ಕರ್ನಾಟಕದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದು ಮಾಡಿ ಹಳೇ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಮಾಡದಿದ್ದರೆ ಕರ್ನಾಟಕ ಬಂದ್ ನಡೆಸುವುದು ಅನಿವಾರ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾದ್ಯಾಧ್ಯಕ್ಷ ಸಿಎಸ್ ಷಡಕ್ಷರಿ, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ 2ನೇ ರಾಜ್ಯ ಕರ‍್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ” ಒಪಿಎಸ್ ಜಾರಿಗೊಳಿಸುವಂತೆ ನಾವು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ, ಪ್ರಯೋಜನ ಆಗಿಲ್ಲ. ಕಾರಣ, ಕರ್ನಾಟಕವನ್ನು ಬಂದ್ ಮಾಡಿಯಾದರೂ ಒಪಿಎಸ್ ಪಡೆದೇ ತೀರುತ್ತೇವೆ ” ಎಂದು ಸ್ಪಷ್ಟಪಡಿಸಿದರು.
ಸರಕಾರಿ ನೌಕರಿಯಿಂದ ತೆಗೆಯಲಿಕ್ಕೆ ಯಾರಿಗೂ ಅಧಿಕಾರವಿಲ್ಲ
`ಈ ನಿಮ್ಮ ರಾಜ್ಯಾಧ್ಯಕ್ಷ ಷಡಕ್ಷರಿಯನ್ನು ಅರೆಸ್ಟ್ ಮಾಡ್ತಾರೆ, ಜೈಲಿಗೆ ಕಳಿಸುತ್ತಾರೆ, ಕೆಲಸದಿಂದ ಸಸ್ಪೆಂಡ್ ಮಾಡ್ತಾರೆ ಎಂದು ಯಾರೂ ಹೆದರಿಕೊಳ್ಳಬೇಡಿ. ನಾವು ಇಂತಹ ಬೆದರಿಕೆಗಳನ್ನೆಲ್ಲಾ ಹಿಂದೆ ಸಾಕಷ್ಟು ನೋಡಿದ್ದೇವೆ. ನಾವು ಯಾರೂ ಹೆದರಿಕೊಳ್ಳುವ ಅಗತ್ಯವೇ ಇಲ್ಲ. ದೇವರು ನಮಗೆ ಜೀವ, ಜೀವನ ಕೊಟ್ಟಿದ್ದಾನೆ. ನನ್ನ ಸ್ವಸಾಮರ್ಥ್ಯದ ಆಧಾರದಲ್ಲಿ ಸರಕಾರಿ ಕೆಲಸ ಸಿಕ್ಕಿದೆ. ನನ್ನನ್ನು ಸರಕಾರಿ ನೌಕರಿಯಿಂದ ತೆಗೆಯಲಿಕ್ಕೆ ಯಾರಿಗೂ ಅಧಿಕಾರವಿಲ್ಲ. ನಾವು ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ,’ ಎಂದರು.
ಸರಕಾರಿ ನೌಕರರು ಯಾರೂ ಕೆಲಸಕ್ಕೆ ಬರುತ್ತಿಲ್ಲ ಎನ್ನಬೇಕು
“ಈ ನಿಟ್ಟಿನಲ್ಲಿ ನಮ್ಮ ಹೋರಾಟದ ತೀವ್ರತೆ ಚಂಡಮಾರುತದ ರೀತಿ ಇರಬೇಕು. ಕರ್ನಾಟಕ ಬಂದ್ ಹೇಗಿರಬೇಕು ಅಂದರೆ, `ಸರ್ ಇಡೀ ಕರ್ನಾಟಕ ಬಂದ್ ಆಗಿದೆ, ಸರಕಾರಿ ನೌಕರರು ಯಾರೂ ಕೆಲಸಕ್ಕೆ ಬರುತ್ತಿಲ್ಲ’ ಎಂದು ಗುಪ್ತಚರ ಇಲಾಖೆಯವರು ಮುಖ್ಯಮಂತ್ರಿಗಳಿಗೆ ವರದಿ ನೀಡಬೇಕು.
“ಬಂದ್ ವೇಳೆ ಯಾರಾದರೂ ಕೆಲಸ ಮಾಡುತ್ತಿದ್ದರೆ, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಕಚೇರಿ ಒಳಗೆ ಹೋಗಿ ಅವರನ್ನು ಎಳೆದು ಹೊರಗೆ ಕರೆತರಬೇಕು. ನಮ್ಮ ಜೀವನ, ನಮ್ಮ ಭವಿಷ್ಯ ಮುಖ್ಯವೇ ಹೊರತು ನಿನ್ನ ಕೆಲಸವಲ್ಲ ಎಂದು ಅವರಿಗೆ ತಿಳಿಸಬೇಕು,’ ಎಂದರು.
ಒಪಿಎಸ್ ಪಡೆದೇ ತೀರುತ್ತೇವೆ – ಕರ್ನಾಟಕ ಬಂದ್‌ಗೆ ರೆಡಿ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನೌಕರರ ಸಂಘದ ಸಿಎಸ್ ಷಡಕ್ಷರಿ
WhatsApp Group
Join Now