳುವ ಆರ್ಥಿಕ ಲಾಭಕ್ಕಿಂತ ಹೆಚ್ಚಿನ ಖರ್ಚು ಉಂಟಾಗುವ ಸಾಧ್ಯತೆಯಿದ್ದಲ್ಲಿ, ನಿಮ್ಮ ಖರ್ಚಿನ ಮೇಲೆ ನಿಗಾವಿರಿಸಿ. ಇಂದು ಅಪಘಾತದ ಸಂಭಾವ್ಯತೆಯಿದೆ. ಜಾಗರೂಕತೆಯಿಂದ ವಾಹನ ಚಲಾಯಿಸಿ. ಪ್ರಾರ್ಥನೆ ಮತ್ತು ಆಧ್ಯಾತ್ಮವು ನೆಮ್ಮದಿಯನ್ನು ತರುತ್ತದೆ.
ಕರ್ಕಾಟಕ :-
ನಿಮ್ಮ ಧನಾತ್ಮಕ ಸಾಮರ್ಥ್ಯವು ಸದ್ಯದಲ್ಲಿಯೇ ಫಲಪ್ರದವಾಗಿ ಕಾರ್ಯರೂಪಕ್ಕೆ ಬರಲಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಸ್ನೇಹಿತರನ್ನು ಭೇಟಿ ಮಾಡಿ ಮಜಾ ಅನುಭವಿಸುವಿರಿ. ಏಕಾಂಗಿಕಗಳು ಪ್ರಣಯ ಸಂಬಂಧಿತ ಸಂಪರ್ಕಗಳ ಸಾಧ್ಯತೆಯಲ್ಲಿರುವುದರಿಂದ ಸದ್ಯದಲ್ಲಿಯೇ ಸಂಗಾತಿಯನ್ನು ಪಡೆಯಲಿದ್ದಾರೆ. ಮತ್ತು ನೀವು ಶೀಘ್ರದಲ್ಲಿಯೇ ಬಾಳಸಂಗಾತಿಯನ್ನೂ ಕಂಡುಕೊಳ್ಳಬಹುದು. ಅನಿರೀಕ್ಷಿತ ಧನಲಾಭ ಮತ್ತು ಆದಾಯ ಮೂಲದ ವೃದ್ಧಿಯು ನಿಮ್ಮ ದಿನವನ್ನು ಇನ್ನಷ್ಟು ಅದೃಷ್ಟದಾಯಕವಾಗಿಸಲಿದೆ. ನಿಮಗಿಷ್ಟವಾದ ಪ್ರವಾಸಿ ಸ್ಥಳಗಳಿಗೆ ದೀರ್ಘ ಪ್ರಯಾಣ ಬೆಳೆಸುವ ಯೋಜನೆ ರೂಪಿಸಬಹುದು ಮತ್ತು ನಿಮ್ಮ ದಿನವನ್ನು ಗಮನಾರ್ಹವಾಗಿ ಪರಿಪೂರ್ಣಗೊಳಿಸುತ್ತದೆ.
ಸಿಂಹ :-
ನಿಮ್ಮ ಧನಾತ್ಮಕ ಸಾಮರ್ಥ್ಯವು ನಿಮ್ಮ ಆಲೋಚನೆ, ದೃಷ್ಟಿ ಮತ್ತು ದೃಢತೆಯಲ್ಲಿ ಪ್ರತಿಬಿಂಬಿಸುತ್ತದೆ. ನಿಮ್ಮ ಮೇಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳು ನಿಮ್ಮ ಗುಣಮಟ್ಟದ ಕಾರ್ಯ ಹಾಗೂ ಅತ್ಯುತ್ತಮ ಆಲೋಚನೆಗಳ ಬಗ್ಗೆ ತೀವ್ರವಾಗಿ ಪ್ರಭಾವಿತರಾಗುತ್ತಾರೆ ಮತ್ತು ಇಂದು ನೀವು ಸಾಮಾಜಿಕ ಮನ್ನಣೆ ಗಳಿಸುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನೀವು ನಿಮ್ಮ ತಂದೆಯೊಂದಿಗೆ ಉತ್ತಮ ಸಮಾನತೆಯನ್ನು ಆನಂದಿಸಬಹುದು ಮತ್ತು ಅವರಿಂದ ಉಡುಗೊರೆಗಳನ್ನೂ ಪಡೆಯಬಹುದು. ಆಸ್ತಿ ಅಥವಾ ಭೂ ಸಂಬಂಧಿತ ವ್ಯವಹಾರಗಳನ್ನು ಇತ್ಯರ್ಥಗೊಳಿಸಲು ಇಂದು ಸೂಕ್ತ ದಿನ. ಸಂಕ್ಷಿಪ್ತವಾಗಿ, ಅದ್ಭುತ ದಿನವು ನಿಮಗಾಗಿ ಕಾದಿದೆ.
ಕನ್ಯಾ :-
ಇಂದು ನೀವು ನಿರುತ್ಸಾಹ ಮತ್ತು ಉದಾಸೀನತೆಯಿಂದ ಕೂಡಿರಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನಿಮ್ಮ ದಿನವು ಸಂಪೂರ್ಣವಾಗಿ ಪ್ರತಿಕೂಲ ಸ್ಥಿತಿಯಿಂದ ಕೂಡಿರುತ್ತದೆ ಮತ್ತು ನೀವು ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಚಿಂತಾಕ್ರಾಂತರಾಗಬಹುದು. ಇದು ನಿಮ್ನನ್ನು ನಿರ್ಭಾವುಕರನ್ನಾಗಿಸುತ್ತದೆ. ತುಂಬಾ ವಿರೋಧಿಗಳು, ಒತ್ತಡ, ಉತ್ಪಾದಕತೆಯ ಕೊರತೆ ನಿಮ್ಮನ್ನು ಬಾಧಿಸಬಹುದು. ಕಾರ್ಯಕ್ಷೇತ್ರದಲ್ಲಿನ ನಿಮ್ಮ ಮೇಲಾಧಿಕಾರಿಗಳ ಮತ್ತು ಸಹೋದ್ಯೋಗಿಗಳ ಟೀಕೆಗಳಿಗೆ ಗಮನಹರಿಸಬೇಡಿ. ಯಾಕೆಂದರೆ ಇದು ಸಮಯದೊಂದಿಗೇ ಹೋಗಿಬಿಡುತ್ತದೆ. ನಿಮ್ಮ ಸ್ಪರ್ಧಿಗಳ ಎದುರು ಗೆಲುವು ಸಾಧಿಸಬೇಕಾಗಿದ್ದಲ್ಲಿ, ಅವರೊಂದಿಗಿನ ಮುಂದಿನ ಹೆಜ್ಜೆಯ ವೇಳೆ ಎಚ್ಚರಿಕೆ ಹಾಗೂ ಜಾಗರೂಕತೆಯಿಂದಿರಿ.
ತುಲಾ :-
ಚಿಕಿತ್ಸೆಗಿಂತ ನಿರೋಧ ಲೇಸು.ಇದನ್ನು ನೆನಪಿನಲ್ಲಿಡಿ ಮತ್ತು ಕಠು ಮಾತುಗಳಿಂದ ಉಂಟಾದ ಮನಸ್ಸಿನ ನೋವಿಗೆ ಯಾವುದೇ ಮದ್ದಿಲ್ಲ. ಎಚ್ಚರದಿಂದಿರಿ. ಮುಂಗೋಪಿತನ ಮತ್ತು ಅಸಮಾಧಾನವು ನಿಮ್ಮ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂದು ಗಣೇಶ ಸಲಹೆ ನೀಡುತ್ತಾರೆ. ಬದಲಾಗಿ, ಧ್ಯಾನ, ಆಧ್ಯಾತ್ಮವು ನಿಮಗೆ ಅಗತ್ಯ ನೆಮ್ಮದಿಯನ್ನು ನೀಡುತ್ತದೆ. ಅನೈತಿಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ. ಇದು ನಿಮ್ಮ ತೊಂದರೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಗಮನವಿಡಿ, ಹೊಸ ಸಂಬಂಧಗಳ ನಿರ್ಮಾಣವು ಶುಭಕರವಾದುದಲ್ಲ. ನೀವು ಹಣಕಾಸು ಬಿಕ್ಕಟ್ಟನ್ನು ಎದುರಿಸುವ ಸಂದರ್ಭ ಬರುವ ಕಾರಣ ಖರ್ಚುವೆಚ್ಚಗಳ ವಿವರಗಳನ್ನು ಪಾಲಿಸಿ.
ವೃಶ್ಚಿಕ :-
ಈ ದಿನವು ಖುಷಿ, ನಲಿವು, ಹಾಸ್ಯ ಮತ್ತು ವಿನೋದದಿಂದ ಕೂಡಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಹೊರಗಡೆ ತಿರುಗಾಟಕ್ಕೆ ತೆರಳುವ ಸಾಧ್ಯತೆಗಳು ದಟ್ಟವಾಗಿವೆ. ವೈಭವದ ದಿನಗಳಿಗೆ ನೀವು ಎದುರುನೋಡಬೇಕಾಗಿದೆ, ಕಾರು ಪ್ರಯಾಣ, ವಿಶೇಷ ಭೋಜನ, ಉತ್ತಮ ಲಾಭ ಇವೆಲ್ಲವನ್ನೂ ನೀವು ಅನುಭವಿಸುತ್ತೀರಿ. ಜನಪ್ರಿಯತೆ ಮತ್ತು ಘನತೆಯು ವರ್ಧಿಸಲಿದೆ.
ಧನು :-
ಉಜ್ವಲ ಎಂಬುದಾಗಿ ಗಣೇಶ ಹೇಳುತ್ತಾರೆ. ಆರೋಗ್ಯ, ಸಂಪತ್ತು, ಸಂತೋಷ ಇವೆಲ್ಲವೂ ಅದೃಷ್ಟ ಧನುರಾಶಿಯವರಿಗೆ ಉತ್ತಮ ರೀತಿಯಲ್ಲೇ ಇರುತ್ತದೆ. ಮನೆಯ ವಾತಾವರಣದಲ್ಲಿನ ಸಾಮರಸ್ಯ ಮತ್ತು ಏಕತೆಯು ದಿನವಿಡೀ ನಿಮ್ಮನ್ನು ಕ್ರಿಯಾಶೀಲ ಹಾಗೂ ಚೈತನ್ಯದಿಂದಿರಿಸುತ್ತದೆ.ಸಹಕಾರ ಮನೋಭಾವದ ಸಹೋದ್ಯೋಗಿಗಳು ಮತ್ತು ಫಲಭರಿತ ಫಲಿತಾಂಶವು ವೃತ್ತಿಕ್ಷೇತ್ರದಲ್ಲಿ ನಿಮ್ಮನ್ನು ಖುಷಿಯಲ್ಲಿರಿಸುತ್ತದೆ. ಹಣಕಾಸು ಲಾಭಗಳು ಕೇಕ್ ಮೇಲಿನ ಐಸ್ನಂತೆ ಕಾರ್ಯನಿರ್ವಹಿಸುತ್ತದೆ. ಕೊನೆಯದಾಗಿ, ಪ್ರೀತಿಯ ನಗುವನ್ನು ಹೊಂದಿ ಮತ್ತು ಈ ಅಪರೂಪದ ದಿನವನ್ನು ಆನಂದಿಸಿ.
ಮಕರ :-
ಈ ದಿನದ ಹೆಚ್ಚಿನ ಭಾಗವು ಚಿಂತೆಗಳಿಂದ ತುಂಬಿರುತ್ತದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನಿಮ್ಮ ಮಕ್ಕಳ ಮತ್ತು ಹೆತ್ತವರ ಆರೋಗ್ಯ ಮತ್ತು ಅವರೊಂದಿಗಿನ ಭಿನ್ನಾಭಿಪ್ರಾಯಗಳು ನಿಮ್ಮ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಲಿವೆ. ಇದು ಗೊಂದಲ ಹಾಗೂ ನಿರ್ಧಾರ ಕೈಗೊಳ್ಳುವಿಕೆಯ ಸಾಮರ್ಥ್ಯದ ಕೊರತೆಯನ್ನು ಉಂಟುಮಾಡಬಹುದು. ಕಾರ್ಯಕ್ಷೇತ್ರದಲ್ಲಿ ನಿಮ್ಮ ಮೇಲಾಧಿಕಾರಿಗಳನ್ನು ಪ್ರಭಾವಿತಗೊಳಿಸಲು ನೀವು ಹೆಚ್ಚು ಶ್ರಮ ಪಡಬೇಕಾದೀತು. ನಿಮ್ಮ ವರಿಷ್ಠರು ಹಾಗೂ ಪ್ರತಿಸ್ಪರ್ಧಿಗಳೊಂದಿಗಿನ ವಾಗ್ವಾದವನ್ನು ತಪ್ಪಿಸಿ. ವಿಶ್ರಾಂತರಾಗಿ, ಸಮಯವು ಸಾಗಲಿ.
ಕುಂಭ :-
ಇಂದು ನೀವು ಭಾವುಕ ಹಾಗೂ ಸೂಕ್ಷ್ಮತೆಯಿಂದ ಕೂಡಿರುವ ದಿನವಾಗಲಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಶೈಕ್ಷಣಿಕ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸುತ್ತಾರೆ. ಎಲ್ಲಾ ಸುಂದರ ಮಹಿಳೆಯರು ತಮ್ಮ ಚೀಲವನ್ನು ಪ್ರದರ್ಶಿಸಲು, ತಮಗಿಷ್ಟವಾಗ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮತ್ತು ತಮ್ಮನ್ನು ತಾವೇ ಸುಂದರಗೊಳಿಸುವಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಆದರೆ, ಅದು ಮಿತಿಮೀರದಂತೆ ನೋಡಿಕೊಳ್ಳಿ. ಮತ್ತು ನಿಮ್ಮ ಹಣವನ್ನು ಖಾಲಿ ಮಾಡದಂತೆ ಎಚ್ಚರವಹಿಸಿ. ಭೂ ಅಥವಾ ಆಸ್ತಿಗೆ ಸಂಬಂಧಿಸಿದ ನಿಯಮ ಪಾಲನೆಯಲ್ಲಿ ತೊಡಗುವುದನ್ನು ತಪ್ಪಿಸಿ ಎಂಬುದಾಗಿ ಗಣೇಶ ಹೇಳುತ್ತಾರೆ. ಪ್ರೌಢತೆಯನ್ನು ಹೊಂದಿದ್ದು, ಹಿಂದಿನಿಂದ ಬಾಲಿಶವಾಗಿ ಮಾತನಾಡುವವರಿಗಾಗಿ ಈ ದಿನ.
ಮೀನ :-
ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ದಿನವನ್ನು ಬಳಸಿಕೊಳ್ಳಿ. ಸಂದರ್ಭಗಳು ನಿಮ್ಮ ಹಾದಿಯಲ್ಲೇ ಸಾಗುತ್ತವೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ದಿನಪೂರ್ತಿ ನೀವು ಹೆಚ್ಚು ಸೃಜನಶೀಲ ಹಾಗೂ ವ್ಯವಹಾರ ಕುಶಲರಾಗಿರುವ ಸಾಧ್ಯತೆಯಿದೆ. ನಿಮ್ಮ ಆಲೋಚನೆಗಳು ಸ್ಪಷ್ಟ ಹಾಗೂ ಕೇಂದ್ರಬಿಂದುವಾಗಿರುವ ಭರವಸೆಯಿದೆ ಮತ್ತು ಇದು ನಿಮ್ಮ ಜವಾಬ್ಧಾರಿಗಳನ್ನು ಸುಲಭವಾಗಿ ನಿಭಾಯಿಸಲು ಸಹಕಾರಿಯಾಗಲಿದೆ. ನಿಮ್ಮ ಸ್ನೇಹಿತರೊಂದಿಗೆ ಖುಷಿಭರಿತ ವಿನೋದವಿಹಾರದಲ್ಲಿ ಭಾಗವಹಿಸುವಿರಿ. ಪ್ರೀತಿಯ ಅನುಬಂಧ ಮತ್ತು ತಿಳುವಳಿಕೆಯು ಇನ್ನೂ ವೃದ್ಧಿಯಾಗಲಿದೆ.
Horoscope Today : 28 ಜನವರಿ 2026 ಬುಧವಾರ ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now