Horoscope Today : 19 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಮೇಷ ರಾಶಿಯವರಿಗೆ ಸಾಧಾರಣ ದಿನವು ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಗಳೊಂದಿಗೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಬಹುದು. ಕಚೇರಿ ಸಂಬಂಧ ಪ್ರವಾಸ ತೆರಳಬಹುದು. ನೀವು ಕೈಗೊಳ್ಳಬೇಕಾಗಿದ್ದ ಅತೀ ಮುಖ್ಯ ಯೋಜನೆಗಳಿಗೆ ಸರಕಾರದಿಂದ ಸಹಾಯ ಹಸ್ತ ಪಡೆಯುವಿರಿ.

ಮನೆಯಲ್ಲಿ ಎಲ್ಲವೂ ಉತ್ಸಾಹ ಹಾಗೂ ಶಾಂತರೀತಿಯಿಂದಿರುತ್ತದೆ. ಇದು ನಿಮ್ಮ ಮನೆಯ ಸೌಂದರ್ಯವೃದ್ಧಿಯಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ಪ್ರೇರೇಪಿಸುತ್ತದೆ. ಅವಸರವು ಅಪಘಾತಕ್ಕೆ ಕಾರಣ. ಆದ್ದರಿಂದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಆತುರ ಬೇಡ. ನಿಮ್ಮ ತಾಯಿಯ ಆರೋಗ್ಯವು ಉತ್ತಮವಾಗಿರುವುದಿಲ್ಲ.

ವೃಷಭ :-

ವ್ಯವಹಾರಕ್ಕೆ ಮತ್ತು ಲಾಭಕ್ಕೆ ಸಂಬಂಧಿಸಿದಂತೆ ಇಂದು ಉತ್ತಮ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಯಾವುದೇ ಹೊಸ ಯೋಜನೆಗಳಿದ್ದಲ್ಲಿ ಅದನ್ನು ಇಂದೇ ಪ್ರಾರಂಭಿಸಿ. ನಿಮ್ಮ ವೃತ್ತಿಯನ್ನು ಇನ್ನಷ್ಟು ವೃದ್ಧಿಗೊಳಿಸಲು ಇದು ಉತ್ತಮ ಸಮಯ. ವಿದೇಶಿ ಪ್ರಯಾಣ ತೆರಳಲಿದ್ದೀರಿ. ಪವಿತ್ರ ಸ್ಥಳಗಳಿಗೆ ಭೇಟಿ ನೀಡಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಇಲ್ಲವಾದಲ್ಲಿ ಇದು ನಿಮಗೆ ತೊಂದರೆಯನ್ನುಂಟುಮಾಡಬಹುದು. ಇಂದು ನಿಮ್ಮ ಕೈತುಂಬಾ ಕೆಲಸವಿರುವ ಸಾಧ್ಯತೆಯಿದೆ. ಆದ್ದರಿಂದ ಅದಕ್ಕೆ ಸಿದ್ಧರಾಗಿರಿ.

ಮಿಥುನ :-

ವಿಲಕ್ಷಣ ಮತ್ತು ಅಹಿತಕರ ಘಟನೆಗಳು ಇಂದು ಸಂಭವಿಸಬಹುದು. ಆದ್ದರಿಂದ ಮಿಥುನ ರಾಶಿಯವರು ಹೆಚ್ಚು ಜಾಗರೂಕರಾಗಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಗಾಯಕ್ಕೆ ಉಪ್ಪು ಸೇರಿಸಿದಂತೆ, ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಪ್ರಯಾಸ ಹಾಗೂ ಆನಾರೋಗ್ಯದಿಂದ ಕೂಡಿರುತ್ತೀರಿ. ಆದ್ದರಿಂದ ನಿಮಗಿಷ್ಟವಾದ ಕಾರ್ಯಗಳಲ್ಲಿ ಅಥವಾ ಹವ್ಯಾಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಇದು ನಿಮ್ಮ ಒತ್ತಡವನ್ನು ತಗ್ಗಿಸುತ್ತದೆ. ದುಡುಕು ಸ್ವಭಾವದಿಂದ ಮುಕ್ತಿ ಪಡೆಯುವಿರಿ. ಇಂದು ನಿಮ್ಮ ಗ್ರಹಗತಿಗಳು ಉತ್ತಮ ರೀತಿಯಲ್ಲಿರದೇ ಇರುವುದರಿಂದ ನಿಮಗೆ ಸಾಕಷ್ಟು ಪ್ರಯೋಜನ ಉಂಟಾಗಲಿದೆ. ನಿಮ್ಮ ಖರ್ಚುವೆಚ್ಚಗಳಲ್ಲಿ ಏರಿಕೆ ಉಂಟಾಗಲಿದೆ. ಧ್ಯಾನ ಮತ್ತು ಯೋಗದಲ್ಲಿ ತೊಡಗಿ. ಮನಸ್ಸು ಹಗುರವೆನಿಸುತ್ತದೆ.

ಕರ್ಕಾಟಕ :-

ಪ್ರಭಾವಶಾಲಿಯಾಗಿ ಈ ದಿನವು ಸಂತಸದಿಂದ ತುಂಬಿರುತ್ತದೆ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಡಗರವನ್ನು ತರುತ್ತದೆ. ಹಣಕಾಸು ಲಾಭ ಉಂಟಾಗಲಿದೆ. ವ್ಯವಹಾರದಲ್ಲಿಯೂ ಈ ದಿನ ಉತ್ತಮ ಅಭಿವೃದ್ಧಿ ಕಾಣಲಿದೆ. ವ್ಯವಹಾರದಲ್ಲಿನ ನಿಮ್ಮ ಪಾಲುದಾರರು ನಿಮಗೆ ಪ್ರಯೋಜನ ತರಲಿದ್ದಾರೆ. ನಿಮ್ಮ ಪ್ರೀತಿಪಾತ್ರರೊಂದಿಗಿನ ಪ್ರವಾಸದ ನೆನಪು ಅವಿಸ್ಮರಣೀಯವಾಗಿರುತ್ತದೆ ಮತ್ತು ಜೀವನಪೂರ್ತಿ ನೆನಪಿಸುವಂತಿರುತ್ತದೆ. ಸಾಮಾಜಿಕ ನೆಲೆಯಲ್ಲಿ ನಿಮ್ಮ ಖ್ಯಾತಿ ವರ್ಧಿಸಲಿದೆ. ಅದ್ಭುತ ದಿನವು ನಿಮಗಾಗಿ ಕಾದಿದೆ.

ಸಿಂಹ :-

ಅಹಿತಕರ ಗ್ರಹಗತಿಗಳು ಸಿಂಹರಾಶಿಯವರಾದ ನಿಮ್ಮ ದಿನವನ್ನು ಕಷ್ಟಕರವನ್ನಾಗಿಸುತ್ತದೆ. ಲೆಕ್ಕವಿಲ್ಲದಷ್ಟು ಒತ್ತಡ, ಆತಂಕ ಮತ್ತು ನಿರುತ್ಸಾಹ ಇವುಗಳ ಅಡಿಯಾಳಾಗುತ್ತೀರಿ. ಇಂದು ಧೈರ್ಯದಿಂದಿರಿ.ನಿಮ್ಮ ದೈನಂದಿನ ಕಾರ್ಯವನ್ನು ಪೂರ್ಣಗೊಳಿಸಲು ಮತ್ತು ನಿಗದಿತ ಸಮಯದೊಳಗೆ ಮುಗಿಸಲು ನಿಮಗೆ ಕಷ್ಟಕರವಾಗುವುದರಿಂದ ಕಚೇರಿಯಲ್ಲೂ ನಿಮ್ಮ ದಿನವು ನೆಮ್ಮದಿಯಾಗಿರುವುದಿಲ್ಲ. ಇದು ಕೆಲವರ ಹುಬ್ಬೇರಿಸುವಂತೆ ಮಾಡಬಹುದು. ಆದ್ದರಿಂದ ಉತ್ತಮ ಫಲಿತಾಂಶದೊಂದಿಗೆ ಮೇಲಾಧಿಕಾರಿಗಳನ್ನು ಸಂತುಷ್ಟಗೊಳಿಸುವುದು ಪ್ರಮುಖ ಆದ್ಯತೆ. ಸಹೋದ್ಯೋಗಿಗಳೂ ನಿಮಗೆ ಸಹಾಯ ಮಾಡಲಾರರು. ಒಟ್ಟಾರೆಯಾಗಿ ಈ ದಿನ ವಿವರ್ಣವಾಗಿರುತ್ತದೆ.

ಕನ್ಯಾ :-

ಇಂದಿನ ಗ್ರಹಗತಿಗಳನ್ನು ವಿಶ್ಲೇಷಣೆ ಮಾಡಿದ ಗಣೇಶ ಗಂಬೀರ ಸ್ವರೂಪದಲ್ಲದ ಎಂಬುದಾಗಿ ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ಕಷ್ಟಕರ ದಿನವಾಗಲಿದೆ. ಮಕ್ಕಳು ದಿನಪೂರ್ತಿ ನಿಮಗೆ ತೊಂದರೆ ನೀಡುವ ಕಾರಣ ನಿಮ್ಮ ಮನಸ್ಸು ಬೇರೆಡೆಗೆ ವಾಲಬಹುದು. ಹೂಡಿಕೆದಾರರು ಹೆಚ್ಚು ಜಾಗರೂಕರಾಗಿರಬೇಕು. ಬೌದ್ಧಿಕ ಚರ್ಚೆ ಮತ್ತು ಮಾತುಕತೆಗಳಲ್ಲಿ ತೊಡಗುವುದನ್ನು ತಪ್ಪಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.

ತುಲಾ :-

ತುಲಾ ರಾಶಿಯವರಿಗೆ ವಿಷಣ್ಣತೆಯ ದಿನವು ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಶಾಂತಿ ಮತ್ತು ಸಮಾಧಾನದಿಂದಿರಲು ನಿಮಗೆ ಕಷ್ಟಕರವಾಗುವುದರಿಂದ ಪ್ರತೀ ಸಮಯದಲ್ಲೂ ಎಚ್ಚರಿಕೆಯಿಂದಿರಬೇಕಾದ ವಿಚಾರಗಳಲ್ಲಿ ವ್ಯವಹರಿಸುವುದನ್ನು ತಪ್ಪಿಸಿ. ವಿಶೇಷವಾಗಿ ಆಸ್ತಿ ವಿಚಾರಗಳಲ್ಲಿ. ಪ್ರಯಾಣವನ್ನು ತಪ್ಪಿಸಿ.ನಿಮ್ಮ ಮನೆಯ ವಾತಾವರಣವು ಪ್ರಕ್ಷುಬ್ಧ ಮತ್ತು ಗೊಂದಲದಿಂದ ಕೂಡಿರುತ್ತದೆ. ಚರ್ಚೆ ಮತ್ತು ವಾಗ್ವಾದಗಳಿಂದ ದೂರವಿರಿ. ನೀವು ಇದರಲ್ಲಿ ಭಾಗಿಯಾದಲ್ಲಿ ನಿಮ್ಮ ಘನತೆ ಮತ್ತು ಗೌರವಕ್ಕೆ ಕುತ್ತುಬರಲಿದೆ.

ವೃಶ್ಚಿಕ :-

ಮಹಿಳಾ ಅದೃಷ್ಟವು ವೃಶ್ಚಿಕ ರಾಶಿಯವರತ್ತ ನಗುಬೀರುತ್ತಿದೆ. ಮುಂದಕ್ಕೆ ನಿಮ್ಮ ದಿನವು ಸಿಹಿಯಿಂದ ಕೂಡಿರುತ್ತದೆ ಮತ್ತು ಹಣಕಾಸು ಲಾಭವೂ ಉಂಟಾಗುವ ಸಾಧ್ಯತೆಯಿದೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅಥವಾ ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಇಂದು ಸೂಕ್ತ ದಿನ. ಕುಟುಂಬ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ ತಿರುಗಾಟಕ್ಕೆ ತೆರಳಬಹುದು. ಗ್ರಹಗತಿಗಳು ನಿಮ್ಮತ್ತ ನಗುಬೀರುತ್ತಿರುವುದರೊಂದಿಗೆ ದಿನವಿಡೀ ನೀವು ಉತ್ಸಾಹದಿಂದಿರುತ್ತೀರಿ. ನಿಮ್ಮ ಪ್ರತಿಸ್ಪರ್ಧಿಗಳು ಸೋಲೊಪ್ಪಿಕೊಳ್ಳುತ್ತಾರೆ.

ಧನು :-

ಗೊಂದಲಗಳಲ್ಲಿ ಸಿಕ್ಕಿಬೀಳಬೇಡಿ. ಅವುಗಳನ್ನು ಪರಿಹರಿಸಲು ಪ್ರಯತ್ನಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಮನೆಯಲ್ಲಿನ ವಾತಾವರಣವು ಅಹಿತಕರವಾಗಿರುತ್ತದೆ. ಶಾಂತವಾಗಿರಲು ಪ್ರಯತ್ನಿಸಿ. ದುರಾಕ್ರಮಣ ವರ್ತನೆಯಿಂದ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ. ಆದ್ದರಿಂದ ಅದನ್ನು ಹತೋಟಿಯಲ್ಲಿರಿಸಿ. ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮಗೆ ಕಷ್ಟವೆನಿಸಬಹುದು. ಆದರೆ, ಶಾಂತ ಹಾಗೂ ಸಮಾಧಾನದಿಂದಿದ್ದರೆ ಇದರೊಂದಿಗೆ ಖಂಡಿತವಾಗಿಯೂ ವ್ಯವಹರಿಸಬಹುದು. ಇಂದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಇಂದು ಕಾರ್ಯ ಒತ್ತಡವು ಹೆಚ್ಚಾಗಿರುವ ಸಾಧ್ಯತೆಯಿದೆ.

ಮಕರ :-

ಎಂತಹ ದಿನ! ಇದನ್ನು ಇನ್ನಷ್ಟು ಅದ್ಭುತಗೊಳಿಸಲು ನಿಮ್ಮ ದಿನವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ಮತ್ತು ಸಂಪೂರ್ಣ ಸಂತೋಷವನ್ನು ಅನುಭವಿಸಿ.ಇಂದು ಎಲ್ಲವೂ ಸರಿಯಾದ ಸ್ಥಳದಲ್ಲಿ ಮತ್ತು ಸೂಕ್ತ ಜಾಗದಲ್ಲಿದೆ.ಇದು ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧ ಆಗಿರಬಹುದು ಅಥವಾ ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿಯೂ ಆಗಿರಬಹುದು. ಕೇವಲ ಸಂಪೂರ್ಣವಾಗಿದೆ. ಪರಿಪೂರ್ಣ ಉದ್ಯೋಗಿಯಾಗಿ ಇಂದು ವೃತ್ತಿಕ್ಷೇತ್ರದಲ್ಲಿ ನೀವು ಮನ್ನಣೆ ಪಡೆಯುವ ಸಾಧ್ಯತೆಯಿದೆ. ಇದು ನಿಮ್ಮ ಮೇಲಾಧಿಕಾರಿಗಳಲ್ಲಿ ನಿಮ್ಮ ಬಗ್ಗೆ ಉತ್ತಮ ಭಾವನೆಯನ್ನು ಉಂಟುಮಾಡಬಹುದು. ಮಿತಿಮೀರಿದ ಕಾರ್ಯ ಅಥವಾ ನಿಮ್ಮ ದೇಹಕ್ಕೆ ಅತೀ ಪ್ರಯಾಸ ನೀಡುವುದರಿಂದ ನೀವು ಕುಗ್ಗುತ್ತೀರಿ ಮತ್ತು ಆಯಾಸಗೊಳ್ಳುತ್ತೀರಿ.

ಕುಂಭ :-

ಇಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ದುರ್ಬಲ ಮತ್ತು ನಿರುತ್ಸಾಹಿಗಳಾಗಿ ಕಂಡುಬರಬಹುದು. ಇದು ಕುಟುಂಬದಲ್ಲಿನ ಸಂಘರ್ಷಕ್ಕೆ ಕಾರಣವಾಗಬಹುದು ಪರಿಣಾಮವಾಗಿ ಜಗಳ ಮತ್ತು ವಾಗ್ವಾದಗಳು ಸಂಭವಿಸಬಹುದು. ಇದು ನಿಮ್ಮನ್ನು ಬೇಸರ ಹಾಗೂ ಅಸ್ಥಿರತೆಯಲ್ಲಿಡಬಹುದು. ನಿಮ್ಮ ಖರ್ಚು, ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣವಿಡುವಂತೆ ಹಾಗೂ ಅನಿರೀಕ್ಷಿತ ಅಪಾಯದ ಬಗ್ಗೆ ಗಮನಹರಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಕಾನೂನು, ನ್ಯಾಯಾಲಯ ಪ್ರಕರಣ ಅಥವಾ ಕೊಡುಕೊಳ್ಳುವಿಕೆಯಂತಹ ಆರ್ಥಿಕ ವ್ಯವಹಾರಗಳಲ್ಲಿ ವ್ಯವಹರಿಸುವಾಗ ಎರಡೆರಡು ಬಾರಿ ಯೋಚಿಸಿ. ಕಾಗದ ಪತ್ರ, ದಾಖಲೆಗಳು ಮುಂತಾದವುಗಳ ವ್ಯವಹಾರವನ್ನು ಇಂದು ತಪ್ಪಿಸಿ. ಇತರರಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಒಂದು ವೇಳೆ ಹಾಗಾದರೆ, ನೀವು ನಿಮ್ಮ ಕೈಯನ್ನೇ ಸುಟ್ಟುಕೊಳ್ಳುವಿರಿ!

ಮೀನ :-

ಅನಿರೀಕ್ಷಿತ ಫಲಪ್ರಾಪ್ತಿಯಾಗಲಿದೆ. ನೀವು ಅದೃಷ್ಟ ಮೀನರಾಶಿಯವರು ಲಾಟರಿಯಲ್ಲಿ ಗೆಲುವು ಸಾಧಿಸಬಹುದು. ಒಟ್ಟಾರೆ ಅದೃಷ್ಟಕರ ಉತ್ತಮ ದಿನವನ್ನು ಗಣೇಶ ಕಾಣುತ್ತಾರೆ. ಮಕ್ಕಳಿಂದ ಶುಭಸುದ್ದಿ ಬರಲಿದೆ. ಮತ್ತು ಅವರನ್ನು ಅಥವಾ ನಿಮ್ಮ ಹಳೆಯ ಸ್ನೇಹಿತರ ಭೇಟಿಯಿಂದ ಸಂತಸಗೊಳ್ಳುವಿರಿ. ಹೊಸ ಮೈತ್ರಿಯು ಕೂಡ ನಿಮಹೆ ಲಾಭದಾಯಕವಾಗಲಿಗೆ. ಮತ್ತು ದೀರ್ಘಾವಧಿಯವರೆಗೂ. ಸಾಮಾಜಿಕ ಕಾರ್ಯಗಳಿಗಾಗಿ ನೀವು ಪ್ರಯಾಣ ಬೆಳೆಸಬೇಕಾಗಬಹುದು. ಇದು ಹರ್ಷದಾಯಕವಾಗಿರುತ್ತದೆ ಮತ್ತು ವ್ಯವಹಾರದ ದೃಷ್ಟಿಯಿಂದ ಪ್ರಯೋಜನಕಾರಿಯಾಗಿರುತ್ತದೆ. ಇದಲ್ಲದೆ, ನಿಮ್ಮ ಪ್ರೀತಿಪಾತ್ರರೊಂದಿಗೆ ಸುಂದರ ಪ್ರವಾಸಿತಾಣಗಳಿಗೆ ಹೋಗಬಹುದು. ಆನಂದಿಸಿ,

WhatsApp Group Join Now

Spread the love

Leave a Reply