ಉತ್ತರ ಪ್ರದೇಶದ ಮುರಾದಾಬಾದ್‌ನಲ್ಲಿ ಅಂತರಧರ್ಮೀಯ ಪ್ರೇಮ(Loving) ಪ್ರಕರಣವೊಂದು ರಕ್ತಸಿಕ್ತ ಅಂತ್ಯ ಕಂಡಿದೆ. 27 ವರ್ಷದ ಮುಸ್ಲಿಂ ಯುವಕ ಮತ್ತು 22 ವರ್ಷದ ಹಿಂದೂ ಯುವತಿಯನ್ನು ಆಕೆಯ ಸಹೋದರರೇ ಭೀಕರವಾಗಿ ಹತ್ಯೆ ಮಾಡಿ ಹೂತುಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣದ ಹಿನ್ನೆಲೆ
ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಅರ್ಮಾನ್ (27), ಕಳೆದ ಕೆಲವು ತಿಂಗಳುಗಳಿಂದ ಮುರಾದಾಬಾದ್‌ನಲ್ಲಿ ವಾಸವಾಗಿದ್ದ. ಈ ಸಮಯದಲ್ಲಿ ಆತನಿಗೆ ಕಾಜಲ್ (22) ಎಂಬ ಯುವತಿಯ ಪರಿಚಯವಾಗಿ, ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ, ಈ ಅಂತರಧರ್ಮೀಯ ಸಂಬಂಧಕ್ಕೆ ಕಾಜಲ್ ಕುಟುಂಬಸ್ಥರು, ವಿಶೇಷವಾಗಿ ಆಕೆಯ ಸಹೋದರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೂಡಲೇ ಪ್ರೀತಿಯನ್ನು ನಿಲ್ಲಿಸುವಂತೆ ಆಕೆಗೆ ಎಚ್ಚರಿಕೆ ನೀಡಿದ್ದರು.
ನಾಪತ್ತೆಯಾದ ಪ್ರೇಮಿಗಳು ಬಯಲಾದ ಸತ್ಯ
ಕಳೆದ ಮೂರು ದಿನಗಳ ಹಿಂದೆ ಅರ್ಮಾನ್ ಮತ್ತು ಕಾಜಲ್ ಇಬ್ಬರೂ ನಾಪತ್ತೆಯಾಗಿದ್ದರು. ಅರ್ಮಾನ್ ತಂದೆ ಹನೀಫ್ ಅವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಕಾಜಲ್ ಕೂಡ ನಾಪತ್ತೆಯಾಗಿರುವುದು ಕಂಡುಬಂದಿದೆ. ಸಂಶಯದ ಮೇಲೆ ಕಾಜಲ್ ಸಹೋದರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭೀಕರ ಸತ್ಯ ಬಯಲಾಗಿದೆ.
“ನಾವು ಅರ್ಮಾನ್ ಮತ್ತು ಕಾಜಲ್ ಕೈಕಾಲುಗಳನ್ನು ಕಟ್ಟಿ ಹಾಕಿ, ಕೊಡಲಿಯಿಂದ ಕೊಚ್ಚಿ ಕೊಂದಿದ್ದೇವೆ” ಎಂದು ಸಹೋದರರು ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೆ, ಶವಗಳನ್ನು ಹೂತುಹಾಕಿದ್ದ ಜಾಗವನ್ನೂ ತೋರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಸಂಜೆ ಪೊಲೀಸರು ಮಣ್ಣಿನಡಿ ಹೂತಿದ್ದ ಶವಗಳನ್ನು ಹೊರತೆಗೆದಿದ್ದಾರೆ.
ಪೊಲೀಸ್ ಕಾರ್ಯಾಚರಣೆ ಮತ್ತು ಭದ್ರತೆ
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಸತ್ಪಾಲ್ ಆಂಟಿಲ್ ಮಾತನಾಡಿ, “ಆರೋಪಿಗಳು ನೀಡಿದ ಮಾಹಿತಿಯಂತೆ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆಗೆ ಬಳಸಿದ ಕೊಡಲಿಯನ್ನು ಜಪ್ತಿ ಮಾಡಲಾಗಿದೆ. ಯುವತಿಯ ಮೂವರು ಸಹೋದರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ,” ಎಂದು ತಿಳಿಸಿದ್ದಾರೆ.
ಈ ಘಟನೆಯಿಂದ ಗ್ರಾಮದಲ್ಲಿ ಕೋಮು ಉದ್ವಿಗ್ನತೆ ಉಂಟಾಗದಂತೆ ತಡೆಯಲು ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಸ್ಲಿಂ ಯುವಕನ ಪ್ರೀತಿಸಿದ ತಪ್ಪಿಗೆ ಅಮಾನುಷ ಶಿಕ್ಷೆ : ಪ್ರೇಮಿಗಳ ಕೈಕಾಲು ಕಟ್ಟಿ ಕೊಡಲಿಯಿಂದ ಕೊಚ್ಚಿ ಕೊಂದ ಅಣ್ಣಂದಿರು!
WhatsApp Group
Join Now