ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ಅಂಚೆ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಅಂಚೆ ಇಲಾಖೆ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ, ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ಮತ್ತು ಭತ್ಯೆಗಳು ಸಿಗುತ್ತವೆ.
ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ ಎಂಬಂತೆ 28,740 ಗ್ರಾಮೀಣ ಡಾಕ್ ಸೇವಕ್ ಹುದ್ದೆಗೆ ಅಂಚೆ ಇಲಾಖೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಜ.31 ರಿಂದ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ಬಗ್ಗೆ ಇಲ್ಲಿದೆ ಮಾಹಿತಿ
ನೇಮಕಾತಿ ಪ್ರಾಧಿಕಾರ : ಅಂಚೆ ಇಲಾಖೆ, ಭಾರತ ಸರ್ಕಾರ ನೇಮಕಾತಿ ಹೆಸರು : ಜಿಡಿಎಸ್ ನೇಮಕಾತಿ 2026
ಸ್ಥಾನಗಳು : ಜಿಡಿಎಸ್, ಬಿಪಿಎಂ, ಎಬಿಪಿಎಂ
ಒಟ್ಟು ಖಾಲಿ ಹುದ್ದೆಗಳು 28,740 (ತಾತ್ಕಾಲಿಕ)
ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್
ಆಯ್ಕೆ ಪ್ರಕ್ರಿಯೆ : 10ನೇ ತರಗತಿಯ ಅಂಕಗಳ ಆಧಾರದ ಮೇಲೆ (ಮೆರಿಟ್ ಪಟ್ಟಿ )
ಅಧಿಕೃತ ವೆಬ್ಸೈಟ್ indiapostgdsonline.gov.in
ಪ್ರಮುಖ ದಿನಾಂಕಗಳು
ಅಧಿಸೂಚನೆ ಬಿಡುಗಡೆ ಜನವರಿ 31, 2026
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ಜನವರಿ 31, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 14, 2026
ಮೆರಿಟ್ ಪಟ್ಟಿ ಫೆಬ್ರವರಿ 28, 2026
ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆಯು ಸರಳ ಮತ್ತು ಸ್ಪಷ್ಟವಾಗಿದೆ. 10 ನೇ ತರಗತಿಯ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಕೆ (ಶೇಕಡಾವಾರು) ಪ್ರತಿ ಅಂಚೆ ವೃತ್ತದಲ್ಲಿ ಅಭ್ಯರ್ಥಿಗಳ ಕಿರುಪಟ್ಟಿ ದಾಖಲೆ ಪರಿಶೀಲನೆ ಅಂತಿಮ ನಿಯೋಜನೆ/ನೇಮಕಾತಿ:
ಅರ್ಜಿ ಸಲ್ಲಿಸುವುದು ಹೇಗೆ..?
• indiapostgdsonline.gov.in ಗೆ ಹೋಗಿ. “GDS ನೇಮಕಾತಿ 2026” ಕ್ಲಿಕ್ ಮಾಡಿ.
• ನಿಮ್ಮ ಹೆಸರು, ಇಮೇಲ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿ.
• ನಿಮ್ಮ ವಿವರಗಳನ್ನು ಬಳಸಿಕೊಂಡು ಲಾಗಿನ್ ಮಾಡಿ. ಫಾರ್ಮ್ ಅನ್ನು ಭರ್ತಿ ಮಾಡಿ. ಫೋಟೋ, ಸಹಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ. ಅಗತ್ಯವಿದ್ದರೆ ಶುಲ್ಕವನ್ನು ಪಾವತಿಸಿ. ದೃಢೀಕರಣ ಪುಟವನ್ನು ಸಲ್ಲಿಸಿ ಮತ್ತು ಮುದ್ರಿಸಿ.
ಅರ್ಜಿ ಶುಲ್ಕ
ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ ₹100/-
ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ / ಮಹಿಳೆ / ಟ್ರಾನ್ಸ್ವುಮೆನ್ ಇಲ್ಲ (ಶುಲ್ಕವಿಲ್ಲ)
ಈ ದಾಖಲೆಗಳನ್ನು ರೆಡಿ ಮಾಡಿ
• 10 ನೇ ತರಗತಿಯ ಅಂಕಪಟ್ಟಿ
• ಜನನ ದಿನಾಂಕದ ಪುರಾವೆ.
• ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ).
• ಕಂಪ್ಯೂಟರ್ ತರಬೇತಿ ಪ್ರಮಾಣಪತ್ರ
• ದೈಹಿಕ ಅಂಗವಿಕಲತೆಯ ಪ್ರಮಾಣಪತ್ರ (ಅಗತ್ಯವಿದ್ದರೆ)
• ಇತ್ತೀಚಿನ ಪಾಸ್ಪೋರ್ಟ್ ಫೋಟೋ ಮತ್ತು ಸಹಿ.
ಸಂಬಳ
GDS / ABPM ₹10,000/- to ₹24,470/-
BPM ₹12,000/- to ₹29,380/-
ವಯಸ್ಸಿನ ಸಡಿಲಿಕೆ :-
SC/ST 5
OBC 3
PwD 10
PwD + OBC 13
PwD + SC/ST 15