ಇವತ್ತು ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದರು. ಮನರೇಗಾ ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದ್ದನ್ನು ಖಂಡಿಸಿ ಮಂಗಳವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ರಾಜಭವನ ಚಲೋ ನಡೆಯಿತು. ರಾಜಭವನ ಚಲೋದಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ರು.
ವೇದಿಕೆಯಲ್ಲಿ ಹಾಗೂ ವೇದಿಕೆ ಕೆಳಗಡೆ ಕೆಲವು ಗಮನ ಸೆಳೆಯುವ ಪ್ರಸಂಗವೂ ನಡೆಯಿತು. ಕಾಂಗ್ರೆಸ್ ನಾಯಕರು ಟವೆಲ್ ಸುತ್ತಿಕೊಂಡು ಗಮನ ಸೆಳೆದರೆ, ವೇದಿಕೆ ಕೆಳಗಡೆ ಡಿಸಿಎಂ ಡಿಕೆ ಶಿವಕುಮಾರ್ ಪರವಾಗಿ ಭರ್ಜರಿ ಘೋಷಣೆ ಕೇಳಿಬಂತು. ಫ್ರೀಡಂ ಪಾರ್ಕ್‌ನಲ್ಲಿ ಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ತಲೆಗೆ ಸಿಎಂ ಸಿದ್ದರಾಮಯ್ಯ ಅವರು ಟವೆಲ್‌ನಲ್ಲಿ ಪೇಟ ಸುತ್ತಿದ್ದಾರೆ.
ಡಿಕೆ ಶಿವಕುಮಾರ್ ಭಾಷಣಕ್ಕೆ ತೆರಳುವ ವೇಳೆ ಅವರ ತಲೆಗೆ ಸುತ್ತಿಕೊಂಡಿದ್ದ ಟವಲ್ ಸರಿಯಾಗಿ ಕಟ್ಟಿರಲಿಲ್ಲ. ಈ ವೇಳೆ ಸುರ್ಜಿವಾಲ ಡಿಕೆ ತಲೆಗೆ ತಾನೇ ಟವೆಲ್ ಕಟ್ಟಿದ ಪ್ರಸಂಗ ನಡೆಯಿತು.
ಸಿಎಂ ತಲೆಗೆ ಸುತ್ತುವುದಕ್ಕೆ ಹೋದಾಗ ಬೇಡ ಬೇಡ ಎಂದು ಸಿಎಂ ಸಿದ್ದರಾಮಯ್ಯ ತಾವೇ ಟವೆಲ್ ಸುತ್ತಿಕೊಂಡಿದ್ದಾರೆ. ಸುರ್ಜೆವಾಲಾ ಕಟ್ಟಿದ ಟವೆಲ್ ಲೂಸ್ ಆಗಿತ್ತು, ಆದರೆ ಸಿದ್ದರಾಮಯ್ಯ ತಾವೇ ಡಿಕೆ ಶಿವಕುಮಾರ್ ಅವರಿಗೆ ತಲೆಗೆ ಟವೆಲ್ ಕಟ್ಟಿದ್ದಾರೆ. ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಇದು ಅಧಿಕಾರದ ಹಸ್ತಾಂತರದ ಮುನ್ಸೂಚನೆನಾ? ಎಂದು ರಾಜ್ಯದ ಜನತೆ ಚರ್ಚಿಸುತ್ತಿದ್ದಾರೆ.
ಡಿಕೆ.. ಡಿಕೆ.. ಎಂದು ಘೋಷಣೆ
ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಬರುತ್ತಿದ್ದಂತೆ ಡಿಕೆ ಡಿಕೆ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರು ಡಿಕೆ ಎಂದು ಘೋಷಣೆ ಕೂಗಿದಕ್ಕೆ ಗರಂ ಆದರು. ಕಾರ್ಯಕರ್ತರನ್ನು ಕುಳಿತುಕೊಳ್ಳಿ ಎಂದು ಗದರಿದರು ಸುಮ್ಮನೆ ಕುಳಿತುಕೊಳ್ಳುವಂತೆ ಇದೆ ವೇಳೆ ಚಂದ್ರಶೇಖರ್ ಸಹ ತಾಕಿದು ಮಾಡಿದರು.
ಹೋರಾಟದಲ್ಲಿ ಗಮನ ಸೆಳೆದ ಹಾಡು
ರಾಜಭವನ ಚಲೋ ಹೋರಾಟದಲ್ಲಿ ಜಿ ರಾಮ್ ಜಿ ಜನರ ಪಾಲಿಗೆ ಮರಣ ಶಾಸನ ಎಂಬ ಹಾಡು ಗಮನ ಸೆಳೆಯಿತು. ಮನರೇಗಾ ಗ್ರಾಮೀಣ ಭಾಗದ ಜನರಿಗೆ ಭದ್ರ ಅಡಿಪಾಯ. ವಿಬಿ ಜಿ ರಾಮ್ ಜಿ ಜನರ ಪಾಲಿಗೆ ಮರಣ ಶಾಸನವಾಗಿದೆ ಎಂಬ ಹಾಡು ಗಮನ ಸೆಳೆಯಿತು.
ಪ್ರತಿಭಟನೆ ಬಳಿಕ ಕಾಂಗ್ರೆಸ್ ನಾಯಕರು ಲೋಕಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಈ ಹಿನ್ನೆಲೆ ಲೋಕ ಭವನದ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇನ್ನೂ 26 ಕಾಂಗ್ರೆಸ್ ನಾಯಕರಿಗೆ ರಾಜ್ಯಪಾಲರನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ. ಫ್ರೀಡಂ ಪಾರ್ಕ್ ನಿಂದ ಕಾಂಗ್ರೆಸ್ ನಾಯಕರನ್ನು ಕರೆದೊಯ್ಯಲು ಬಿಎಂಟಿಸಿ ಬಸ್ ಸಿದ್ಧವಾಗಿದೆ.
ಕಾಂಗ್ರೆಸ್ ಶಾಸಕರ ಅಮಾನತಿಗೆ ಒತ್ತಾಯಿಸಿ ದೋಸ್ತಿ ಪ್ರತಿಭಟನೆ
ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ‘ಅವಮಾನಿಸಿದ ಮತ್ತು ಅಗೌರವಿಸಿದ’ ಆರೋಪದ ಮೇಲೆ ಕೆಲವು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಮಂಗಳವಾರ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದವು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ನ್ಯಾಯಕ್ಕಾಗಿ ಒತ್ತಾಯಿಸಿದರು.
ಆಹಾ ನೋಡೋಕೆ 2 ಕಣ್ಣು ಸಾಲದು ; ಡಿಕೆಶಿ ತಲೆಗೆ ಸ್ವತಃ ಟವೆಲ್ ಕಟ್ಟಿದ ಸಿಎಂ ಸಿದ್ದರಾಮಯ್ಯ.!
WhatsApp Group
Join Now