ಪ್ರೀತಿಸಿ ಮದ್ವೆಯಾಗಿದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ : ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ

Spread the love

ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪತ್ನಿಯ (wife) ಕತ್ತು ಹಿಸುಕಿ ಪತಿ ಕೊಲೆ (murder) ಮಾಡಿರುವಂತಹ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಪಂಡರಹಳ್ಳಿ ಕ್ಯಾಂಪ್ನಲ್ಲಿ ನಡೆದಿದೆ. ಜ.11ರಂದು ಮನೆಯಲ್ಲಿ ಉಸಿರುಗಟ್ಟಿಸಿ ಚಂದನಾಬಾಯಿ ಅನ್ನು ಪತಿ ಗೋಪಿ ಕೊಲೆ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಹೊಳೆಹೊನ್ನೂರು ಪೊಲೀಸರ ತನಿಖೆ ವೇಳೆ ಗೋಪಿ ಸಿಕ್ಕಿಬಿದಿದ್ದು, ಇದೀಗ ಆತನ ಬಂಧನವಾಗಿದೆ.

ನಡೆದದ್ದೇನು?

ಡಿ.ಬಿ.ಹಳ್ಳಿಯ ಲಂಬಾಣಿ ಸಮುದಾಯದ ಚಂದನಾಬಾಯಿ ಮತ್ತು ಪಂಡರಹಳ್ಳಿಯ ಬೋವಿ ಸಮಾಜದ ಗೋಪಿ ಪರಸ್ಪರ ಬೇರೆ ಜಾತಿಯವರಾಗಿದ್ದು, ಇಬ್ಬರು ಪ್ರೀತಿಸಿ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದರು. ಕೆಲವು ದಿನ ತಲೆಮರೆಸಿಕೊಂಡಿದ್ದರು. ಬಳಿಕ ವಾಪಸ್ ಊರಿಗೆ ಬಂದು ಸಂಸಾರ ನಡೆಸಿದ್ದರು. ಇವರ ಪ್ರೀತಿ ಸಂಕೇತಕ್ಕೆ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಈ ನಡುವೆ ಮತ್ತೊಂದು ಯುವತಿಯ ಜೊತೆ ಗೋಪಿಗೆ ಲವ್ ಆಗಿದೆ. ಆ ಯುವತಿಯ ಜೊತೆ ಮದುವೆಗೆ ಮುಂದಾಗಿದ್ದ. ಆದರೆ ಪತ್ನಿ ಚಂದನಾಬಾಯಿ ಈ ಎರಡನೇ ಮದುವೆಗೆ ವಿರೋಧಿಸಿದ್ದಾರೆ. ವಿರೋಧಿಸಿದ ಪತ್ನಿಯನ್ನು ತನ್ನ ಮನೆಯಲ್ಲೇ ಕುತ್ತಿಗೆ ಹಿಸುಕಿ ಗೋಪಿ ಹತ್ಯೆ ಮಾಡಿದ್ದಾನೆ. ಹತ್ಯೆ ಮಾಡಿದಲ್ಲದೇ ಕೊಲೆಗೂ ತನಗೂ ಸಂಬಂಧವಿಲ್ಲದಂತೆ ಹೈಡ್ರಾಮಾ ಮಾಡಿದ್ದಾನೆ. ಆದರೆ ಹೊಳೆಹೊನ್ನೂರು ಪೊಲೀಸರ ತನಿಖೆ ವೇಳೆ ಅಸಲಿ ಬಣ್ಣ ಬಯಲಾಗಿದೆ. ಇದೀಗ ಪೊಲೀಸರು ಗೋಪಿಯನ್ನು ಬಂಧಿಸಿದ್ದಾರೆ. ಗೋಪಿ ವಿಕೃತಿ ಪ್ರೀತಿಗೆ ಇಬ್ಬರು ಗಂಡು ಮಕ್ಕಳು ಅನಾಥವಾಗಿವೆ.

ಪ್ರತ್ಯೇಕ ಘಟನೆ :- ಬೈಕ್ ಸವಾರ ಸಾವು

ನಿಯಂತ್ರಣ ತಪ್ಪಿ ಡಿವೈಡರ್ಗೆ ಬೈಕ್ ಸವಾರ ಡಿಕ್ಕಿ ಹೊಡೆದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಟೌನ್ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ. ಹೊಸೂರಿನ ಆರೋಗ್ಯ ರಾಜ್(26) ಮೃತ ವ್ಯಕ್ತಿ.

ಇಂದು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮೃತ ಆರೋಗ್ಯ ರಾಜ್ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

WhatsApp Group Join Now

Spread the love

Leave a Reply