ಮೇಷ :-
ಸಿಟ್ಟು ನಿಮ್ಮ ಕೆಲಸ ಹಾಗೂ ಸಂಬಂಧಗಳನ್ನು ಹಾಳುಮಾಡುವ ಕಾರಣ ನಿಮ್ಮ ಸಿಟ್ಟನ್ನು ನಿಗ್ರಹಿಸುವ ಅಗತ್ಯವಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಉದ್ವೇಗ, ಹಗೆತನವು ನಿಮ್ಮನ್ನು ಕೆಲಸದಲ್ಲಿ ಗಮನಹರಿಸಲು ಬಿಡುವುದಿಲ್ಲ. ಇಂದು ನೀವು ಅಸ್ವಸ್ಥರಾಗಿರುವ ಸಾಧ್ಯತೆಯಿದೆ.
ನೀವು ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಸಾಧ್ಯತೆಯಿದೆ ಅಥವಾ ಶುಭಕರ ಸಮಾರಂಭಗಳಿಗೆ ಆಮಂತ್ರಣ ಬರುವ ಸಾಧ್ಯತೆಯಿದೆ.
ವೃಷಭ :-
ಕಾರ್ಯಒತ್ತಡವು ಅಧಿಕವಾಗಿರುತ್ತದೆ. ನೀವು ಅಧಿಕ ಶ್ರಮಪಡಬೇಕಾಗುತ್ತದೆ ಆದರೂ ಯಶಸ್ಸು ಬೇಗನೆ ಸಿಗುವುದಿಲ್ಲ. ಪರಿಸ್ಥಿತಿಯ ಕೈಗೊಂಬೆಯಾಗಿರುವಿರಿ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸೂಕ್ತ ಸಮಯವಲ್ಲ. ನಿಮ್ಮ ಆಹಾರದ ಆಯ್ಕೆ ಸೂಕ್ತವಾಗಿರಲಿ. ನಿಮ್ಮ ಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಬಹುದು. ಫಲಕಾರಿ ಲಾಭವನ್ನು ಹಿಂಬಾಲಿಸುವ ಬದಲು ಧ್ಯಾನ ಮತ್ತು ಆಧ್ಯಾತ್ಮದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬುದಾಗಿ ಗಣೇಶ ಹೇಳುತ್ತಾರೆ.
ಮಿಥುನ :-
ಇಂದು ಆನಂದಕರ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ. ಹತ್ತಿರದ ಸುಂದರ ಸ್ಥಳಗಳಿಗೆ ನೀವು ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗಿನ ಸಣ್ಣ ಪ್ರವಾಸಿದಿಂದ ಖುಷಿಪಡಬಹುದು. ವಾರ್ಡ್ರೋಬ್ ಬದಲಾಯಿಸುವ ನಿಮ್ಮ ಆಸೆಯು ಕೈಗೂಡಲಿದೆ. ಇಂದು ನೀವು ಉತ್ಕೃಷ್ಟ ಅಡುಗೆಯನ್ನು ಸವಿಯಬಹುದು. ನಿಮಗಿಷ್ಟವಾದ ವಾಹನದಲ್ಲಿ ದೂರ ಸವಾರಿ ತೆರಳಬಹುದು. ನಿಮ್ಮ ಜನಪ್ರಿಯತೆ ವರ್ಧಿಸುವ ಸಾಧ್ಯತೆಯಿದೆ.
ಕರ್ಕಾಟಕ :-
ವಿರೋಧಿಗಳು ಅಥವಾ ಶತ್ರುಗಳ ವಿರುದ್ಧ ಗೆಲುವು, ಮಹಿಳಾ ಸ್ನೇಹಿತರ ಭೇಟಿ, ಘನತೆ ಮತ್ತು ಅಧಿಕಾರದ ವರ್ಧನೆ, ಉತ್ತಮ ಜೀವನದ ಎಲ್ಲಾ ಉಡುಗೊರೆಗಳು ಇಂದು ನಿಮಗೆ ಸುಲಭವಾಗಿ ಬರಲಿದೆ. ಅದೃಷ್ಟದೊಂದಿಗೆ, ವೃತ್ತಿ ಕ್ಷೇತ್ರಗಳಲ್ಲಿನ ಎಲ್ಲಾ ಪರಿಶ್ರಮಗಳಲ್ಲಿ ಗಣೇಶನ ಪ್ರಶಂಸೆ, ವರಿಷ್ಟರು ಮತ್ತು ಸಹೋದ್ಯೋಗಿಗಳಿಂದ ಸಹಕಾರ ಮತ್ತು ಪ್ರಯೋಜನ ಸಿಗಲಿದೆ. ಇಂತಹ ನೆಮ್ಮದಿಯ ದಿನವು ಅಪರೂಪವಾಗಿದ್ದು, ಮನೆಮಂದಿಯೊಂದಿಗೆ ಉಲ್ಲಾಸಕರ ಕ್ಷಣಗಳನ್ನ ಕಳೆಯುವ ಮೂಲಕ, ಉತ್ತಮ ಆರೋಗ್ಯ ಹಾಗೂ ಫಲಪ್ರದ ಕೆಲಸಗಳು ಹೀಗೆ ಇದರ ಗರಿಷ್ಠ ಪ್ರಯೋಜನ ಪಡೆದುಕೊಳ್ಳಿ
ಸಿಂಹ :-
ಖುಷಿ, ಹರ್ಷ ಮತ್ತು ಸೃಜನಶೀಲ ಆಸಕ್ತಿಗಳಲ್ಲಿ ಸಂತೋಷದ ದಿನವನ್ನು ಗಣೇಶ ದಯಪಾಲಿಸುತ್ತಾರೆ. ನಿಮ್ಮ ಕಲ್ಪನೆಗಳು ವೃದ್ಧಿಸಲಿವೆ ಮತ್ತು ಇದು ನಿಮ್ಮನ್ನು ಆಧ್ಯಾತ್ಮ ಬೋಧನೆ ಹಾಗೂ ಕವನ ಬರೆಯುವದರಲ್ಲಿ ತೊಡಗುವಂತೆ ಮಾಡಲಿವೆ. ನಿಮ್ಮ ಮನಸ್ಸಿಗೆ ಹತ್ತಿರವಾದ ಜನರ ಭೇಟಿಯು ಫಲಕಾರಿಯಾಗಲಿದೆ ಮತ್ತು ಉತ್ಸಾಹವನ್ನುಂಟುಮಾಡಲಿದೆ. ಅವರು ನಿಮಗೆ ಲಾಭದಾಯಕವಾಗಲಿದ್ದಾರೆ ಮತ್ತು ಪ್ರಶಂಸಿಸಲಿದ್ದಾರೆ. ಮಕ್ಕಳಿಂದ ಶುಭಸುದ್ದಿ, ಶೈಕ್ಷಣಿಕ ಚಟುವಟಿಕೆಗಳಿಗಾಗಿ ಬಂಡವಾಳ ಹೂಡಿರುವ ಪರಿಶ್ರಮಕ್ಕೆ ತ್ವರಿತ ಮತ್ತು ಧನಾತ್ಮಕ ಫಲಿತಾಂಶ, ಸ್ನೇಹಿತರ ಸಾಂಗತ್ಯವು ನಿಮ್ಮನ್ನು ಸಂತೋಷಗೊಳಿಸುತ್ತದೆ. ಜೀವನವೆಂಬ ಉಡುಗೊರೆಗೆ ಕೃತಜ್ಞರಾಗಿ ಮತ್ತು ದಾನಶೀಲ ಚಟುವಟಿಕೆಗಳ ಮೂಲಕ ಅದನ್ನು ಸಮಾಜಕ್ಕೆ ಮರಳಿಸಿ.
ಕನ್ಯಾ :-
ಇಂದು ದಿನದ ಹೆಚ್ಚಿನ ಭಾಗದಲ್ಲಿ ನೀವು ನಿರುತ್ಸಾಹ ಮತ್ತು ಅನಾಸಕ್ತರಾಗಿರುತ್ತೀರಿ. ಯಾವುದೇ ವಿಶೇಷವಿಲ್ಲದೆ ಸಾಮಾನ್ಯ ದಿನವು ಇದಾಗಿದೆ ಎಂಬ ಮುನ್ಸೂಚನೆಯನ್ನು ಗಣೇಶ ನೀಡುತ್ತಾರೆ. ತಲೆನೋವು, ಒತ್ತಡ ಮುಂತಾದ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಮತ್ತು ಇದು ನಿಮ್ಮ ತಾಯಿಯ ಆರೋಗ್ಯದಿಂದಲೂ ಆಗಿರಬಹುದು. ಪ್ರೀತಿಪಾತ್ರರೊಂದಿಗಿನ ಸಣ್ಣ ಜಗಳ, ಅಹಿತಕರ ಸಾರ್ವಜನಿಕ ಅಪನಿಂದೆ, ಅನಿರೀಕ್ಷಿತ ವೆಚ್ಚ ಇವೆಲ್ಲವೂ ನಿಮ್ಮನ್ನು ಚಿಂತೆಗೀಡುಮಾಡಲಿವೆ. ನೀರು ಸಂಬಂಧಿತ ಅಪಾಯಗಳಿಂದ ಅಥವಾ ಮಹಿಳೆಯರಿಂದ ಎಚ್ಚರಿಕೆಯಿಂದಿರಿ. ಭೂ ಅಥವಾ ಆಸ್ತಿ ಸಂಬಂಧಿತ ಕಾನೂನು ಪತ್ರಗಳ ಸ್ವಾಧೀನದಲ್ಲಿ ಎಚ್ಚರಿಕೆಯಿಂದಿರಿ.
ತುಲಾ :-
ಅದೃಷ್ಟ ಹಾಗೂ ಉಲ್ಲಾಸದಾಯಕ ದಿನವು ನಿಮ್ಮದಾಗಲಿದೆ ಎಂದು ಗಣೇಶ ಶಕುನ ನುಡಿಯುತ್ತಾರೆ. ಒಡಹುಟ್ಟಿದವರೊಂದಿಗಿನ ಸಂಬಂಧ, ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣದ ಯೋಜನೆಗಳು, ಹಣಕಾಸು ವಿಚಾರಗಳಲ್ಲಿನ ಅದೃಷ್ಟ ಮತ್ತು ಹೊಸ ಯೋಜನೆಗಳನ್ನು ಪ್ರಾರಂಭಿಸುವ ವಿಚಾರದಲ್ಲಿ ಗ್ರಹಗತಿಗಳು ಅನುಕೂಲಕರ ಹಾಗೂ ಪ್ರೋತ್ಸಾಹಕ ಸ್ಥಿತಿಯಲ್ಲಿರುತ್ತದೆ. ವಿದೇಶದಿಂದ ಶುಭಸುದ್ದಿ ಪಡೆಯುವಿರಿ ಮತ್ತು ಲಾಭದಾಯಕ ಯೋಜನೆಗಳಲ್ಲಿ ಬಂಡವಾಳ ಹೂಡುವಿರಿ. ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿಮ್ಮ ಸಹೋದರರೊಂದಿಗೆ ಲವಲವಿಕೆಯ ಚರ್ಚೆಯಲ್ಲಿ ಭಾಗವಹಿಸುವಿರಿ. ಪ್ರಾಯೋಗಿಕ ವಿಚಾರಗಳು ನಿಮ್ಮನ್ನ ಸಣ್ಣ ಪ್ರಮಾಣದ ಪ್ರಯಾಣಕ್ಕೆ ಪ್ರಚೋದಿಸುತ್ತವೆ ಆದರೆ ಕೊನೆಯಲ್ಲಿ ಎಲ್ಲವೂ ಫಲಪ್ರದವಾಗಿರುತ್ತದೆ. ನೀವು ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಆನಂದಿಸುವಿರಿ.
ವೃಶ್ಚಿಕ :-
ನಿಮ್ಮ ಮನೆಯಲ್ಲಿನ ಸಾಮರಸ್ಯವನ್ನು ಕಾಯ್ದುಕೊಳ್ಳಬೇಕಾದರೆ ನಿಮ್ಮ ನಾಲಗೆಯ ಮೇಲೆ ಹಿಡಿತ ಸಾಧಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನಿಮ್ಮ ಹಠಾತ್ ವರ್ತನೆಯಿಂದ ನೀವು ಯಾರನ್ನಾದರೂ ನೋಯಿಸುವ ಸಾಧ್ಯತೆಯಿದೆ. ಆರೋಗ್ಯದ ತೊಂದರೆಗಳು ಉಂಟಾಗಬಹುದು. ಮತ್ಸರವೆಂಬ ಪೆಡಂಭೂತವು ನಿಮ್ಮ ಮೇಲೆ ಅಧಿಕಾರ ಚಲಾಯಿಸಬಹುದು. ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಂಬಂಧಿಸಿ ತೊಂದರೆಗಳನ್ನು ಎದುರಿಸಬೇಕಾದೀತು.
ಧನು :-
ಗ್ರಹಗತಿಗಳು ಅದ್ಭುತವಾಗಿ ಇರುವಂತೆ ಕಂಡುಬರುತ್ತವೆ ಮತ್ತ ಈ ದಿನವು ಕೂಡಾ ಅದೇ ರೀತಿ ಇರುತ್ತದೆ. ಲಕ್ಷ್ಮೀದೇವಿಯು ನಿಮ್ಮ ಮೇಲೆ ಅನುಗ್ರಹ ತೋರುತ್ತಾಳೆ ಮತ್ತು ನಿಮ್ಮ ಶ್ರಮದ ಫಲವನ್ನು ಆನಂದಿಸಿ. ಇದು ನಿಮ್ಮ ವೃತ್ತಿ ಹಾಗೂ ಸಾಮಾಜಿಕ ವಲಯದಲ್ಲಿ ನಿಮ್ಮ ಸ್ಥಾನವನ್ನು ವೃದ್ಧಿಸುತ್ತದೆ. ಸಂತೋಷವಾಗಿರಿ ಮತ್ತು ಇದನ್ನು ನಿಮ್ಮ ಕುಟುಂಬ ಸದಸ್ಯರು ಹಾಗೂ ನಿಕಟ ಸಂಬಂಧಿಗಳೊಂದಿಗೆ ಹಂಚಿಕೊಳ್ಳಿ. ಇಂದು ನೀವು ಪಡೆಯುವ ಅನುಕೂಲಕರ ಆರೋಗ್ಯ, ಉಲ್ಲಾಸಕರ ಮನಸ್ಸು ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಪ್ರವಾಸಿ ತಾಣಗಳಿಗೆ ತೆರಳಲು ಪ್ರಚೋದಿಸುತ್ತದೆ.
ಮಕರ :-
ತಾಳ್ಮೆಯನ್ನು ಕಳೆದುಕೊಳ್ಳುವ ಕುರಿತಂತೆ ಗಣೇಶ ಇಂದು ನಿಮಗೆ ಎಚ್ಚರಿಕೆ ನೀಡುತ್ತಾರೆ. ದಿನದ ಹೆಚ್ಚಿನ ಭಾಗದಲ್ಲಿ ಇಂದು ನೀವು ಒತ್ತಡ ಹಾಗೂ ಅನ್ಯಮನಸ್ಕರಾಗಿರಬಹುದು ಮತ್ತು ಇದು ತಳಮಳ ಹಾಗೂ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ನಿಮ್ಮ ಪ್ರೀತಿಪಾತ್ರರೊಂದಿಗಿನ ಕ್ಷುಲ್ಲಕ ಕಾರಣಕ್ಕಾಗಿ ನಡೆವ ನಿರುಪಯುಕ್ತ ಜಗಳವು ನ್ಯಾಯಾಲಯದ ಮೆಟ್ಟಿಲು ಹತ್ತಲಿದೆ ಅಥವಾ ಸಾರ್ವಜನಿಕ ನಿಂದನೆಗೆ ಒಳಗಾಗಲಿದೆ ಇದು ನಿಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸಲಿದೆ. ಆದರೂ, ಧೈರ್ಯಗೆಡಬೇಡಿ. ಇವೆಲ್ಲವೂ ಜೀವನದ ಅವಿಭಾಜ್ಯ ಅಂಗವಾಗಿದೆ ಕೆಲವೊಮ್ಮೆ ನೀವು ಪ್ರವಾಹದ ದಿಕ್ಕಿನಲ್ಲಿ ಸಾಗುತ್ತಿದ್ದೀರಿ ಅನಿಸಿದರೂ, ಅಲೆಗಳೊಂದಿಗೆ ಸಾಗುವುದು ಉತ್ತಮ.
ಕುಂಭ :-
ನಿಮ್ಮ ನಕ್ಷೆಯಲ್ಲಿರುವ ಅದ್ಭುತ ಗ್ರಹಗತಿಯು ಸಮರೂಪದ ಫಲಿತಾಂಶವನ್ನು ನೀಡುತ್ತದೆ ಮತ್ತು ಇಂದು ನಿಮಗೆ ಅದ್ಭುತ ಪ್ರತಿಫಲ ಮತ್ತು ಉಡುಗೊರೆಗಳು ಸಿಗಲಿವೆ. ನೀವು ಸಂತೋಷ ಹಾಗೂ ಖುಷಿಯಿಂದ ಇರುತ್ತೀರಿ ಮತ್ತು ಇದನ್ನು ನಿಮ್ಮ ಮಕ್ಕಳು ಹಾಗೂ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುತ್ತೀರಿ.ಯಾವುದೇ ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಅಥವಾ ವ್ಯವಹಾರ ಮತ್ತು ವ್ಯಾಪಾರದಲ್ಲಿರುವ ವ್ಯಕ್ತಿಗಳು ತಡೆಯಾಗಿರುವ ಯೋಜನೆಗಳನ್ನು ಪುನಶ್ಚೇತನಗೊಳಿಸಲು ತುಂಬಾ ಅದೃಷ್ಟದ ದಿನವನ್ನು ಗಣೇಶ ದಯಪಾಲಿಸುತ್ತಾರೆ. ನಿಮ್ಮ ಉತ್ಪಾದಕತೆ ಹೆಚ್ಚುತ್ತದೆ ಮತ್ತು ನೀವು ಸಮಾಜದಲ್ಲಿ ಲಾಭ ಹಾಗೂ ಗೌರವ ಗಳಿಸುತ್ತೀರಿ. ಪ್ರಯಾಣವೂ ಅನುಕೂಲಕರವಾಗಿರುತ್ತದೆ.
ಮೀನ :-
ಗಣೇಶ ಇಂದು ವಿಫುಲ ಅನುಗ್ರಹವನ್ನು ತೋರುತ್ತಾರೆ ಮತ್ತು ನಿಮಗೆ ಅದೃಷ್ಟದಾಯಕ ದಿನವನ್ನು ನೀಡುತ್ತಾರೆ.ಕುಟುಂಬ, ಮನಸ್ಸು ಅಥವಾ ಕಾರ್ಯ ಯಾವುದರಲ್ಲೇ ಇರಬಹುದು ನಿರಂತರ ಮತ್ತು ಸುಲಭವಾಗಿ ಬರುವ ಲಾಭಗಳು ನಿಮ್ಮನ್ನು ಸಂತಸದಲ್ಲಿರಿಸಲಿದೆ. ಕಾರ್ಯಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಸಿಗುವ ಪ್ರಶಂಸೆಯು ನಿಮ್ಮನ್ನು ಹರ್ಷಗೊಳಿಸುತ್ತದೆ. ನೀವು ಆನಂದದಿಂದಿರುತ್ತೀರಿ ಮತ್ತು ನಿಮ್ಮ ಕುಟುಂಬ ಸದಸ್ಯರು ಹಾಗೂ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂವಾದವನ್ನು ಹೊಂದುತ್ತೀರಿ. ನಿಮ್ಮ ಹಿರಿಯರೊಂದಿಗಿನ ಮತ್ತು ನಿಮ್ಮ ತಂದೆಯೊಂದಿಗಿನ ಸಂಬಂಧಗಳು ವೃದ್ಧಿಯಾಗಲಿವೆ ಮತ್ತು ಫಲಪ್ರದವಾಗಲಿದೆ. ಒಮ್ಮೆ ನೀಡಿರುವ ಹಣವು ಸುಲಭವಾಗಿ ಹಿಂತಿರುಗಲಿದೆ.