ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದುದನ್ನು ನೋಡಿದ ಮಗುವಿನ ಕೊಲೆ – ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Spread the love

ಪ್ರಿಯಕರನೊಂದಿಗೆ ಸೇರಿ ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗನನ್ನು ಎರಡು ಅಂತಸ್ತಿನ ಮನೆಯ ಮೇಲಿಂದ ಎಸೆದು ಕೊಂದ ಘಟನೆ ಏಪ್ರಿಲ್ 28, 2023 ರಂದು ಗ್ವಾಲಿಯರ್ ಜಿಲ್ಲೆಯ ಥಾಟಿಪುರದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸೆಷನ್ಸ್ ನ್ಯಾಯಾಲಯವು ಆರೋಪಿ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಏನಿದು ಘಟನೆ?

ಪ್ರಾಸಿಕ್ಯೂಷನ್ ಪ್ರಕಾರ, ತನ್ನ ಮಗನನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಜ್ಯೋತಿ ರಾಥೋಡ್, ತನ್ನ ನೆರೆಯ ಉದಯ್ ಇಂದೌಲಿಯಾ ಜೊತೆ ಛಾವಣಿಯ ಮೇಲೆ ಇದ್ದಳು. ಈ ವೇಳೆ ಇವರಿಬ್ಬರು ಒಟ್ಟಿಗೆ ಇರುವುದನ್ನು ಮಗು ನೋಡಿದ್ದಾನೆ. ಈ ಮಗು ತಂದೆಗೆ ಈ ವಿಷವನ್ನು ಹೇಳಿಬಿಡುತ್ತಾನೆ ಎಂಬ ಭಯದಿಂದ ಜ್ಯೋತಿ ತನ್ನ ಮಗನನ್ನು ಎರಡು ಅಂತಸ್ತಿನ ಮನೆಯ ಛಾವಣಿಯಿಂದ ಎಸೆದಿದ್ದಾಳೆ. ಮಗುವಿನ ತಲೆಗೆ ತೀವ್ರ ಗಾಯಗಳಾಗಿದ್ದವು. ಮರುದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅವನು ಸಾವನ್ನಪ್ಪಿದನು.

ಮೃತಳ ತಂದೆ ಪೊಲೀಸ್ ಕಾನ್ಸ್‌ಟೇಬಲ್ ಧ್ಯಾನ್ ಸಿಂಗ್, ಆರಂಭದಲ್ಲಿ ಇದನ್ನು ಅಪಘಾತ ಎಂದೇ ಪರಿಗಣಿಸಿದ್ದರು.

ಮಗನ ಮರಣದ ನಂತರ, ಜ್ಯೋತಿಯ ಮಾನಸಿಕ ಸ್ಥಿತಿ ಹದಗೆಟ್ಟಿತು. ಅವಳು ಮಧ್ಯರಾತ್ರಿಯಲ್ಲಿ ಭಯಭೀತಳಾಗಿ ಎಚ್ಚರಗೊಂಡು ಕಿರುಚಾಡುತ್ತಿದ್ದಳು. ಆಕೆಯ ಪತಿ ಮಗು ಸತ್ತ ಕಾರಣದಿಂದ ಆಘಾತದಿಂದ ಹೀಗೆ ವರ್ತಿಸುತ್ತಿದ್ದಾಳೆ ಎಂದು ತಿಳಿದಿದ್ದ, ವೈದ್ಯಕೀಯ ಚಿಕಿತ್ಸೆ ಪಡೆದರೂ ಅವಳ ಸ್ಥಿತಿ ಸುಧಾರಿಸಲಿಲ್ಲ.

ನಂತರ, ತನ್ನ ಸತ್ತ ಮಗ ತನ್ನ ಕನಸಿನಲ್ಲಿ ತನಗೆ ಕಾಣಿಸಿಕೊಂಡನೆಂದು ಅವಳು ತನ್ನ ಗಂಡನಿಗೆ ಹೇಳಿದಳು. ಅವನ ಆತ್ಮ ಅಲೆದಾಡುತ್ತಿದೆ ಎಂದು ಅವಳು ಭಾವಿಸಿದಳು ಹಾಗಾಗಿ ಒಂದು ದಿನ ಅವಳು ತನ್ನ ಅಪರಾಧವನ್ನು ಒಪ್ಪಿಕೊಂಡಳು. ಮಗು ತನ್ನನ್ನು ಮತ್ತು ತನ್ನ ಪ್ರಿಯಕರನನ್ನು ಛಾವಣಿಯ ಮೇಲೆ ಒಟ್ಟಿಗೆ ನೋಡಿದೆ. ಈ ಬಗ್ಗೆ ಯಾರಿಗಾದರೂ ತಿಳಿಸಬಹುದೆಂಬ ಭಯದಿಂದ ಮಗುವನ್ನು ಛಾವಣಿಯಿಂದ ಕೆಳಗೆ ಎಸೆದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

WhatsApp Group Join Now

Spread the love

Leave a Reply